ತಲೆ ಮೇಲೆ ಟಿಪ್ಪರ್ ಹರಿದು ಮಂಗಳೂರು ವಿದ್ಯಾರ್ಥಿ ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆ. 21: ಬೈಕ್ ಓಡಿಸುತ್ತಿದ್ದ ವಿದ್ಯಾರ್ಥಿಯ ತಲೆ ಮೇಲೆ ಟಿಪ್ಪರ್‌ವೊಂದು ಹರಿದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಗರದ ನಾಗುರಿ ಸಮೀಪ ಸಂಭವಿಸಿದೆ.

ಭಟ್ಕಳ ಮೂಲದ ಮುಹಮ್ಮದ್ ರಯಾನ್ ಮೃತ ಯುವಕ. ಈತ ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ. ಬುಧವಾರ ಸಂಜೆ ರಯಾನ್ ದ್ವಿಚಕ್ರ ವಾಹನದಲ್ಲಿ ಅಡ್ಯಾರ್‌ನಿಂದ ಮಂಗಳೂರಿಗೆ ಬರುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.[ಮಹಿಳೆ ಮುತ್ತಿಡುತ್ತಿದ್ದಳೋ ಗಾಳಿ ಊದುತ್ತಿದ್ದಳೋ ಅಪಘಾತವಂತೂ ಆಗಿದೆ]

Mangaluru Student dead in an accident

ಟಿಪ್ಪರ್‌ನ ಹಿಂಬದಿಯ ​ಚಕ್ರದಡಿಗೆ ಸಿಲುಕಿದ ರಯಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು, ಮೃತದೇಹವನ್ನು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mangaluru student, who was basically from Bhatkal dead in an accident. Tipper lorry hit the engineering student Muhammad Ryan bike on Wednesday, He died on the spot.
Please Wait while comments are loading...