ಮಂಗಳೂರು: ಧರಣಿ ನಿರತರ ಬಂಧನ; ಅನಿರ್ಧಿಷ್ಟಾವಧಿ ಜಿಲ್ಲಾ ಬಂದ್‌ಗೆ ಕರೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 10: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಹಾಗೂ ನೇತ್ರಾವತಿ ಉಳಿವಿಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಉಪವಾಸ ನಿರತರಾಗಿದ್ದವರನ್ನು ಬಂಧಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

 Mangaluru: ‘Save Netravati’ protesters call for Dakshina Kannada bundh, after Police detained them


ಪೊಲೀಸರು ಅಮರಣಾಂತ ಉಪವಾಸ ನಿರತರನ್ನು ಬಂಧಿಸುತ್ತಿದ್ದಂತೆ ಅನಿರ್ಧಿಷ್ಟಾವಧಿ ದಕ್ಷಿಣ ಕನ್ನಡ ಜಿಲ್ಲಾ ಬಂದಿಗೆ ಕರೆ ನೀಡಲಾಗಿದೆ.

ಪೊಲೀಸರು ನೀಡಿದ್ದ ಅನುಮತಿ ಅವಧಿಯನ್ನು ಮೀರಿ ಧರಣಿ ನಡೆಸಿದ್ದರಿಂದ ಪೊಲೀಸರು ಧರಣಿ ನಿರತರನ್ನ ಬಂಧಿಸಿದ್ದಾರೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಗೆ ಇಂದು ಅಪರಾಹ್ನ 2 ಗಂಟೆಯವರೆಗೆ ಮಾತ್ರ ಧರಣಿ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಆದರೆ ಬಳಿಕವೂ ಧರಣಿ ನಿರತರು ಸ್ಥಳ ತೆರವುಗೊಳಿಸದ ಕಾರಣ ಸಂಸದ ನಳಿನ್ ಕುಮಾರ್ ಸಹಿತ ಹಲವರನ್ನು ಪೊಲೀಸರು ಬಂಧಿಸಿದರು.

 Mangaluru: ‘Save Netravati’ protesters call for Dakshina Kannada bundh, after Police detained them

ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಸಂರಕ್ಷಣೆಗಾಗಿ ಹಾಗೂ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ಇಂದು ಬೆಳಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯೆದುರು ಅನಿರ್ಧಿಷ್ಟಾವಧಿ ಉಪವಾಸ ಧರಣಿಗೆ ಚಾಲನೆ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Police detained Mangaluru Mp Nalin Kumar Kateel and others who started hunger strike on Friday morning here in Mangalaru, in front of DC office, with the demand to stop Ettinahole project. Thousands of public, religious leaders and other leaders are participated in this strike.
Please Wait while comments are loading...