ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನೋಟ್ಸ್ ಆ್ಯಪ್ ತಯಾರು

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 14 : ನಿಟ್ಟೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ 5ನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ಇಂಜಿನಿಯರಿಂಗ್ ನೋಟ್ಸ್ ಗಳ ಮೊಬೈಲ್ ಆಪ್ ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನು ಈ ಮೊಬೈಲ್ ಆಪ್ ನ್ನು ಸೆಪ್ಟೆಂಬರ್ 16ರಂದು ಸಂಜೆ 4 ಗಂಟೆಗೆ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ಈ ಆಫ್ ಅನಾವರಣಗೊಳಿಸಲಾಗುತ್ತಿದೆ.

ಮೊಬೈಲ್ ಆಪ್‌ ಮೂಲಕ ಬೆಳೆ ಕಟಾವು ಪ್ರಯೋಗ: ರೋಹಿಣಿ ಸಿಂಧೂರಿ

'ಇಂಜಿನೆರಾ'ಹೆಸರಿನಲ್ಲಿ ಈ ಮೊಬೈಲ್ ಆಪನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಬಿಡುಗಡೆಗೊಳಿಸಲಿರುವರು.

Mangaluru's Nitte mechanical engineering students design Notes app for students

ಇಂಜಿನಿಯರಿಂಗ್ ನೋಟ್ಸ್ ನ ಈ ಮೊಬೈಲ್ ಆಪ್ ಉಚಿತವಾಗಿದ್ದು, ಅಂಡ್ರಾಯ್ಡ್ ಫೋನ್‌ನ ಗೂಗಲ್ ಪ್ಲೇಸ್ಟೋರ್ ನಲ್ಲಿ ಒಂದು ಬಾರಿ ಡೌನ್‌ಲೋಡ್ ಮಾಡಿಕೊಂಡಲ್ಲಿ ಬಳಿಕ ಇದನ್ನು ತೆರೆಯಲು ಡಾಟಾದ ಅಗತ್ಯವಿರುವುದಿಲ್ಲ.

ಜನವರಿಯಿಂದ ಈ ಆಪ್ ತಯಾರಿಯನ್ನು ಆರಂಭಿಸಿದ್ದು, ಒಂಬತ್ತು ಮಂದಿ ದಿನವೊಂದಕ್ಕೆ ತಲಾ 4 ಗಂಟೆಗಳಂತೆ ಕಾರ್ಯನಿರ್ವಹಿಸಿದ್ದಾರೆ. ಮೊಬೈಲ್ ಆಪ್ ನಲ್ಲಿ ವಾಣಿಜ್ಯ ಜಾಹೀರಾತುಗಳ ಹೊರತಾಗಿ ಇದನ್ನು ಉಚಿತವಾಗಿ ನಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ.

ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ವಿಭಾಗದ ನೋಟ್ಸ್ ಗಳು ಈ ಆಪ್ ಲಭ್ಯವಾಗಲಿವೆ.

ಪ್ರಸ್ತುತ ನಿಟ್ಟೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನ 5ನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಮುಹಮ್ಮದ್ ಮುಬೀನ್ ಶೇಖ್ ಹಾಗೂ ಪ್ರಜ್ವಲ್ ಪಿ, ರಾಹುಲ್ ಆರ್. ಪೈ, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್‌ನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಪೂಜಾ ಶೆಟ್ಟಿ, ವಿಶ್ವುಲ್ ಡಿಸೈನರ್- ಇಲ್ಯುಸ್ಟ್ರೇಟರ್-ಟೈಪೋಗ್ರಾಫರ್- ಫೋಟೋಗ್ರಾಫರ್- ಲೇಖಕಿಯೂ ಆಗಿರುವ ದೀಪ್ತಿ ಪೈ, ಬೆಂಗಳೂರಿನ ಬಿಎಂಎಸ್ ಸಿಇ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ನ 5ನೇ ಸೆಮಿಸ್ಟರ್ ವಿದ್ಯಾರ್ಥಿ ಪ್ರಜ್ವಲ್ ಲಿಂಗದ್, ಅದೇ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ 5ನೆ ಸೆಮಿಸ್ಟರ್ ವಿದ್ಯಾರ್ಥಿನಿ ಶೀತಲ್ ಎಚ್.ಎಂ., ಬೆಂಗಳೂರಿನ ಬಿಎಂಎಸ್ ಕಾಲೇಜನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನ 3ನೆ ಸೆಮಿಸ್ಟರ್ ವಿದ್ಯಾರ್ಥಿನಿ ಅರ್ಪಿತಾ ಅಂಕಲಗಿ, ನಿಟ್ಟೆಯ ಇನ್ಫಾರ್ಮೇಶನ್ ಸಯನ್ಸ್ ಇಂಜಿನಿಯರಿಂಗ್‌ನ 3ನೇ ವರ್ಷದ ವಿದ್ಯಾರ್ಥಿನಿ ಸಾಧನಾ ಮಯ್ಯ ಸೇರಿ ಈ ಮೊಬೈಲ್ ಆಪ್ ನ್ನು ಎಂಟು ತಿಂಗಳ ಅವಧಿಯಲ್ಲಿ ತಯಾರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nitee Mechanical engineering students of 5th Semester have designed an app to download all 1st year engineering notes for free. The launch of this app is held on 16 Sep on 4:00 PM at Talent Research Foundation in Mangalore

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ