ಬೆಳಗಾವಿಯಲ್ಲಿ ಶಾರ್ಪ್ ಶೂಟರ್ಸ್, ಮಂಗಳೂರಿನ ಲಿಂಕ್ ಗಣೇಶ್ ಶೆಟ್ಟಿ ವಿಚಾರಣೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 4: ಮಂಗಳೂರಿಗೆ ಮತ್ತು ಅಂಡರ್ ವರ್ಲ್ಡ್ ಗೆ ಲಿಂಕ್ ಇದೆ. ಮಂಗಳೂರು ಭೂಗತ ಲೋಕದಲ್ಲಿ ಇಡೀ ಕರ್ನಾಟಕಕ್ಕೇ ಕ್ಯಾಪ್ಟನ್ ಎಂದು ಕುಖ್ಯಾತಿ ಪಡೆದಿದೆ. ಆದರೆ ಇದೀಗ ಬೆಚ್ಚಿ ಬೀಳಿಸುವ ವಿಷಯವೆಂದರೆ ಮಂಗಳೂರಿನ ಒಬ್ಬ ಶಾರ್ಪ್ ಶೂಟರ್ ಅನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಆರು ಶಾರ್ಪ್ ಶೂಟರ್ ಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮತ್ತೊಬ್ಬ ಶಾರ್ಪ್ ಶೂಟರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೈಕಂಪಾಡಿ ನಿವಾಸಿ ಗಣೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.[ಹಿಂಡಲಗಾ ಜೈಲಿನಿಂದ ಎಸ್ಕೇಪ್ ಪ್ಲಾನ್: ಬೆಳಗಾವಿ ಪೊಲೀಸರಿಂದ ತಪಾಸಣೆ]

ಈತ ಭೂಗತ ಪಾತಕಿ ರವಿ ಪೂಜಾರಿ ಸಹಚರನಾಗಿದ್ದು, ಬೆಳಗಾವಿಯಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಸಹಕರಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಬೆಳಗಾವಿಯಲ್ಲಿ ಬಂಧಿತರಾಗಿರುವ ಆರೋಪಿಗಳ ಮಾಹಿತಿ ಮೇರೆಗೆ ಮಂಗಳೂರಿನಲ್ಲಿ ಗಣೇಶ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಗಣೇಶ್ ಶೆಟ್ಟಿ ಉಳಿದ ಆರು ಶಾರ್ಪ್ ಶೂಟರ್ ಗಳ ಜತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

Mangaluru sharp shooter taken into police custody

ಶಾರ್ಪ್ ಶೂಟರ್ ಗಳು ಬೆಳಗಾವಿಗೆ ಬಂದಿದ್ದೇಕೆ?
ಸದ್ಯ ಬೆಳಗಾವಿಯಲ್ಲಿ ಬಂಧಿತರಾಗಿರುವ ಆರು ಶಾರ್ಪ್ ಶೂಟರ್ ಗಳು ಬೆಳಗಾವಿಗೆ ಬಂದಿದ್ದೇಕೆ ಎಂಬ ಪ್ರಶ್ನೆ ಹಿಂದೆಯೇ ಹಲವು ಅನುಮಾನಗಳಿವೆ. ಮೊದಲಿಗೆ ಬೆಳಗಾವಿ ಪೊಲೀಸರು ಆರೋಪಿಗಳು ವಿಐಪಿಗಳ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಆ ನಂತರ ಕುಖ್ಯಾತ ರೌಡಿ ದಿನೇಶ್ ಶೆಟ್ಟಿಯ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂದು ತಿಳಿಸಿದ್ದರು. ಅಸಲಿಗೆ ದಿನೇಶ್ ಶೆಟ್ಟಿ 2010ರಲ್ಲಿ ಮಂಗಳೂರಿನಲ್ಲಿ ನಡೆದ ವಕೀಲ ನೌಶಾದ್ ಖಾಸೀಮ್ ಜೀ ಹತ್ಯೆ ಆರೋಪಿಯಾಗಿದ್ದು, ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.[ಬೆಳಗಾವಿಯಲ್ಲಿ ಅಂತರ ರಾಜ್ಯ ಶಾರ್ಪ್ ಶೂಟರ್ ಗಳ ಬಂಧನ]

ಒಂದು ಮೂಲದ ಪ್ರಕಾರ ಆರು ಮಂದಿ ಶಾರ್ಪ್ ಶೂಟರ್ ಗಳು ದಿನೇಶ್ ಶೆಟ್ಟಿಯ ಹತ್ಯೆಗೆ ಬಂದಿದ್ದರು ಎನ್ನಲಾಗುತ್ತಿದೆ. ಆದರೆ ಇನ್ನೊಂದು ಮೂಲ ಆರೋಪಿಗಳು ದಿನೇಶ್ ಶೆಟ್ಟಿಯನ್ನು ಜೈಲಿನಿಂದ ಎಸ್ಕೇಪ್ ಮಾಡಿಸಲು ಬಂದಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಬೆಳಗಾವಿ ಪೊಲೀಸ್ ಅಧಿಕಾರಿಗಳ ತಂಡ ಹಿಂಡಲಗಾ ಜೈಲಿಗೆ ಭೇಟಿ ಕೊಟ್ಟು, ದಿನೇಶ್ ಶೆಟ್ಟಿ ವಿಚಾರಣೆ ನಡೆಸಿದೆ. ಬಂಧಿತ ಆರು ಮಂದಿಯಲ್ಲಿ ಮೂವರು ಈ ಹಿಂದೆ ಮೈಸೂರು ಜೈಲಿನಲ್ಲಿದ್ದು, ಆಗ ದಿನೇಶ್ ಶೆಟ್ಟಿ ಜತೆ ಆಪ್ತರಾಗಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sharp shooter Ganesh shetty taken into custody by Mangaluru police, suspecting his link with recently arrested sharp shooters in Belagavi.
Please Wait while comments are loading...