ಲಾಲಾರಸ ಸ್ರವಿಸುವಂತೆ ಮಾಡುವ 'ಮೀನು ಗಮ್ಮತ್ ಥಾಲಿ'!

Posted By:
Subscribe to Oneindia Kannada

ಮಂಗಳೂರು, ಜುಲೈ 06 : ಮೀನು ಎಂದಾಕ್ಷಣ ನೆನಪಾಗುವುದು ಮಂಗಳೂರು. ಬೇರೆ ಪ್ರದೇಶದಿಂದ ಬರುವ ಅತಿಥಿಗಳಿಗೆ ಮಂಗಳೂರಿನ ಮೀನು ಊಟದ ಬಗ್ಗೆ ಆಕರ್ಷಣೆಯ ಇದ್ದೇ ಇದೆ. ಇದಕ್ಕೆ ಪೂರಕವಾಗಿ ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್‌ 'ಮೀನು ಗಮ್ಮತ್ ಥಾಲಿ'ಯನ್ನು ಗ್ರಾಹಕರಿಗಾಗಿ ಪರಿಚಯಿಸಿದೆ.

ಮಂಗಳೂರು ನಗರದಲ್ಲಿ ತ್ರಿ ಸ್ಟಾರ್ ಹೋಟೆಲ್ ಅಂದ್ರೆ ಓಷಿಯನ್ ಪರ್ಲ್. ಶ್ರೀಮಂತರಿಗೆ ಹೇಳಿ ಮಾಡಿಸಿದ ಹೋಟೆಲ್ ಇದು. ಹೋಟೆಲ್ ಊಟದ ದರ ಅಂತೂ ಕೇಳಲೇ ಬೇಡಿ, ಇವೆಲ್ಲಾ ನಗಮಲ್ಲ ಎಂಬುದು ಜನಸಾಮಾನ್ಯರ ಭಾವನೆ. ಆದರೆ, ಹೋಟೆಲ್ ಈಗ ಜನರ ನಂಬಿಕೆ ಸುಳ್ಳು ಮಾಡಿದೆ. [ನೀವಿದ್ದಲ್ಲೆ ಬರಲಿದೆ ರುಚಿ ರುಚಿ ಮೀನು ಖಾದ್ಯ]

Mangaluru Ocean Pearl hotel offers special Fish thali

ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಸಾಗರ್ ರತ್ನ ಸ್ಪೆಷಲ್ ಥಾಲಿ, ನಾರ್ತ್ ಇಂಡಿಯನ್ ಥಾಲಿ, ಸೌತ್ ಇಂಡಿಯನ್ ಥಾಲಿ, ಅನ್‌ಲಿಮಿಟೆಡ್ ಬಫೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಈ ಖಾದ್ಯಗಳ ಸಾಲಿಗೆ 'ಮೀನು ಗಮ್ಮತ್ ಥಾಲಿ' ಸೇರ್ಪಡೆಯಾಗಿದೆ .

ಪ್ರತಿದಿನ ಮಧ್ಯಾಹ್ನ 12 ರಿಂದ 3.30ರ ತನಕ ಹೋಟೆಲ್‌ನ ಕೋರಲ್ ರೆಸ್ಟೋರೆಂಟ್‌ನಲ್ಲಿ ಈ ಥಾಲಿ ಸಿಗುತ್ತದೆ. ಗ್ರಾಹಕರನ್ನು ಸೆಳೆಯಲು 275 ರೂ.ದರ ನಿಗದಿ ಮಾಡಲಾಗಿದೆ. ಈ ಥಾಲಿಯಲ್ಲಿ ಅಂಜಲ್ ತವಾ ಫ್ರೈ, ಮಾರುವಾಯಿ ಸುಕ್ಕ, ಸಿಗಡಿ ಘೀ ರೋಸ್ಟ್, ಅನ್ನ, ಸಿಗಡಿ ಚಟ್ನಿ, ಹಪ್ಪಳ, ಕಾಣೆ ಮೀನ್ ಫ್ರೈ, ನೀರುದೋಸೆ ಮತ್ತು ಬಟರ್ ಮಿಲ್ಕ್ ಸಿಗುತ್ತದೆ. [ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ]

'ಜೂನ್‌ನಿಂದ 'ಮೀನು ಗಮ್ಮತ್' ಥಾಲಿ ಆರಂಭಿಸಲಾಗಿದೆ. ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ' ಎನ್ನುತ್ತಾರೆ ಸಂಸ್ಥೆಯ ಉಪಾಧ್ಯಕ್ಷ ಬಿ.ಎನ್.ಗಿರೀಶ್. ಮನ್ಸೂನ್ ಸ್ಪೆಷಲ್ ಅಂಗವಾಗಿ ಜುಲೈ 1 ರಿಂದ 17ರವರೆಗೆ ಇಟಾಲಿಯನ್ ಫುಡ್ ಫೆಸ್ಟ್ಅನ್ನು ಆಯೋಜಿಸಲಾಗಿದೆ. ಇದರಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಪಾಸ್ತಾ ಸೇರಿದಂತೆ ಇಟಾಲಿಯನ್ ಸಂಪ್ರಾಯಾಯಿಕ ಖಾದ್ಯ, ಊಟಗಳು ಸಿಗಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Ocean Pearl hotel Mangaluru voffers special Fish thali in the cost of 275. People can visit hotel and enjoy Fish thali daily 12 to 3.30 Pm
Please Wait while comments are loading...