ನ್ಯಾಷನಲ್ ಸ್ಕೂಲ್ಸ್ ಚೆಸ್ ನಲ್ಲಿ ಮಂಗ್ಳೂರು ಹುಡುಗಿಗೆ ಚಿನ್ನ!

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 09 : ನಾಗಪುರದಲ್ಲಿ ನಡೆದ ನ್ಯಾಷನಲ್ ಸ್ಕೂಲ್ಸ್ ಚೆಸ್ ಚಾಂಪಿಯನ್ ಶಿಪ್ ನ 7 ವರ್ಷ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಡೆರಿಕ್ ಚೆಸ್ ಸ್ಕೂಲ್ ವಿದ್ಯಾರ್ಥಿ ಶ್ರೀಯಾನ ಮಲ್ಯ ಚಿನ್ನದ ಪದಕ ಗೆದ್ದಿದ್ದಾಳೆ.

ನ್ಯಾಷನಲ್ ಸ್ಕೂಲ್ಸ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆಲುವ ಮೂಲಕ ಮಲ್ಯ ಚೀನಾದಲ್ಲಿ ನಡೆಯಲಿರುವ ವಿಶ್ವ ಹಾಗು ಏಷ್ಯಾ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇನ್ನು ಶ್ರೀಯಾನ ಮಲ್ಯ ನಗರದ ಲೌರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

Mangaluru Shriyana Mallya Wins National Gold In Under 7 Girls Chess Championship

ಕಲಿಕೆಯ ಜೊತೆಗೆ ಪ್ರತಿ ದಿನ ತಪ್ಪದೆ ಆಸಕ್ತಿಯಿಂದ ಚೆಸ್ ಕ್ಲಾಸ್ ಗೆ ಹೋಗುತ್ತಿದೆ, ನನ್ನ ಗುರು ಹೇಳಿಕೊಡುತ್ತಿದ್ದ ಪ್ರತಿ ಆಟವನ್ನು ಮನೆಯಲ್ಲಿ ಹೋಗಿ ಅಭ್ಯಾಸ ಮಾಡುತ್ತಿದ್ದೆ.

Mangaluru Shriyana Mallya Wins National Gold In Under 7 Girls Chess Championship

ನನ್ನ ತಂದೆ ತಾಯಿ ನನಗೆ ಬಹಳ ಸ್ಪೂರ್ತಿ ನೀಡಿದ್ದಾರೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಶ್ರೀಯಾನ ಮಲ್ಯ ಒನ್ ಇಂಡಿಯಾದೊಂದಿಗೆ ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru emerging chess prodigy 6-year-old Shriyana Mallya has won the Gold medal in the under 7 girls category in National Schools chess Championship held at Nagpur.
Please Wait while comments are loading...