ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐವತ್ತು ರುಪಾಯಿ ಖರ್ಚು ಮಾಡಿ, ಐದು ಪೈಸೆಯ ಚೆಕ್ ಕಳಿಸಿದ ವೊಡಾಫೋನ್

|
Google Oneindia Kannada News

ಮಂಗಳೂರು, ಜುಲೈ 6: ಚೆಕ್ ಪುಸ್ತಕ ತೆಗೆದುಕೊಳ್ಳುವಾಗ ಒಂದೊಂದು ಬ್ಯಾಂಕ್ ಗಳು ಒಂದೊಂದು ರೀತಿ ಶುಲ್ಕ ವಿಧಿಸುತ್ತವೆ. ಕೆಲವು ಯಾವುದೇ ಶುಲ್ಕ ಹಾಕದಿರಬಹುದು. ಆದರೆ ಒಂದು ಚೆಕ್ ಹಾಳೆಗೆ ಕನಿಷ್ಠ ಒಂದು ರುಪಾಯಿ ಶುಲ್ಕ ಆಗೇ ಆಗುತ್ತದೆ. ಆದರೆ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಮೊಬೈಲ್ ಕಂಪೆನಿಯಿಂದ 5 ಪೈಸೆಯ ಚೆಕ್ ಬಂದಿದೆ.

ಮೈಸೂರಿನಲ್ಲಿ ಐದು ಪೈಸೆಗೆ ಚೆಕ್ ಪಡೆದ ಬ್ಯಾಂಕ್!ಮೈಸೂರಿನಲ್ಲಿ ಐದು ಪೈಸೆಗೆ ಚೆಕ್ ಪಡೆದ ಬ್ಯಾಂಕ್!

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶರೀಫ್ ಅಬ್ಬಾಸ್ ವಳಾಲ್ ಅವರು ಈ ಐದು ಪೈಸೆಯ ಚೆಕ್ ಪಡೆದವರು. ಮುಂಬಯಿಯಲ್ಲಿ ಉದ್ಯಮಿಯಾಗಿರುವ ಶರೀಫ್ ಅಬ್ಬಾಸ್ ವಳಾಲ್ ಅವರಿಗೆ ವೊಡಾಪೋನ್ ಕಂಪೆನಿ ಐದು ಪೈಸೆಯ ಚೆಕ್ ಕಳುಹಿಸಿಕೊಟ್ಟಿದೆ.

Mangaluru person receives 5 paisa cheque from Vodafone

ಸುಮಾರು ವರ್ಷಗಳಿಂದ ಶರೀಫ್ ಅವರು ವೊಡಾಪೋನ್ ಸಿಮ್ ಉಪಯೋಗಿಸುತ್ತಿದ್ದರು. ಪೋಸ್ಟ್ ಪೇಯ್ಡ್ ಕನೆಕ್ಷನ್ ಹೊಂದಿದ್ದ ಅವರು ನಾಲ್ಕು ತಿಂಗಳ ಹಿಂದೆ ಬೇರೆ ಕಂಪೆನಿಯ ಸಿಮ್ ಪಡೆದುಕೊಂಡಿದ್ದರು.

ಕನ್ನಡದಲ್ಲಿದ್ದ ಚೆಕ್ ಅಮಾನ್ಯ ಮಾಡಿದ್ದಕ್ಕೆ ಬ್ಯಾಂಕ್ ನ ಕೋರ್ಟ್ ಗೆಳೆದ ಗ್ರಾಹಕಕನ್ನಡದಲ್ಲಿದ್ದ ಚೆಕ್ ಅಮಾನ್ಯ ಮಾಡಿದ್ದಕ್ಕೆ ಬ್ಯಾಂಕ್ ನ ಕೋರ್ಟ್ ಗೆಳೆದ ಗ್ರಾಹಕ

ಆಗ ಬಾಕಿ ಮೊತ್ತವನ್ನು ಇಂಟರ್ ನೆಟ್ ಮೂಲಕ ವೊಡಾಪೋನ್ ಗೆ ಪಾವತಿಸಿದ್ದರು. ಇದೀಗ ವೊಡಾಪೋನ್ ನಿಂದ ಇವರ ಖಾತೆಯಲ್ಲಿದ್ದ ಹೆಚ್ಚುವರಿ ಹಣವೆಂದು 5 ಪೈಸೆಯನ್ನು ಕಳುಹಿಸಿಕೊಟ್ಟಿದೆ. ಈ ಐದು ಪೈಸೆಯ ಚೆಕ್ ಕಳುಹಿಸಲು ವೊಡಾಪೋನ್ ಕಂಪೆನಿ ಸುಮಾರು 50 ರೂಪಾಯಿಯಷ್ಟು ಖರ್ಷು ಮಾಡಿದೆ.

ಅದೇ ರೀತಿ ಈ ಚೆಕ್ ಅನ್ನು ಬ್ಯಾಂಕಿಗೆ ಹಾಕಲು ಶರೀಫ್ ಅವರಿಗೂ ಖರ್ಚಿದೆ. ಈ ಮೂಲಕ ಕಂಪೆನಿ ಪ್ರಾಮಾಣಿಕತೆ ಮೆರೆದರೆ, 5 ಪೈಸೆ ಚೆಕ್ ಪಡೆದುಕೊಂಡ ಗ್ರಾಹಕ ಮಾತ್ರ ಚೆಕ್ ಅನ್ನು ಏನು ಮಾಡುವುದೆಂದೆ ತೋಚದಂತಾಗಿದ್ದಾರೆ.

English summary
In a rare incident a Person in Mangaluru from uppinangady receives 5 paisa cheque from Vodafone mobile company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X