ತುಳು ನಾಡಿಗೆ ಇಂದು ಹೊಸ ವರ್ಷದ 'ಬಿಸು ಪರ್ಬ'

By: ಐಸಾಕ್ ರಿಚರ್ಡ್
Subscribe to Oneindia Kannada

ಮಂಗಳೂರು: ಇಂದು (ಏಪ್ರಿಲ್ 14) ತುಳುನಾಡಿನ ಜನರಿಗೆ ಸಂಭ್ರಮವೋ ಸಂಭ್ರಮ. ತುಳುನಾಡಿನ ಹೊಸ ವರ್ಷದ ಆಚರಣೆಯಾದ ಬಿಸು ಹಬ್ಬವನ್ನು ಇಂದು ಆಚರಿಸಲಾಗುತ್ತಿದೆ. ಇದನ್ನುಬಿಸು ಪರ್ಬ ಎಂದೂ ಕರೆಯಲಾಗುತ್ತದೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿ ಆಚರಿಸುವಂತೆ ತುಳುವರು ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಇದೇ ಬಿಸು ಅಥವಾ ವಿಷು.

ಅವಿಭಜಿತ ದಕ್ಷಿಣ ಕನ್ನಡದ ತುಳುವರಿಗೆ ಹೊಸ ವರ್ಷವನ್ನು ಹೊತ್ತು ತರುವ ಬಿಸು ಹಬ್ಬ ವಿಶೇಷವಾದುದು.[ಯುಗಾದಿಗೆ ದ್ವಾದಶ ರಾಶಿಗಳಿಗೆ ಆಯವ್ಯಯ ಹೇಗಿದೆ?]

Mangaluru peoplr will celeberate Vishu festival tomorrow

ಬಿಸು ಹಬ್ಬದ ವಿಶೇಷತೆ:
ವಿವಿಧ ಭಾಗಗಳಲ್ಲಿ ಆಚರಣೆಗೊಳ್ಳುವ ಹಬ್ಬದ ಆಚರಣೆ ಆಯಾ ಸ್ಥಳಕ್ಕೆ ತಕ್ಕಂತೆ ವಿಭಿನ್ನವಾಗಿರುತ್ತದೆ. ಕೇರಳದಲ್ಲಿ ಈ ಹಬ್ಬ ಒಂದು ಪ್ರಮುಖ ಹಬ್ಬ. ಅಲ್ಲಿನ ಆಚರಣೆಗೂ,ದಕ್ಷಿಣ ಕನ್ನಡ ಜಿಲ್ಲೆಯ, ತುಳುನಾಡಿನ ಹಬ್ಬದ ಆಚರಣೆಗೂ ಬಹಳ ವ್ಯತ್ಯಾಸವಿದೆ."ವಿಷು ಕಣಿ" ಇಡುವುದೇ ಈ ಹಬ್ಬದ ವಿಶೇಷ . 'ವಿಷು ಕಣಿ' ಎಂದರೆ ವಿವಿಧ ಹಣ್ಣುತರಕಾರಿಗಳನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಡುವುದು. ಗೇರುಹಣ್ಣು, ಮಾವಿನಹಣ್ಣು, ಮೋಸುಂಬಿ, ಸೌತೆಕಾಯಿ, ಚೀನಿಕಾಯಿ ಇತ್ಯಾದಿ.

ಬಿಸು(ವಿಷು)ವಿನ ದಿನ ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ, ವಿಷು ಕಣಿಯನ್ನು ನೋಡಿ, ದೇವರಿಗೆ ನಮಸ್ಕರಿಸಿ, ಹೊಸ ಉಡುಗೆ ಧರಿಸಿ, ಅನಂತರ ಮನೆಯ ಹಿರಿಯರೆಲ್ಲರಿಗೂ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದು ಪದ್ಧತಿ ಇದೆ.

ಬಿಸು ದಿನ ಅತ್ಯಂತ ಪವಿತ್ರ ದಿನ. ಯಾವುದೇ ಹೊಸ ಕೆಲಸವನ್ನು ಆರಂಭ ಮಾಡಲು ಈ ದಿನ ಪ್ರಶಸ್ತ. ಆದ್ದರಿಂದಲೇ ಮಂಗಳ ಕಾರ್ಯಕ್ಕಾಗಿ ಈ ದಿನವನ್ನು ಕಾಯುತ್ತಾರೆ. ತುಳು ನಾಡಿನಲ್ಲಿ ಈ ಆಚರಣೆಗೆ ತನ್ನದೇ ಆದ ರೀತಿರಿವಾಜುಗಳಿವೆ. ಇದು ಪರಶುರಾಮ ಸೃಷ್ಟಿಯ ತುಳುನಾಡಿನ ವಿಶಿಷ್ಟತೆಯೂ ಹೌದು.[ದೇಶದೆಲ್ಲೆಡೆ ಉಲ್ಲಾಸದ ಓಕುಳಿಯ ಚೆಲ್ಲಿದೆ ಹೋಳಿಯ ಬಣ್ಣ!]

Mangaluru peoplr will celeberate Vishu festival tomorrow

ಬಿಸು ನಿಮಿತ್ತ ನಾಳೆ ಕಾರ್ಯಕ್ರಮ
ಎಲ್ಲರಿಗೂ ಹೊಸ ವರುಷ ಹೊಸ ಹರುಷವ ತರಲಿ ಎನ್ನುವ ಉದ್ದೇಶದಿಂದ ಬಿಸು ಹಬ್ಬದ ಆಚರಣೆಯೊಂದಿಗೆ ಬಂಟರಯಾನೆ ನಾಡವರ ಸಂಘ ಬಿಸು ಪರ್ಬ ಕಾರ್ಯಕ್ರಮವನ್ನು ಬಂಟ್ಸ್‌ಹಾಸ್ಟೆಲ್ ನ ಗೀತಾ ಎಸ್.ಎಂ.ಶೆಟ್ಟಿ ಸಭಾಭವನದಲ್ಲಿಹಮ್ಮಿಕೊಳ್ಳಲಿದೆ.
ಬಂಟರ ಯಾನೆ ನಾಡವರ ಮಾತೃಸಂಘದ ವತಿಯಿಂದ ಏ.15 ರಂದು ಸಂಜೆ 4:30ಕ್ಕೆ ಬಿಸು ಪರ್ಬ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಉದ್ಘಾಟಿಸಲಿದ್ದು, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಆಶಾ ದಿಲೀಪ್ ರೈ ಸುಳ್ಯಮೆ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಗುವುದು .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tulu people will celeberate Vishu festival tomorrow. As Ugadi this festival is also celeberating for welcome new year in the region.
Please Wait while comments are loading...