ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಕುಖ್ಯಾತ ಅಂತರಜಿಲ್ಲಾ ಜಾನುವಾರು ಕಳ್ಳನ ಸೆರೆ

|
Google Oneindia Kannada News

ಮಂಗಳೂರು, ಏಪ್ರಿಲ್ 02: ಮಂಗಳೂರು ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕುಖ್ಯಾತ ದನ ಕಳ್ಳನನ್ನು ಬಂಧಿಸಿದ್ದಾರೆ. ಈತ ರಾಜ್ಯದ ಹಲವು ಜಿಲ್ಲೆಗಳಲ್ಲಿ ದನ ಕಳನ ಪ್ರಕರಣಗಳಲ್ಲಿ ಭಾಗಿಯಾಗಿದ್ದು , ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಪೊಲೀಸರ 'ಮೋಸ್ಟ್‌ ವಾಂಟೆಡ್' ಎಂದು ಹೇಳಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಪುದು ಗ್ರಾಮದ ಅಮ್ಮೆಮಾರ್ ಇಮ್ರಾನ್ (24) ಗುರುತಿಸಲಾಗಿದೆ. ಈತ ಜಾನುವಾರು ಕಳ್ಳತನ, ಕೊಲೆ, ಕೊಲೆಯತ್ನ ಸೇರಿದಂತೆ ಒಟ್ಟು 25 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ.

ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಕೊಲೆಗೆ ಸಂಚು ? ಮೂವರ ಬಂಧನ ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಕೊಲೆಗೆ ಸಂಚು ? ಮೂವರ ಬಂಧನ

ಆರೋಪಿಯನ್ನು ದನ ಕಳವು ಮಾಡಲು ಉಪಯೋಗಿಸುತ್ತಿದ್ದ ಓಮ್ನಿ ಕಾರು ಸಮೇತ ಆರ್ಕುಳ ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ.

Mangaluru police nabbed natorious cattle thief

ಆರೋಪಿ ಇಮ್ರಾನ್ ಮೇಲೆ ಸುಮಾರು 20ಕ್ಕೂ ಹೆಚ್ಚು ಜಾನುವಾರು ಕಳ್ಳತನ ಪ್ರಕರಣಗಳು ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ದಾಖಲಾಗಿವೆ. ಬಂಟ್ವಾಳ ಠಾಣಾ ಸರಹದ್ದಿನಲ್ಲಿ 8 ಪ್ರಕರಣ ದಾಖಲಾಗಿವೆ.

2017 ರಲ್ಲಿ ಕೊಡಗು ಜಿಲ್ಲೆಯಲ್ಲಿ ಈತನ ವಿರುದ್ದ 7 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಇದರಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಜಾನುವಾರು ಕಳ್ಳತನ ಸಮಯ 2 ಕೊಲೆಯತ್ನ ಪ್ರಕರಣ ಮತ್ತು ಒಂದು ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಈತನ ವಿರುದ್ದ 2 ಪ್ರಕರಣ ದಾಖಲಾಗಿರುತ್ತದೆ. ಲಾರಿ ಚಾಲಕನ ಕೊಲೆ ಮತ್ತು ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

English summary
Notorious inter-district cattle thief wanted in 25 cases nabbed by Mangaluru anti rowdy squad near Arukula Gate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X