ಮಂಗಳೂರಿನ ಐಡಿಯಲ್ ಐಸ್‍ಕ್ರೀಂಗೆ 'ಬೆಸ್ಟ್ ಇನ್ ಇಂಡಿಯಾ' ಪ್ರಶಸ್ತಿ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 19: ದೇಶದ ಐಸ್‍ ಕ್ರೀಂ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಕಡಲ ತಡಿಯ ಮಂಗಳೂರು . ತುಳುನಾಡು ಎಂದೊಡನೆ ಥಟ್ ಅಂತ ಕಣ್ಣ ಮುಂದೆ ನೆನಪಿಗೆ ಬರುವುದು ಸುಂದರ ಕಡಲ ಕಿನಾರೆ, ಐತಿಹಾಸಿಕ ಪ್ರಸಿದ್ದ ದೇವಾಲಯಗಳು, ಆಕರ್ಷಕ ಚರ್ಚ್ ಗಳು, ಪಾರಂಪರಿಕ ತುಳುನಾಡ ತಿನಿಸುಗಳು; ಜತೆಗೆ ಐಡಿಯಲ್ ಐಸ್‍ ಕ್ರೀಂ.

ಒಡಿಶಾ ಸೋಲಿಸಿ ರಸಗುಲ್ಲಾ ಸವಿದ ಪಶ್ಚಿಮ ಬಂಗಾಳ

ಮಂಗಳೂರಿಗೆ ಭೇಟಿ ನೀಡುವವರು ಇಲ್ಲಿಯ ಐಡಿಯಲ್ ಐಸ್‍ಕ್ರೀಂ ಸವಿಯದೇ ಮರಳುವುದಿಲ್ಲ. ತನ್ನ 'ಯಮ್ಮಿ' ರುಚಿಯಿಂದಲೇ ಐಡಿಯಲ್ ಐಸ್‍ಕ್ರೀಂ ದೇಶಾದ್ಯಂತ ಹೆಸರು ಮಾಡಿದೆ. ಇತ್ತೀಚೆಗೆ ಹರಿಯಾಣದ ಗುರುಗ್ರಾಮ್ ನಲ್ಲಿ ನಡೆದ ದಿ ಗ್ರೇಟ್ ಇಂಡಿಯನ್ ಐಸ್‍ ಕ್ರೀಂ ಆ್ಯಂಡ್ ಫ್ರೋಝನ್ ಡೆಸರ್ಟ್ ಕಾಂಟೆಸ್ಟ್'ನಲ್ಲಿ 'ಬೆಸ್ಟ್ ಇನ್ ಇಂಡಿಯಾ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಇದೇ ಐಡಿಯಲ್ ಐಸ್ ಕ್ರೀಂ.

103 ಸಂಸ್ಥೆಗಳು ಭಾಗಿ

103 ಸಂಸ್ಥೆಗಳು ಭಾಗಿ

ಡ್ಯೂಪಾಂಟ್ ನ್ಯೂಟ್ರಿಶನ್ ಮತ್ತು ಆರೋಗ್ಯ ಹಾಗೂ ಇಂಡಿಯನ್ ಡೈರಿ ಅಸೋಸಿಯೇಶನ್ ನವೆಂಬರ್ 16 ರಂದು ಗುರುಗ್ರಾಮನ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ದೇಶದ 103 ಐಸ್‍ ಕ್ರೀಂ ತಯಾರಿಕಾ ಸಂಸ್ಥೆಗಳು ಭಾಗವಹಿಸಿದ್ದವು.

'ಹಿಂದಿ' ಖಿಚಡಿಗೆ ಉಪ್ಪಿಟ್ಟು, ಚಿತ್ರಾನ್ನ ಭಾರೀ ಪೈಪೋಟಿ!

4 ಚಿನ್ನದ ಪದಕ ಗೆದ್ದ ಐಡಿಯಲ್

4 ಚಿನ್ನದ ಪದಕ ಗೆದ್ದ ಐಡಿಯಲ್

ಈ ಪೈಕಿ ಮಂಗಳೂರಿನ ಐಡಿಯಲ್ ಐಸ್‍ ಕ್ರೀಂ ನಾಲ್ಕು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕವನ್ನು ಬಾಚಿಕೊಂಡಿದೆ.

ಪ್ರಶಸ್ತಿ ಗೆದ್ದ ವಿಶಿಷ್ಟ ಐಸ್ ಕ್ರೀಂ ಗಳು

ಪ್ರಶಸ್ತಿ ಗೆದ್ದ ವಿಶಿಷ್ಟ ಐಸ್ ಕ್ರೀಂ ಗಳು

ಐಡಿಯಲ್ ಐಸ್‍ಕ್ರೀಂ ಈ ಸ್ಪರ್ಧೆಗಾಗಿ ಆವಿಷ್ಕರಿಸಿದ ಮ್ಯಾಂಗೊ ಸೊರ್ಬೆಟ್, ಮರ್ಝಿ ಪಾನ್, ವೆನಿಲ್ಲಾ ಫ್ರೋಝನ್ ಡೆಸರ್ಟ್ ಐಸ್‍ಕ್ರೀಂ ಗಳು ಚಿನ್ನದ ಪದಕಗಳೊಂದಿಗೆ 'ಬೆಸ್ಟ್ ಇನ್ ಕ್ಲಾಸ್' ಕೆಟಗರಿಯಲ್ಲಿ ಪ್ರಶಸ್ತಿ ಪಡೆದಿವೆ.

ಆರರಲ್ಲಿ ಮೂರು ಪ್ರಶಸ್ತಿ

ಆರರಲ್ಲಿ ಮೂರು ಪ್ರಶಸ್ತಿ

ಜತೆಗೆ ಚಾಕೊಲೆಟ್ ಐಸ್‍ ಕ್ರೀಂ ಬೆಳ್ಳಿ ಪದಕವನ್ನು ಪಡೆದಿದೆ. ನಡೆದ ಆರು ಕೆಟಗರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಐಡಿಯಲ್ ಐಸ್‍ ಕ್ರೀಂ ಮೂರು ಕೆಟಗರಿಯಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಮಂಗಳೂರು ಜನತೆಗೆ ಅರ್ಪಣೆ

ಮಂಗಳೂರು ಜನತೆಗೆ ಅರ್ಪಣೆ

ಈ ಪ್ರಶಸ್ತಿಯನ್ನು ಐಡಿಯಲ್ ಐಸ್‍ ಕ್ರೀಂ ಸಂಸ್ಥೆಯ ಮಾಲೀಕರಾದ ಮುಕುಂದ್ ಕಾಮತ್ ಮಂಗಳೂರು ಜನತೆಗೆ ಅರ್ಪಿಸಿದ್ದಾರೆ.

ಗುಣಮಟ್ಟಕ್ಕೆ ನಮ್ಮ ಆದ್ಯತೆ

ಗುಣಮಟ್ಟಕ್ಕೆ ನಮ್ಮ ಆದ್ಯತೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರುಕಟ್ಟೆ ಹಾಗೂ ಆರ್ಥಿಕ ವಿಚಾರಗಳಲ್ಲಿ ತಲೆ ಕೆಡಿಸಿಕೊಂಡವನಲ್ಲ. ಆದರೆ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿ ಹೆಚ್ಚು ಖುಷಿ ಪಡುತ್ತೇನೆ ಎಂದು ಅವರು ಹೇಳಿದರು. ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದ ಐಪಿಜ್ಜಾ ಐಸ್‍ಕ್ರೀಂ ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ideal ice cream bagged five awards in ‘The Great Indian Ice Cream and Frozen Dessert Contest’ held in Gurugram on November 16.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ