ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಟೌನ್‌ಹಾಲ್ ನವೀಕರಣ ಮುಗಿಯುತ್ತಿಲ್ಲ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ. 26 : ಮಂಗಳೂರು ಟೌನ್‌ಹಾಲ್ ನವೀಕರಣದ ವಿಚಾರದಲ್ಲಿ ರಾಜಕೀಯ ಆರಂಭವಾಗಿದೆ. ನಗರದ ಪಾಲಿಗೆ ಮುಕುಟಮಣಿಯಾಗಿದ್ದ ಪುರಭವನ 10 ತಿಂಗಳಿಂದ ಪಾಳುಬಿದ್ದ ಬಂಗಲೆಯಂತಾಗಿದೆ. ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಇದಕ್ಕೆ ಕಾರಣ ಎಂಬುದು ಬಿಜೆಪಿಯ ಆರೋಪ.

50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರಬೇಕಿದ್ದ ಪುರಭವನವನ್ನು ನವೀಕರಣ ನೆಪದಲ್ಲಿ ಮಹಾನಗರ ಪಾಲಿಕೆ ಕೆಡವಿ ಹಾಕಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಾಲಿಕೆಯ ನಿರ್ಧಾರದಿಂದಾಗಿ ಕಲಾವಿದರು ಬೀದಿಗೆ ಬೀಳುವಂತಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. [ನವೀಕರಣಗೊಂಡ ಬೆಂಗಳೂರು ಟೌನ್ ಹಾಲ್ ಚಿತ್ರಗಳು]

mangaluru

1 ವರ್ಷ, ಮೂವರು ಆಯುಕ್ತರು : 2015ರ ಜನವರಿಯಲ್ಲಿ ನವೀಕರಣ ಕಾಮಗಾರಿ ಆರಂಭವಾಯಿತು. ಟೌನ್‌ಹಾಲ್ ನವೀಕರಣಗೊಳಿಸಿ ಹವಾನಿಯಂತ್ರಿತ ವ್ಯವಸ್ಥೆ ಮಾಡಲು ಪಾಲಿಕೆ 4 ಕೋಟಿ ರೂ. ಬಿಡುಗಡೆ ಮಾಡಲು ಸಿದ್ಧತೆ ನಡೆಸಿತ್ತು. ಆದರೆ, ಪಾಲಿಕೆ ಆಯುಕ್ತರಾಗಿದ್ದ ಹೆಫ್ಸಿಬಾ ರಾಣಿ ಅವರು ಕಾಂಗ್ರೆಸ್‌ನ ಈ ಪ್ರಯತ್ನಕ್ಕೆ ತಡೆ ಹಾಕಿದ್ದರು. [ಪಾಲಿಕೆ ಆಯುಕ್ತರಿಗೆ ಗನ್ ಮ್ಯಾನ್ ಭದ್ರತೆ!]

ಪಾಲಿಕೆಯ ಭ್ರಷ್ಟಾಚಾರದ ಅರಿವಿದ್ದ ಆಯುಕ್ತರು, ಸಾಮಾನ್ಯ ಜನರ ಬಳಕೆಯ ಪುರಭವನಕ್ಕೆ ಹವಾನಿಯಂತ್ರಣ ವ್ಯವಸ್ಥೆಯ ಅಗತ್ಯವಿಲ್ಲ ಎಂದು ಹೇಳಿದ್ದರು. ಪ್ರತಿ ಕಾಮಗಾರಿಯನ್ನೂ ಕೂಲಂಕುಷ ತನಿಖೆಗೆ ಒಳಪಡಿಸಿ ಹಣ ಬಿಡುಗಡೆ ಮಾಡುತ್ತಿದ್ದರು.

dakshina kannada

ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಆಯುಕ್ತರ ನಡುವೆ ಈ ವಿಚಾರಕ್ಕೆ ಹಗ್ಗ ಜಗ್ಗಾಟಕ್ಕೆ ನಡೆದು, ಕೊನೆಗೆ ಆಯುಕ್ತರನ್ನೇ ವರ್ಗಾವಣೆ ಮಾಡಲಾಯಿತು. ಆಯುಕ್ತರ ವರ್ಗಾವಣೆ ನಂತರ ಟೌನ್ ಹಾಲ್ ನವೀಕರ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆ. ಸೂಕ್ತ ಅನುದಾನ ಕಾಲ-ಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ. [ಮಂಗಳೂರು : ಪಾಲಿಕೆ ಬಜೆಟ್ ಮುಖ್ಯಾಂಶಗಳು]

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದ ನೂತನ ಆಯುಕ್ತರ ನೇಮಕವೂ ಆಗಿಲ್ಲ. ಒಂದು ವರ್ಷದಲ್ಲಿ ಮೂವರು ಆಯುಕ್ತರು ಬಂದು ಹೋದರೂ ಪಾಲಿಕೆಯ ಪರಿಸ್ಥಿತಿ ಮಾತ್ರ ಬದಲಾಗಿಲ್ಲ, ಟೌನ್ ಹಾಲ್ ಕಾಮಗಾರಿ ಮುಗಿಯುತ್ತಿಲ್ಲ.

English summary
Mangaluru BJP workers staged a protest in front of Mangaluru City Corporation demanding that the Town Hall renovation works be resumed. Town Hall closed for renovation form January 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X