ಮಂಗಳೂರು: ಮತ್ತೆ ಸ್ಕಿಲ್ ಗೇಮ್ ಅಡ್ಡೆಗಳ ಮೇಲೆ ಮೇಯರ್ ದಾಳಿ

Posted By:
Subscribe to Oneindia Kannada

ಮಂಗಳೂರು, ಜುಲೈ 12: ಅನಧಿಕೃತ ಸ್ಕಿಲ್ ಗೇಮ್ ಅಡ್ಡೆಗಳ ಮೇಲೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮಂಗಳೂರಿನ ಫಳ್ನೀರ್ ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಯುವಕರು ಸ್ಕಿಲ್ ಗೇಮ್ ಆಡುತ್ತಿದ್ದರು. ದಾಳಿ ನಡೆಯುತ್ತಿದ್ದಂತೆ ಯುವಕರು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆದಿದೆ.

Mangaluru mayor Kavita Sanil raids Massage Parlour and Skill Games Centers in the city

ಅಕ್ರಮವಾಗಿ ನಡೆಸುತ್ತಿದ್ದ ಸ್ಕಿಲ್ ಗೇಮ್ ಸೆಂಟರ್‌ಗಳಿಗೆ ದಾಳಿ ನಡೆಸಿದ ಮೇಯರ್ ಕವಿತಾ ಸನಿಲ್, ಸಂಜೆ ವೇಳೆಗೆ ತಮ್ಮ ಅಧಿಕಾರಿಗಳೊಂದಿಗೆ ಅಕ್ರಮ ಮಸಾಜ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದರು. ದಿಢೀರ್ ದಾಳಿಗೆ ಮಸಾಜ್ ಪಾರ್ಲರ್ ಮಾಲೀಕರು ಹಾಗೂ ಗ್ರಾಹಕರು ದಂಗಾದರು.

"ನಗರದಲ್ಲಿ ಟ್ರೇಡ್ ಲೈಸೆನ್ಸ್ ಇಲ್ಲದೆ ಅನೇಕ ಸ್ಕಿಲ್ ಗೇಮ್‌ಗಳು ಕಾರ್ಯಾಚರಿಸುತ್ತಿವೆ. ಇದರಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ಇದನ್ನು ತಡೆಯುವುದಕ್ಕಾಗಿ ದಿಢೀರ್ ದಾಳಿ ಮಾಡಲಾಗುತ್ತಿದೆ. ಆಯುರ್ವೇದ ಕ್ಲಿನಿಕ್‌‌ಗಾಗಿ ಲೈಸೆನ್ಸ್ ಪಡೆದು ಕೆಲವರು ಅಕ್ರಮ ಮಸಾಜ್ ಪಾರ್ಲರ್ ನಡೆಸುತ್ತಿರುವ ಬಗ್ಗೆಯೂ ಪಾಲಿಕೆಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ದಾಳಿ ಮಾಡಲಾಗಿದೆ. ಅಕ್ರಮವಾಗಿ ಈ ರೀತಿಯ ವ್ಯವಹಾರ ಮಾಡುವ ಸೆಂಟರ್‌ಗಳನ್ನು ಮುಚ್ಚಲಾಗುವುದು," ಎಂದು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.

Mangaluru mayor Kavita Sanil raids Massage Parlour and Skill Games Centers in the city

"ಈ ರೀತಿ ಯಾವುದೇ ಮುನ್ಸೂಚನೆ ನೀಡದೆ ದಾಳಿ ನಡೆಸಿದ್ದು ಸರಿಯಲ್ಲ. ಇದರಿಂದ ಗ್ರಾಹಕರಿಗೆ ಮುಜುಗರವಾಗುತ್ತದೆ. ಅಷ್ಟಕ್ಕೂ ತಮಗೆ ಮಸಾಜ್ ಸೆಂಟರ್ ತೆರೆಯಲು ಸುಪ್ರೀಂ ಕೋರ್ಟ್‌‌ನಿಂದಲೇ ಅನುಮತಿ ದೊರಕಿರುವಾಗ ಇನ್ಯಾವ ಲೈಸೆನ್ಸ್‌‌ ನ ಅಗತ್ಯವೂ ಇಲ್ಲ," ಎಂದು ಮಸಾಜ್ ಸೆಂಟರ್‌‌ ನ ಮಾಲಕಿ ಸುಜಿತಾ ರೈ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಳಿ ವೇಳೆ 'ನಾವು ಪೊಲೀಸಿನವರನ್ನೇ ನೋಡಿಕೊಳ್ಳುತ್ತೇವೆ. ಇನ್ನು ಪಾಲಿಕೆಯವರನ್ನು ನೋಡಿಕೊಳ್ಳುವುದು ನಮಗೇನು ದೊಡ್ಡ ವಿಷಯವೇ ಅಲ್ಲ. ತಿಂಗಳಾದರೆ ನಾವು ಪೊಲೀಸ್ ಅಧಿಕಾರಿಗಳಿಗೆ ಮಾಮೂಲು ಕೊಡುತ್ತಿದ್ದೇವೆ' ಎಂದು ಘಂಟಾಘೋಷವಾಗಿ ಮಸಾಜ್ ಸೆಂಟರ್‌‌ ನ ಮಾಲಕಿಯೊಬ್ಬರು ಮೇಯರ್ ಗೆ ಸವಾಲೆಸದ ಘಟನೆಯೂ ನಡೆಯಿತು.

Mangaluru mayor Kavita Sanil raids Massage Parlour and Skill Games Centers in the city

ಇನ್ನು ದಾಳಿಯ ವಿಷಯ ತಿಳಿದಿದ್ದ ಪೊಲೀಸರು 2 ಗಂಟೆ ಕಳೆದರು ಸ್ಥಳಕ್ಕೆ ಆಗಮಿಸಲಿಲ್ಲ. ಕೊನೆಗೆ ಡಿಸಿಪಿ ಅವರೇ ಖುದ್ದು ಬಂದು ಮಾಲಕಿಯನ್ನು ವಶಕ್ಕೆ ಪಡೆದು ಮಸಾಜ್ ಸೆಂಟರ್ ಗೆ ಬೀಗ ಜಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Daring Mayor Kavitha Sanil once again raided massage parlours and skill games centers in various places in the Mangaluru city here on July 11.
Please Wait while comments are loading...