ಏಷ್ಯನ್ ಪೆಸಿಫಿಕ್ ಸಮ್ಮೇಳನಕ್ಕೆ ಮಂಗಳೂರಿನ ವಿದ್ಯಾರ್ಥಿ ಆಯ್ಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 04 : ಜಪಾನ್‌ನಲ್ಲಿ ಜುಲೈ 10ರಿಂದ ನಡೆಯುವ ಏಷ್ಯನ್ ಫೆಸಿಫಿಕ್ ಮಕ್ಕಳ ಸಮ್ಮೇಳನಕ್ಕೆ ಮಂಗಳೂರಿನ ಅನೂಪ್ ಎ. ರಾವ್ ಆಯ್ಕೆಯಾಗಿದ್ದಾರೆ. ಸಮ್ಮೇಳನದಲ್ಲಿ ಭಾರತವನ್ನು ಒಟ್ಟು ಆರು ಮಕ್ಕಳು ಪ್ರತಿನಿಧಿಸುತ್ತಿದ್ದು, ಅದರಲ್ಲಿ ಅನೂಪ್ ಒಬ್ಬರಾಗಿದ್ದಾರೆ.

ಅನೂಪ್ ಎ.ಕುಮಾರ್ (11) ಸೆಂಟ್ ಅಲೋಶಿಯಸ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ. ಅನಿಲ್ ಕುಮಾರ್ ಮತ್ತು ಶೈಲಜರಾವ್ ದಂಪತಿಯ ಪುತ್ರ. ಭಾರತದ ಪ್ರತಿನಿಧಿಗಳ ತಂಡವನ್ನು ಮೀನಾಕ್ಷಿ ಭಟ್ನಾಗರ್ ಅವರು ಮುನ್ನಡೆಸಲಿದ್ದಾರೆ. [ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ]

anup a rao

ಜುಲೈ 10 ರಿಂದ 24 ರವರೆಗೆ ಜಪಾನ್‌ನಲ್ಲಿ 28ನೇ ಏಷ್ಯನ್ ಪೆಸಿಫಿಕ್ ಮಕ್ಕಳ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಅನೂಪ್ ಆಯ್ಕೆಯಾಗಿದ್ದಾರೆ. ಮಕ್ಕಳಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಭಾವನೆಯನ್ನು ಉತ್ತೇಜಿಸುವುದು ಸಮ್ಮೇಳನದ ಉದ್ದೇಶ. 44 ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. [ಗಿನ್ನಿಸ್ ದಾಖಲೆ ಮಾಡಿದ ಮಂಗಳೂರಿನ ಯುವಕ]

ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸ ಹೊಂದಿರುವ ಅನೂಪ್ ಇದುವರೆಗೂ 1000 ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಯುವ ಜಾದೂಗಾರ ಸಹ ಆಗಿದ್ದಾರೆ. ವರ್ಷಗಳ ಕಾಲ ನಡೆದ ಆಯ್ಕೆ ಪ್ರಕ್ರಿಯೆಲ್ಲಿ ದೇಶದಲ್ಲಿ 6 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. [ಮಿಸಿಸಿಪ್ಪಿಯ ರಸ್ತೆಗೆ ಮಣಿಪಾಲದ ವಿದ್ಯಾರ್ಥಿ ಹೆಸರು]

anup

ಜೂನಿಯರ್ ಚೇಂಬರ್ ಇಂಡಿಯಾ (ಜೆಸಿಐ) ಸಮ್ಮೇಳನಕ್ಕೆ ಜೂನಿಯರ್ ಅಂಬಾಸಿಡರ್ ಆಯ್ಕೆಮಾಡುತ್ತದೆ. ಈ ಬಾರಿಯ ಸಮ್ಮೇಳನಕ್ಕೆ ಆನೂಪ್ ಅವರು, ಜೂನಿಯರ್ ಅಂಬಾಸಿಡರ್ ಆಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru st Aloysius school 7th standard student Anup A Rao selected as Junior Ambassador for 28th Annual Asian-Pacific Children's Convention (APCC). Convention will be held in Japan from July 10 to 24, 2016.
Please Wait while comments are loading...