ತಲಪಾಡಿ ಟೋಲ್ ಗೇಟ್ ನ ಮೋಸದ ಜಾಲ ಬಯಲು

By: ಮಂಗಳೂರು ಪ್ರತಿನಿಧಿ
Subscribe to Oneindia Kannada
ಮಂಗಳೂರು, ಫೆಬ್ರವರಿ. 15 : ಈಗಾಗಲೇ ಹಲವಾರು ಬಾರಿ ತಲಪಾಡಿ ಟೋಲ್ ಗೇಟ್ ಬಳಿ ಟೋಲ್ ಸಂಗ್ರಹದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆದರ ನಡುವೆಯೂ ಟೋಲ್ ಗೇಟ್‌ನ ಸಿಬ್ಬಂದಿ ಹಳೆಯ ಟಿಕೆಟ್ ನೀಡಿ ಹಣ ಪಡೆದುಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ಇನ್ನಷ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು ಬೊಕ್ಕಪಟ್ಣ ನಿವಾಸಿ ಝೈನುಲ್ ಅಬಿದೀನ್ ಎಂಬವರು ಕುಟುಂಬ ಸಮೇತರಾಗಿ ಕೇರಳಕಟ್ಟೆ ತೆರಳುವ ಸಂದರ್ಭದಲ್ಲಿ ಮಂಗಳವಾರ ಮಧ್ಯಾಹ್ನ 1.20ರ ವೇಳೆ ತಲಪಾಡಿ ಟೋಲ್ ಗೇಟಿನಲ್ಲಿ 35 ರು. ನೀಡಿ ಟಿಕೆಟ್ ನ್ನು ಪಡೆದುಕೊಂಡಿದ್ದರು.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]

Mangaluru Talapady tollgate used ticket issued to car owner

ಆದರೆ, ಸ್ವಲ್ಪ ದೂರ ಚಲಿಸಿ ಅಬಿದೀನ್ ಅವರು ಟಿಕೆಟ್ ಗಮನಿಸಿದಾಗ ಅದರಲ್ಲಿ ಬೇರೆ ವಾಹನ ನೋಂದಾಣೆ ಸಂಖ್ಯೆ ಮತ್ತು ಬೆಳಿಗ್ಗೆ 8.30ರ ವೇಳೆಗೆ ತೆರಳಿದ ಸಮಯ ಎಂದು ಟಿಕೆಟ್ ನಲ್ಲಿ ನಮೂದಿಸಲಾಗಿದೆ.

ಇದನ್ನು ಕಂಡು ವಾಪಸ್ಸು ಕಾರನ್ನು ತಿರುಗಿಸಿ ಝೈನುಲ್ ಅವರು ಈ ಬಗ್ಗೆ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆತ ಕ್ಷಮೆಯಾಚಿಸಿದ್ದಾನೆ. ಆದರೆ, ವ್ಯವಸ್ಥಾಪಕರ ಬಳಿ ದೂರು ನೀಡಲು ಮುಂದಾದಾಗ ಸೂಕ್ತ ಸ್ಪಂದನೆ ದೊರೆತಿರಲಿಲ್ಲ ಎನ್ನುವ ಆರೋಪವನ್ನು ಆಬಿದೀನ್ ಮಾಡಿದ್ದಾರೆ.

ಘಟನೆ ವಿವರ: ಟೋಲ್ ಬಳಿ ಆಬಿದೀನ್ ಕಾರು ಬಂದು ಹೋಗಲು ಮತ್ತು ಬರಲು ಟಿಕೆಟ್ ನ್ನು ಕೇಳಿದ್ದನು. ಅದರಂತೆ ಟೋಲ್ ಸಿಬ್ಬಂದಿ 50 ರೂ. ಟಿಕೆಟ್ ನ್ನು ನೀಡಿದ್ದಾನೆ.

ಆ ಕೂಡಲೇ ಆಬಿದೀನ್ ತನಗೆ ಹೋಗುವ ಟಿಕೆಟ್ ಮಾತ್ರ ಸಾಕೆಂದು ಸೂಚಿಸಿದ್ದು, ಇದರಿಂದ ಮತ್ತೆ ಮುದ್ರಿಸಿದಲ್ಲಿ ನಷ್ಟವಾಗಬಹುದು ಎನ್ನುವ ಹೆದರಿಕೆಯಿಂದ ಸಿಬ್ಬಂದಿ ಹಿಂದೆ ಮುದ್ರಿಸಿಟ್ಟಿದಂತಹ 35 ರು ಟಿಕೆಟ್ ನ್ನು ಆಬಿದೀನ್ ಗೆ ನೀಡಿದ್ದಾನೆ. ಇದರಿಂದ ಯಡವಟ್ಟು ಉಂಟಾಗಿದೆ ಎಂದು ಟೋಲ್ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A person who drove his car through Talapady tollgate, has complained that the staff at the gate issued him an already used ticket in exchange for money.
Please Wait while comments are loading...