ಶ್ರೀಮಂತರಿಂದ ಬಡವರಿಗೆ ಹಣ ವರ್ಗಾಯಿಸುವ ಬಜೆಟ್

Subscribe to Oneindia Kannada

ಮಂಗಳೂರು, ಮಾರ್ಚ್. 02: ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ ಕುರಿತು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಂವಾದ ನಡೆಯಿತು.

ಕೆನರಾ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್ ಹೆಗ್ಡೆ ಮ್ಯಾನೆಜ್ ಮೆಂಟ್ ಸಂಸ್ಥೆಯ ಪ್ರೊ. ಜಿ.ವಿ. ಜೋಷಿ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ರಾಮ್ ಮೋಹನ್ ಪೈ ಮರೂರ್, ಎಚ್ ಡಿಎಫ್ ಸಿ ಬ್ಯಾಂಕ್ ಪ್ರಾದೇಶಿಕ ತರಬೇತಿ ವ್ಯವಸ್ಥಾಪಕ ಮಹೇಶ್ ಚಂದ್ರ ಆಳ್ವ, ಒರಾಕಲ್ ಫೈನಾನ್ಷಿಯಲ್ ಸರ್ವೀಸ್ ನ ಅಗ್ನೀಶ್, ಮಂಗಳೂರಿನ ಚಾರ್ಟೆಡ್ ಅಕೌಟೆಂಟ್ ಕಿರಣ್ ವಸಂತ್ ಪಾಲ್ಗೊಂಡಿದ್ದರು.[ಕೇಂದ್ರ ಬಜೆಟ್ ಯಾವುದು ಏರಿಕೆ? ಯಾವ್ದು ಇಳಿಕೆ?]

ಬಜೆಟ್ ಸಾಮಾನ್ಯ ನಾಗರಿಕನ ಮೇಲೆ ಯಾವ ಪರಿಣಾಮ ಬೀರುತ್ತದೆ? ಯಾರಿಗೆ ಲಾಭ? ಯಾರಿಗೆ ನಷ್ಟ? ಹಣಕಾಸು ನಿರ್ವಹಣೆ ಹೇಗೆ? ಆರ್ಥಿಕ ಅಭಿವೃದ್ಧಿ ಸಾಧ್ಯವೇ? ಹೀಗೆ ಹತ್ತು ಹಲವಾರು ವಿಚಾರಗಳನ್ನು ಚರ್ಚೆ ಮಾಡಲಾಯಿತು. ಕಾಲೇಜಿನ ವ್ಯವಹಾರ ಆಡಳಿತ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಎ.ಪಿ.ಆಚಾರ್ ಕಾರ್ಯಜ್ರಮದ ಜವಾಬ್ದಾರಿ ಹೊತ್ತುಕೊಂಡಿದ್ದರು.

ಅತ್ಯುತ್ತಮ ಬಜೆಟ್

ಅತ್ಯುತ್ತಮ ಬಜೆಟ್

ಸಂವಾದದಲ್ಲಿ ಮಾತನಾಡಿದ ಮಹೇಶ್ ಚಂದ್ರ ಆಳ್ವ ಅವರು 2016-17ನೇ ಸಾಲಿನ ಬಜೆಟ್ ಸರ್ಕಾರ ಅತ್ಯುತ್ತಮ ಬಜೆಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದರು.

ಎಲ್ಲರಿಗೂ ಅನುಕೂಲ

ಎಲ್ಲರಿಗೂ ಅನುಕೂಲ

ರಾಮಮೋಹನ್ ಪೈ ಮಾತನಾಡಿ, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಾರ್ವಜನಿಕ ವೆಚ್ಚ ಕುರಿತಂತೆ ನೀಡಿರುವ 9 ಅಂಶಗಳನ್ನು ವಿವರಿಸಿದರು ಅಲ್ಲದೇ ಶ್ರೀಮಂತ, ಮಧ್ಯಮ ಹಾಗೂ ಬಡವರ್ಗದ ಜನರಿಗೆ ಈ ಬಜೆಟ್ ಅನುಕೂಲವಾಗಲಿದೆ ಎಂದರು.

ಕೃಷಿಗೆ ಪೂರಕ

ಕೃಷಿಗೆ ಪೂರಕ

ಒರಾಕಲ್ ಫೈನಾನ್ಷಿಯಲ್ ಸರ್ವೀಸ್ ನ ಅಗ್ನೀಶ್ ಮಾತನಾಡಿ, ಶ್ರೀಮಂತ ವರ್ಗದಿಂದ ಬಡವರ ಕಡೆಗೆ ಹಣವನ್ನು ವರ್ಗಾಹಿಸಲಿದ್ದು, ಇದು ಕೃಷಿ ಕ್ಷೇತ್ರದಲ್ಲಿ ನೇರ ಹೂಡಿಕೆಗೆ ಒತ್ತು ನೀಡಲಿದೆ ಎಂದು ಹೇಳಿದರು.

ಅನುಮಾನಕ್ಕೆ ಉತ್ತರ

ಅನುಮಾನಕ್ಕೆ ಉತ್ತರ

ಕೆಎಸ್ ಹೆಗ್ಡೆ ಮ್ಯಾನೆಜ್ ಮೆಂಟ್ ಸಂಸ್ಥೆಯಪ್ರೊ.ಜಿ.ವಿ.ಜೋಷಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ನೀಡಿದರು. ಉತ್ಪಾದನಾ ಕ್ಷೇತ್ರ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಲಿದ್ದು, ಪ್ರತಿಯೊಬ್ಬರೂ ನಿರೀಕ್ಷಿಸಿದ ಮಟ್ಟದಲ್ಲಿ ಯಾವೊಂದು ಕೇಂದ್ರ ಬಜೆಟ್ ಮಂಡನೆಯಾಗಿಲ್ಲ. ಈ ಬಜೆಟ್ ಸಮಗ್ರ ಚಿಂತನೆ ಒಳಗೊಂಡಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru: Panel Discussion on "Union Budget 2016-17" was organized by Sahyadri College of Engineering & Management in collaboration with Kanara Chamber of Commerce & Industry, Mangaluru at Sahyadri Campus. Prof. G.V Joshi, Professor of Economics, Justice K.S Hegde Institute of Management, Mr. Rammohan Pai Maroor, President, Kanara Chamber of Commerce & Industry, Mangalore, Mr. Mahesh Chandra Alva, Regional Training Manager-South, HDFC Bank Ltd Bangalore, Mr. Agnish A, Team Leader, Oracle Financial Services, Bangalore & Mr. Kiran Vasanth, Chartered Accountant, Mangalore were the resource persons.
Please Wait while comments are loading...