ಬಿಸಿಲ ಧಗೆಯ ನಡುವೆ ಕರಾವಳಿಗೆ ತಂಪೆರೆದ ವರುಣ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 12 : ಜಲಕ್ಷಾಮ, ಬಿಸಿಲ ಝಳದಿಂದ ಕಂಗೆಟ್ಟಿದ್ದ ಮಂಗಳೂರು ಜನತೆಗೆ ಮಳೆ ಕೊಂಚ ತಂಪಿನ ಅನುಭವ ನೀಡಿದೆ. ಮಂಗಳೂರಿನ ಕೆಲವು ಕಡೆ ಬುಧವಾರ ಸಂಜೆ ಸುಮಾರು 10 ನಿಮಿಷಗಳ ಕಾಲ ತುಂತುರು ಮಳೆಯಾಗಿದೆ.

ಬುಧವಾರ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಬಂಟ್ಸ್ ಹಾಸ್ಟೆಲ್, ಜ್ಯೋತಿ, ಕಂಕನಾಡಿ, ರಥಬೀದಿ ಸುತ್ತಮತ್ತ ತುಂತುರು ಮಳೆಯಾಗಿದೆ. ಇದರಿಂದ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಸಂತಸವಾಗಿದೆ. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]

 rain

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಮೊದಲಾದ ಕಡೆ ಕಳೆದ ಕೆಲವು ದಿನಗಳ ಹಿಂದೆ ಸಾಧಾರಣ ಮಳೆಯಾಗಿತ್ತು. ಆದರೆ, ಮಂಗಳೂರು ನಗರಕ್ಕೆ ಮಾತ್ರ ಈ ವರ್ಷದ ಮೊದಲ ಮಳೆ ಇದಾಗಿದೆ. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ]

ಕರಾವಳಿಯ ಕೆಲವು ಭಾಗಗಳಾದ ವಿಟ್ಲ, ಉಜಿರೆಯಲ್ಲಿ ಧಾರಾಕಾರ ಮಳೆಯಾಗಿದೆ. ಬುಧವಾರ ಸುರಿದ ಮುಂಗಾರು ಪೂರ್ವ ಮಳೆ ಮುಂದಿನ ದಿನಗಳಲ್ಲಿ ಜೋರಾಗಿ ಮಳೆ ಸುರಿಯಬಹುದೆಂಬ ಭರವಸೆಯನ್ನು ಹುಟ್ಟುಹಾಕಿದೆ. [ತೋಟಗಳಿಗೆ ನೀರಿಲ್ಲ, ಅಡಿಕೆ ಬೆಳೆಗಾರರು ಕಂಗಾಲು]

mangaluru rain

ಕುಡಿಯುವ ನೀರಿಗೆ ಸಂಕಷ್ಟ : ದಕ್ಷಿಣ ಕನ್ನಡ ಜಿಲ್ಲೆಗೆ ಬರದ ಬಿಸಿ ತಟ್ಟಿದ್ದು, ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ದಕ್ಷಿಣ ಕನ್ನಡವನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru received first spell of pre-monsoon showers on Wednesday, May 11 evening.
Please Wait while comments are loading...