ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಸರ್ಫರ್ ತನ್ವಿ ಜಗದೀಶ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 19: ದೇಶದ ಖ್ಯಾತ ಸರ್ಫರ್ ಹಾಗೂ ಸ್ಟ್ಯಾಂಡ್ ಅಪ್ ಪೆಡ್ಲರ್ ಮಂಗಳೂರಿನ ತನ್ವಿ ಜಗದೀಶ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊ ಸರ್ಫ್ ಕನೆಕ್ಟ್ ಸಂಘಟನೆ ಕ್ರೀಡಾ ಸಾಧಕರಿಗೆ ನೀಡುವ ಗ್ರೋಮ್ ಆಫ್ ದಿ ಇಯರ್ ಪ್ರಶಸ್ತಿಗೆ ತನ್ವಿ ಜಗದೀಶ್ ಆಯ್ಕೆಯಾಗಿದ್ದಾರೆ .

Mangaluru Surfer Tanvi Jagadish receives International Grom of the Year Award

ಮಂಗಳೂರು ಹೊರವಲಯದ ಸಸಿಹಿತ್ಲು ಸಮೀಪದ ಕೊಳಚಿ ಕಂಬಳ ನಿವಾಸಿ ತನ್ವಿ ಜಗದೀಶ್ ಮುಂದಿನ ತಿಂಗಳು ಅಮೆರಿಕಕ್ಕೆ ತೆರಳಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ . ಕಳೆದ ಏಪ್ರಿಲ್ ನಲ್ಲಿ ಅಮೆರಿಕದ ನಾರ್ತ್ ಕರೋಲಿನಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ತನ್ವಿ ಭಾರತವನ್ನು ಪ್ರತಿನಿಧಿಸಿದ್ದರು . ಈ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ತನ್ವಿ ಜಗದೀಶ್ ತೃತೀಯ ಸ್ಥಾನ ಪಡೆದಿದ್ದರು .

Mangaluru Surfer Tanvi Jagadish receives International Grom of the Year Award

ತನ್ವಿ ಜಗದೀಶ್ ಮೂಲ್ಕಿ ಮಂತ್ರ ಸರ್ಫಿಂಗ್ ಕ್ಲಬ್ ನ ಸದಸ್ಯೆಯಾಗಿದ್ದಾರೆ. ತನ್ವಿ ಚಿಕ್ಕಂದಿನಿಂದಲೇ ಸರ್ಫಿಂಗ್ ನತ್ತ ಆಸಕ್ತಿ ಹೊಂದಿದ್ದರು. ಕೊಳಚಿ ಕಂಬಳದ ತನ್ನ ಅಜ್ಜನ ಮನೆಯ ಪಕ್ಕದಲ್ಲಿರುವ ಮಂತ್ರ ಸರ್ಫಿಂಗ್ ಕ್ಲಬ್ ನಲ್ಲಿ ತರಬೇತಿ ಪಡೆದಿದ್ದಾರೆ . ತನ್ವಿ ಈಗಾಗಲೇ ರಾಷ್ಟ್ರೀಯ , ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ .

English summary
Mangaluru Surfer Tanvi Jagadish, aged 17, a well-known female stand up paddler (SUP), has bagged the international award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X