ಮಂಗಳೂರು: ಬೃಹತ್ ಡ್ರಗ್ಸ್ ಜಾಲ ಪತ್ತೆ, 4 ವಿದ್ಯಾರ್ಥಿಗಳ ಬಂಧನ

Posted By:
Subscribe to Oneindia Kannada

ಮಂಗಳೂರು, ಅಕ್ಟೋಬರ್ 27: ಬೃಹತ್ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸುವಲ್ಲಿ ಮಂಗಳೂರಿನ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಲ್.ಎಸ್.ಡಿ (Lysergic Acid diethylamide) ಎಂ.ಡಿ.ಎಂ.ಎ (Methylene Dioxy Meth Amphetami) ಮತ್ತು ಎಂ.ಡಿ.ಎಂ (Methylene Dioxy Methamthetami) ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ, ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಭೇದಿಸಿದ್ದಾರೆ.

Mangaluru police busted huge drug sales network

ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ರೌಡಿ ನಿಗ್ರಹ ದಳದ ತಂಡ 4 ಮಂದಿ ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ಕೇರಳ ಕಾಸರಗೋಡಿನ ನಿವಾಸಿ ನಿಖಿಲ್.ಕೆ.ಬಿ (24), ಮಂಗಳೂರಿನ ಕುಲಶೇಖರದ ಶ್ರವಣ ಪೂಜಾರಿ (23), ಕೇರಳದ ಕಣ್ಣೂರಿನ ರೋಶನ್‌ ವೇಗಸ್‌ (22), ಕೇರಳದ ತ್ರಿಶೂರ್ ನಿವಾಸಿ ಬಾಶಿಂ ಬಸೀರ್‌ (22 ) ಎಂದು ಗುರುತಿಸಲಾಗಿದೆ.

Mangaluru police busted huge drug sales network

ಬಂಧಿತ ಆರೋಪಿಗಳು ಮಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಬಂಧಿತ ಆರೋಪಿ ನಿಖಿಲ್ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ 8 ನೇ ಸೆಮಿಸ್ಟರ್ ಓದಿದ್ದು, 2 ವಿಷಯಗಳಲ್ಲಿ ಫೇಲ್ ಆಗಿದ್ದ ಎಂದು ಹೇಳಲಾಗಿದೆ.

2 ನೇ ಆರೋಪಿ ಶ್ರವಣ್ ಪೂಜಾರಿ ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು ಇತ್ತೀಚೆಗಷ್ಟೇ ಉತ್ತೀರ್ಣಗೊಂಡು ಹೊರಹೋಗಿದ್ದ. 3 ನೇ ಆರೋಪಿ ರೋಷನ್ ಸುರೇಶ್ ಮತ್ತು 4ನೇ ಆರೋಪಿ ಬಾಸಿಂ ಬಶೀರ್ ಇಬ್ಬರೂ ನಗರದ ವೈದ್ಯಕೀಯ ಕಾಲೇಜಿನಲ್ಲಿ 3ನೇ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ.

Mangaluru police busted huge drug sales network

ಬಂಧಿತರಿಂದ ಮಾದಕ ವಸ್ತುಗಳಲ್ಲದೆ ಎಲೆಕ್ಟ್ರಾನಿಕ್ ತೂಕದ ಯಂತ್ರ, 4ಮೊಬೈಲ್, 2 ಬೈಕ್, 2 ಹುಕ್ಕ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 5,30,500 ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತರು ಈ ಮಾದಕ ವಸ್ತುಗಳನ್ನು ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣದ ಜಾಲದಲ್ಲಿ ಇನ್ನೂ ಕೆಲವು ಪ್ರಮುಖ ಆರೋಪಿಗಳಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru police busted the huge drug sales network in the city. Mangaluru police team arrested 4 persons in connection with selling of banned drugs in the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ