ಬಾಲಕನ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿದ ಪೊಲೀಸ್ ಪೇದೆಗೆ ಪುರಸ್ಕಾರ

Posted By:
Subscribe to Oneindia Kannada

ಮಂಗಳೂರು, ಜುಲೈ 21: ಬಸ್ ಗಾಗಿ ಕಾಯುತ್ತಿದ್ದ ಶಾಲಾ ಬಾಲಕನ ಕಾಲಿನಲ್ಲಿ ರಕ್ತ ಹರಿಯುತ್ತಿರುವುದನ್ನು ನೋಡಿದ ಪೋಲೀಸ್ ಕಾನ್ಸ್ಟೇಬಲ್ ಬಾಲಕನ ಕಾಲಿಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಈ ಹಿನ್ನಲೆಯಲ್ಲಿ ಇಂದು ಮಂಗಳೂರು ಪೋಲೀಸ್ ಆಯುಕ್ತರು ಆರೈಕೆ ಮಾಡಿದ ಕಿಶೋರ್ ಅವರಿಗೆ ನಗದು ಪುರಸ್ಕಾರದೊಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

ಮಂಗಳೂರಲ್ಲಿ ಎಎಸ್ಐ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ರೌಡಿ

ಮಂಗಳೂರಿನ ಬರ್ಕೆ ಪೋಲೀಸ್ ಠಾಣೆಯ ಸಿಬ್ಬಂದಿ ಜುಲೈ 19 ರಂದು ಬೊಕ್ಕಪಟ್ಲ ಶಾಲೆಯ ಸಮೀಪ ತಾತ್ಕಾಲಿಕ ತಪಾಸಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾಲೆಯಿಂದ ಮನೆಗೆ ಹೊರಡಲು ಬಸ್ ಗಾಗಿ ಕಾಯುತ್ತಿದ್ದ ಪುಟ್ಟ ಬಾಲಕನ ಕಾಲಿನಿಂದ ರಕ್ತ ಒಸರುತ್ತಿತ್ತು. ಇದನ್ನು ಗಮನಿಸಿದ ಕಿಶೋರ್ ಬಾಲಕನ ಕಾಲಿನ ಗಾಯಕ್ಕೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು.

Mangaluru police constable provides first aid to the school kid and receives honor

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಹಿನ್ನಲೆಯಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳು ಕಿಶೋರ್ ರನ್ನು ಸನ್ಮಾನಿಸಿದರು. ಜನಸ್ನೇಹಿ ಪೋಲೀಸ್ ವ್ಯವಸ್ಥೆಗೆ ಇದೊಂದು ಸಾಕ್ಷಿಯಾಗಿ ಮೂಡಿಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mangaluru Barke police constable Kishor provides first aid to the school kid who was hurt in the bus stand and becomes the talk of the town by receiving honor and fame from the Mangaluru police commissioner T R Suresh.
Please Wait while comments are loading...