ಮಂಗಳೂರಿನ ಓದುತ್ತಿದ್ದ ವಿದ್ಯಾರ್ಥಿ ಲಡಾಖ್ ನಲ್ಲಿ ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 28: ದೇರಳ ಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಇಂಟರ್ನ್ ಶಿಪ್ ಮುಗಿಸಿದ ವಿದ್ಯಾರ್ಥಿಯೊಬ್ಬ ಲಡಾಖ್ ಪ್ರವಾಸಕ್ಕೆ ಹೋಗಿದ್ದ ವೇಳೆ ಹಠಾತ್ ಸಾವನ್ನಪ್ಪಿದ ಘಟನೆ ನಡೆದಿದೆ.

ಕೇರಳ ಅಲಪುಳದ ಮೊಹಮ್ಮದ್ ಇರ್ಷಾದ್(24) ಮೃತಪಟ್ಟವರು. ಮೂರು ದಿನಗಳ ಹಿಂದೆ ತನ್ನ ಮೂವರು ಸ್ನೇಹಿತರ ಜತೆಗೆ ಪ್ರವಾಸಕ್ಕೆ ತೆರಳಿದ್ದ ಇರ್ಷಾದ್, ಅಲ್ಲಿ ಸೆ. 26 ರಂದು ಉಸಿರಾಟದ ತೊಂದರೆಗೊಳಗಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ದೇರಳಕಟ್ಟೆಯಲ್ಲಿರುವ ಆತನ ಜ್ಯೂನಿಯರ್ ವಿದ್ಯಾರ್ಥಿ ಮಹಮ್ಮದ್ ನೂಮನ್ ಎಂಬವರಿಗೆ ಇರ್ಷಾದ್ ಸ್ನೇಹಿತ ಕರೆ ಮಾಡಿ ಮಾಹಿತಿ ನೀಡಿದ್ದಾನೆ.[ಮನೆಯಲ್ಲಿ ವೇಶ್ಯಾವಾಟಿಕೆ: ಮೂವರು ಆರೋಪಿಗಳು ಅಂದರ್]

Mangaluru student died in Ladakh

ಉಸಿರಾಟದ ತೊಂದರೆಗೆ ಒಳಾಗಾದಾಗ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.

ಇನ್ನು ಉಳ್ಳಾಲದ ಕೋಟೆಕಾರು ಬಳಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಉಳ್ಳಾಲ ಪರಿಬೈಲ್ ನಿವಾಸಿ ಮುಹಮ್ಮದ್ ಅಫ್ತಾರ್ (22) ಮೃತಯುವಕ.[ಲಿಂಗ ಪರಿವರ್ತನೆ ದೌರ್ಜನ್ಯಕ್ಕೆ ನೊಂದ ಬಾಲಕನಿಗೆ ನೆರವು]

Mangaluru student died in Ladakh

ಮೂಲಗಳ ಪ್ರಕಾರ ದ್ವಿಚಕ್ರ ವಾಹನ ಸವಾರ ಮಾರೂರು ಕಡೆಯಿಂದ ಬೀರಿಗೆ ತನ್ನ ಹೋಂಡಾ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪರಿಣಾಮ ಮುಹಮ್ಮದ್ ಅಫ್ತಾರ್ ಮೃತಪಟ್ಟಿದ್ದಾರೆ.

ಅಫ್ತಾರ್ ಕೆಲಸದ ನಿಮಿತ್ತ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru student, Mohammad Irshad aged 24 died in Ladakh. After his internship completion went to Ladakh with his friends. There he had respiratory problem, and dead.
Please Wait while comments are loading...