ಮಂಗಳೂರು: ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಪಡೆ

Written By:
Subscribe to Oneindia Kannada

ಪಣಂಬೂರು, ಮೇ, 14: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಭಾಗ್ಯನಿಧಿ ದೋಣಿ ತಾಂತ್ರಿಕ ಕಾರಣದಿಂದ ವೈಫಲ್ಯಕ್ಕೊಳಗಾಗಿ ಮುಳುಗುತ್ತಿದ್ದ ಸಂದರ್ಭ ಅದರಲ್ಲಿದ್ದ ಎಲ್ಲಾ 6 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದೆ.

ಮೇ 12 ರಂದು ಮಲ್ಪೆ ಬಂದರಿನಿಂದ 22 ಕಿಮಿ ದೂರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ದುರಂತ ಸಂಭವಿಸಿತು. ದೋಣಿಯಲ್ಲಿದ್ದವರು ರಕ್ಷೆಣೆಗಾಗಿ ಕೋಸ್ಟ್ ಗಾರ್ಡ್ ಗೆ ಮನವಿ ಮಾಡಿದರು. ತುರ್ತು ಕಾರ್ಯಾಚರಣೆಗಿಳಿದ ಕೋಸ್ಟ್ ಗಾರ್ಡ್‌ನ ಅಮರ್ಥ್ಯ ಕಣ್ಗಾವಲು ನೌಕೆ ಶುಕ್ರವಾರ ಮಧ್ಯಾಹ್ನ ಅಪಾಯದಲ್ಲಿದ್ದ ದೋಣಿ ಹಾಗೂ ಮೀನುಗಾರರನ್ನು ಪತ್ತೆ ಹಚ್ಚಿ ರಕ್ಷಿಸಿದೆ. [ಮಂಗಳೂರು- ಮುಂಬೈ ಬಸ್ ಟಿಕೆಟ್ ದರ ಏರಿಕೆ!]

mangaluru

ಅಪಾಯದಲ್ಲಿಸದ್ದ ಮೀನುಗಾರರನ್ನು ಸುರಕ್ಷಿತವಾಗಿ ಮತ್ತೊಂದು ದೋಣಿಗೆ ಸ್ಥಳಾಂತರಿಸಲಾಯಿತು. ಜಯಶಂಕರ್ ಹಾಗೂ ಮಹಾದೇವಿ ಮೀನುಗಾರಿಕಾ ದೋಣಿಯ ಸಹಾಯದಿಂದ ಅಪಾಯಕ್ಕೀಡಾದ ದೋಣಿಯನ್ನು ಮಲ್ಪೆ ಜೆಟ್ಟಿಗೆ ಎಳೆದು ತರಲಾಯಿತು .[ಬಂಟರ ಸಂಘದ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ]

mangaluru
mangaluru

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru: Total six fishermen were rescued by the Indian coast guard team on Friday. The incident has taken place at 22 kilo meter inside the sea near Malpe.
Please Wait while comments are loading...