ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಂಸ ಪ್ರಿಯರಿಗೆ ಕಹಿ ಸುದ್ದಿ, ಮರ್ವಾಯಿ ಉತ್ಪಾದನೆಯಲ್ಲಿ ಭಾರೀ ಇಳಿಕೆ

ಕರಾವಳಿಗರ ಅಚ್ಚುಮೆಚ್ಚಿನ ಸಮುದ್ರ ಆಹಾರ ಮರ್ವಾಯಿ ಉತ್ಪಾದನೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 2004ರಿಂದ ಮರ್ವಾಯಿ ಉತ್ಪಾದನೆ 3 ಪಟ್ಟು ಇಳಿಕೆಯಾಗಿದ್ದು, ಮುಂದಿನ 2 ವರ್ಷದಲ್ಲಿ ಸಾರ್ವತ್ರಿಕ ಇಳಿಕೆಯ ಬಿಸಿ ಮರ್ವಾಯಿ ಪ್ರಿಯರಿಗೆ ತಟ್ಟಲಿದೆ.

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಮಾರ್ಚ್ 13: ಕರಾವಳಿಗರ ಅಚ್ಚುಮೆಚ್ಚಿನ ಸಮುದ್ರ ಆಹಾರ ಮರ್ವಾಯಿ ಉತ್ಪಾದನೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 2004ರಿಂದ ಮರ್ವಾಯಿ ಉತ್ಪಾದನೆ ಮೂರು ಪಟ್ಟು ಇಳಿಕೆಯಾಗಿದ್ದು, ಮುಂದಿನ ಎರಡು ವರ್ಷದಲ್ಲಿ ಸಾರ್ವತ್ರಿಕ ಇಳಿಕೆಯ ಬಿಸಿ ಮರ್ವಾಯಿ ಪ್ರಿಯರಿಗೆ ಭಾರೀ ಪ್ರಮಾಣದಲ್ಲಿ ತಟ್ಟಲಿದೆ.

ಮರ್ವಾಯಿ ಉತ್ಪಾದನೆ ಇಳಿಕೆಗೆ ಹವಾಮಾನ ಬದಲಾವಣೆ ಮತ್ತು ನದೀ ಮುಖಜ ಪ್ರದೇಶಗಳ ಮಾಲಿನ್ಯವೇ ಕಾರಣ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳು ಹೇಳಿದ್ದಾರೆ. [ಮಂಗ್ಳೂರು ಜೈಲಿನಿಂದ ಕೈದಿ ಪರಾರಿ, ಬೆಳಗಾವಿ ಡಿಐಜಿ ತಂಡದಿಂದ ತನಿಖೆ]

Mangaluru now faces a decrease in the production of seashells

ಹವಾಮಾನ ಬದಲಾವಣೆ ರೋಗಕಾರಕ ಚಟುವಟಿಕೆ ಹೆಚ್ಚುತ್ತದೆ ಮತ್ತು ಪಾಚಿ ಹುಟ್ಟುವಂತೆ ಮಾಡುತ್ತದೆ. ಇದು ಮರ್ವಾಯಿ ಮತ್ತು ಸೀಗಡಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಕರಾವಳಿ ಕರ್ನಾಟಕದಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ ಎಂದು ಇಂಡೋ-ಸ್ವೀಡಿಷ್- ಬ್ರಿಟಿಷ್ ವಿದ್ವಾಂಸರ ತಂಡ ಹೇಳಿದೆ. ಅವರು ಇತ್ತೀಚೆಗೆ ನಗರದಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶವನ್ನು ಪತ್ತೆಹಚ್ಚಿದ್ದಾರೆ.

ಗ್ರೀನ್ ಮುಸೆಲ್ ಎಂಬ ಹೆಸರಿನ ಸಮುದ್ರ ಆಹಾರ ಬಹಳ ಸಂಕಷ್ಟದಲ್ಲಿರುವ ತಳಿ. ಇದನ್ನು ಪೂರ್ವ ಕರಾವಳಿಯಲ್ಲಿ ಮತ್ತು ಪಶ್ಚಿಮ ಕರಾವಳಿಯಲ್ಲಿ ಬೆಳೆಸಲಾಗುತ್ತದೆ. ಹವಾಮಾನ ಬದಲಾವಣೆಯು ಸಮುದ್ರ ಆಹಾರದ ಸರಪಳಿಯ ಬದಲಾವಣೆಗೆ ಮುಖ್ಯ ಕಾರಣವಾಗಿತ್ತದೆ. ಕೆಲವು ಬಾರಿ ಅಪಾಯಕಾರಿ ಪಾಚಿ ಅರಳುವಿಕೆ ಮತ್ತು ಪ್ಯಾರಲಿಟಿಕ್ ಶೆಲ್ ಫಿಶ್ ಟಾಕ್ಸಿನ್ಸ್ ಕೂಡ ಸಮುದ್ರ ಆಹಾರದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳ ತಂಡ 'ಒನ್ ಇಂಡಿಯಾ'ಕ್ಕೆ ತಿಳಿಸಿದ್ದಾರೆ.

ಮರ್ವಾಯಿ ಉತ್ಪಾದನೆ ಇಳಿಕೆ ಮರ್ವಾಯಿ ಬೆಲೆಯನ್ನು ಗಗನಕ್ಕೇರಿಸಿದೆ. "100 ಮರ್ವಾಯಿಗೆ ರೂಪಾಯಿ 125ರಂತೆ ಮಾರಾಟ ಮಾಡುತ್ತಿದ್ದೆವು. ಆದರೆ ಈಗ ಮರ್ವಾಯಿ ಬೆಲೆ ಗಗನಕ್ಕೇರಿದ್ದು,250 ರೂಪಾಯಿಗೆ ಮಾರುತ್ತಿದ್ದೇವೆ. ಅನೇಕ ಗ್ರಾಹಕರು ಮರ್ವಾಯಿ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ, ಇತ್ತೀಚೆಗೆ ಕೇವಲ ಹೋಟೆಲ್ ಮತ್ತು ರೆಸ್ಟೋರೆಂಟುಗಳಿಂದ ಮಾತ್ರ ಮರ್ವಾಯಿಗೆ ವ್ಯಾಪಾರ ದೊರೆಯುತ್ತಿದೆ," ಎನ್ನುತ್ತಾರೆ ನಗರದ ಬಂದರು ಮಾರುಕಟ್ಟೆಯ ಮರ್ವಾಯಿ ವ್ಯಾಪಾರಿಗಳು. [ಪಣಂಬೂರು ಕಡಲ ತೀರದಲ್ಲಿ ಬೇಸಿಗೆಯ ಮಜಾ]

English summary
Mangaluru now faces a decrease in the production of seashells, the result of this has increased the price of seashells from Rs.150 to Rs. 250 per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X