ದ. ಕೊರಿಯಾದ ಸೌಂದರ್ಯ ಸ್ಪರ್ಧೆಗೆ ಕರಾವಳಿ ಬೆಡಗಿ ನಿಮಿಕಾ

By: ಐಸಾಕ್ ರಿಚರ್ಡ್
Subscribe to Oneindia Kannada

ಮಂಗಳೂರು, ಏಪ್ರಿಲ್ 19: ಈ ಬಾರಿಯ 'ಮಿಸ್ ಟ್ಯಾಲೆಂಟ್ - 2017' ಸ್ಪರ್ಧೆಯಲ್ಲಿ ಕರಾವಳಿಯ ಬೆಡಗಿಯೊಬ್ಬರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಸ್ಪರ್ಧೆ ಏಪ್ರಿಲ್ 23 ರಿಂದ ಮೇ 13ರ ವರೆಗೆ ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆಯಲಿದೆ.

ನಮ್ಮ ದೇಶವನ್ನು ಪ್ರತಿನಿಧಿಸಲಿರುವ ಕರಾವಳಿಯ ಸುಂದರ ಬೆಡಗಿಯ ಹೆಸರು ನಿಮಿಕಾ ರತ್ನಾಕರ್. ನಗರದ ಕುಡುಪು ನಿವಾಸಿ, ಒಳಾಂಗಣ ವಿನ್ಯಾಸಗಾರ ರತ್ನಾಕರ್ ಎನ್. ಬಿ. ಹಾಗೂ ಹೇಮಲತಾ ರತ್ನಾಕರ್ ದಂಪತಿಯ ಪುತ್ರಿ, ಕರಾವಳಿಯ ಸುಂದರಿ ನಿಮಿಕಾ ರತ್ನಾಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.[ಸದಾನಂದ ಗೌಡರಿಂದ ರಾಷ್ಟ್ರಪತಿಗಳಿಗೆ ಕಂಬಳ ಮಸೂದೆ ಸಲ್ಲಿಕೆ]

ಸ್ಪರ್ಧೆಯ ಆಯ್ಕೆಗೆ ನಡೆದ ಎಲ್ಲಾ ವಿಧದ ಆಯ್ಕೆ ಸುತ್ತಿನಲ್ಲೂ ತೇರ್ಗಡೆಗೊಂಡಿರುವ ನಿಮಿಕಾ ಇದೀಗ ವಿವಿಧ ದೇಶಗಳ ಸುಂದರಿಯರ ಜೊತೆಗಿನ ಸ್ಪರ್ಧೆಗೆ ದಕ್ಷಿಣ ಕೊರಿಯಾಕ್ಕೆ ಹಾರಲಿದ್ದಾರೆ.

ಗಾಯಕಿಯೂ ಹೌದು

ಗಾಯಕಿಯೂ ಹೌದು

ರೂಪದರ್ಶಿಯೂ, ಗಾಯಕಿಯೂ ಆಗಿರುವ ನಿಮಿಕಾ ಸಿಝ್ಲಿಂಗ್ ಗೈಯ್ಸ್ ನೃತ್ಯ ಸಂಸ್ಥೆಯ ಮಾಲೀಕರಾದ ಶುಭಾ ಕಿರಣ್ ಮಣಿ ಹಾಗೂ ಫ್ಯಾಶನ್ ಲೋಕದ ಪ್ರಮುಖರಾದ ಅನುಪಮಾ ಸುವರ್ಣ ಅವರ ಜೊತೆಗೆ ಕಳೆದ ಒಂದು ವರ್ಷದಿಂದ ತರಬೇತಿ ಪಡೆಯುವ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಪಡೆದರು.

ಗುಪ್ತ ವಿನ್ಯಾಸದ ದಿರಿಸಿನಲ್ಲಿ ನಿಮಿಕಾ ಮಿಂಚು

ಗುಪ್ತ ವಿನ್ಯಾಸದ ದಿರಿಸಿನಲ್ಲಿ ನಿಮಿಕಾ ಮಿಂಚು

ಭಾರತೀಯ ಸಂಸ್ಕೃತಿಯ ಪ್ರತಿಮೆಯಾಗಿರುವ ಆಕೆಯ ಸಾಂಪ್ರದಾಯಿಕ ಹಾಗೂ ಫ್ಯಾಂಟಸಿ ಧಿರಿಸುಗಳನ್ನು ಆಕೆಯ ತಂದೆ ರತ್ನಾಕರ್ ಹಾಗೂ ಅಟ್ಲಾಸ್ ಡಿಸೈನ್ ಸ್ಟುಡಿಯೊ ವಿನ್ಯಾಸಗೊಳಿಸಿದ್ದು, ಉಳಿದಂತೆ ಇಡೀ ಸ್ಪರ್ಧೆಯುದ್ದಕ್ಕೂ ಆಕೆ ತೊಡುವ ವಿಶಿಷ್ಟ ಧಿರಿಸುಗಳನ್ನು ಭಾರತೀಯ ಮೂಲದ ಇಟಲಿಯ ವಿನ್ಯಾಸಗಾರ ಆನಂದ್ ಗುಪ್ತ ಲೇಬಲ್ ವಿನ್ಯಾಸಗೊಳಿಸಿದ್ದಾರೆ.[ರಾಜ್ಯ ಸರ್ಕಾರದಿಂದ ದಕ್ಷಿಣ ಕನ್ನಡ ಕಾರ್ಮಿಕರಿಗೆ ಸಿಹಿ ಸುದ್ದಿ!]

ಸೌಂರ್ಯದ ಆಗರ ಕರಾವಳಿ

ಸೌಂರ್ಯದ ಆಗರ ಕರಾವಳಿ

ಕರಾವಳಿ ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿ ಎತ್ತಿದ ಕೈ ಮಾತ್ರವಲ್ಲ; ಸೌಂದರ್ಯದ ಆಗರ ಕೂಡಾ ಹೌದು ಕರಾವಳಿಯ ಹಲವಾರು ಸೌಂದರ್ಯ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಮಿಂಚುತ್ತಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆಯೇ ನಿಮಿಕಾ ರತ್ನಾಕರ್.

ಐಶ್ವರ್ಯ ರೈ ನಾಡಿನ ಹೊಸ ಮಾಡೆಲ್

ಐಶ್ವರ್ಯ ರೈ ನಾಡಿನ ಹೊಸ ಮಾಡೆಲ್

ವಿಶ್ವಸುಂದರಿ ಕಿರೀಟ ಗೆದ್ದ ಐಶ್ವರ್ಯ ರೈ ಕೂಡಾ ಮೂಲತಃ ಮಂಗಳೂರಿನವರು. ಇದಲ್ಲದೆ ಕಳೆದ ವರ್ಷ ಪೋಲೆಂಡ್ ನಲ್ಲಿ ನಡೆದ 'ಮಿಸ್ ಸುಪ್ರ ನ್ಯಾಷನಲ್-2016'ರ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮಂಗಳೂರಿನ ಮೋಹಕ ಬೆಡಗಿ ಶ್ರೀನಿಧಿ ಶೆಟ್ಟಿ ಗೆದ್ದುಕೊಂಡಿದ್ದರು. ಈಗ ನಿಮಿಕಾ 'ಮಿಸ್ ಟ್ಯಾಲೆಂಟ್ -2017' ಗೆದ್ದುಕೊಳ್ಳುತ್ತಾರೋ ನೋಡಬೇಕು.[ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್‌ ದಂಪತಿ ಕುದ್ರೋಳಿಗೆ ಭೇಟಿ]

ಕರಾವಳಿಯ ಹೊಸ ಬೆಡಗಿ ಈಕೆ

ಕರಾವಳಿಯ ಹೊಸ ಬೆಡಗಿ ಈಕೆ

ಈ ಸ್ಪರ್ಧೆಯಲ್ಲಿ ನಿಮಿಕಾ ಗೆದ್ದರೆ ಕರಾವಳಿಯ ಬೆಡಗಿಯರ ಸಾಲಿಗೆ ಹೊಸ ಮಾಡೆಲ್ ಒಬ್ಬರು ಸೇರ್ಪಡೆಯಾಗಲಿದ್ದಾರೆ. ನಿಮಿಕಾ ರತ್ನಾಕರ್ ಈ ಬಾರಿಯ 'ಮಿಸ್ ಟ್ಯಾಲೆಂಟ್ -2017' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಇವರು ಸ್ಪರ್ಧೆಯಲ್ಲಿ ವಿಜೇತರಾಗಿ ಬರಲಿ ಎಂದು ಶುಭ ಹಾರೈಸೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mangaluru Model Nimika Ratnakar from Kudupu will represent India in ‘Miss Talent Competation-2017’, which will be held in Seol, Capital of South Korea.
Please Wait while comments are loading...