ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

100ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಹೆಗ್ಗಳಿಕೆ ಇವರದು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂನ್ 14 : ಇಂದು ವಿಶ್ವ ರಕ್ತದಾನ ದಿನ. ಒಬ್ಬನ ಜೀವ ಉಳಿಸಬಲ್ಲ ರಕ್ತ ಜೀವಜಾಲದ ಪ್ರಮುಖ ಕಣ. ಆದರೆ, ರಕ್ತದಾನದ ಬಗ್ಗೆ ಎಷ್ಟು ಪ್ರಚಾರ ಇದ್ದರೂ, ರಕ್ತದಾನಕ್ಕೆ ಮುಂದಾಗುವವರ ಸಂಖ್ಯೆ ಕಡಿಮೆ. ಈ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಮಹಾದಾನಿಯೊಬ್ಬರ ಪರಿಚಯ ಇಲ್ಲಿದೆ.

ಇವರು ಜನಾರ್ದನ ಕರ್ಕೇರ (61). ಮಂಗಳೋರಿನ ಏಯಡಿಯ, ಗಾರ್ಡನ್ ಹಿಲ್ ನಿವಾಸಿ. 15 ವರ್ಷಗಳ ಕಾಲ ಯೋಧನಾಗಿ ದೇಶಕಾದ ಅವರು, ವಿವಿಧೆಡೆ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. 30 ವರ್ಷ ಕೆನರಾ ಬ್ಯಾಂಕಿನಲ್ಲಿ ಸೆಕ್ಯುರಿಟಿ ಚೀಫ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ವಿಶೇಷ ಅಂದ್ರೆ, ಇವರು ಕಳೆದ 22 ವರ್ಷಗಳಲ್ಲಿ 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. [ರಕ್ತದ ಗುಂಪು ಬೇರ್ಪಡಿಸಿದಾತನಿಗೆ ಗೂಗಲ್ ಡೂಡ್ಲ್ ನಮನ]

janardhan karkera

ರಕ್ತ ನೀಡುವುದೆಂದರೆ ಹಿಂಜರಿಯುವ ಕಾಲದಲ್ಲಿ ಇವರು, ಯಾರು ರಕ್ತಕ್ಕಾಗಿ ಕರೆ ಮಾಡಿದರೂ ರಕ್ತ ನೀಡು ಬರುತ್ತಾರೆ. ಮೂರು ತಿಂಗಳಿಗೊಮ್ಮೆ ಮಾತ್ರ ರಕ್ತ ನೀಡಬೇಕು ಅಂದಿದ್ದರೂ, ಜನಾರ್ದನ ಕರ್ಕೇರ ಅವರು ವೈದ್ಯರ ಷರತ್ತನ್ನೂ ಮೀರಿ ರಕ್ತದಾನ ಮಾಡಿದ್ದಾರೆ. [ರಕ್ತದಾನಕ್ಕಾಗಿ ಆಂಡ್ರಾಯ್ಡ್ ಅಪ್ಲಿಕೇಷನ್]

ಈಗಲೂ ದೃಢ ಕಾಯದವರಾಗಿರುವ ಜನಾರ್ದನ ಕರ್ಕೇರ ಅವರು, ಈ ತನಕ ಯಾವುದೇ ಕಾಯಿಲೆಗೆ ಬಿದ್ದವರಲ್ಲ. ಕಾಶ್ಮೀರ, ಅರುಣಾಚಲದಲ್ಲಿ ಗಡಿ ಕಾಯುವಾಗಲೂ 2-3 ಬಾರಿ ರಕ್ತ ನೀಡಿದ್ದರೂ, 1992ರ ನಂತರ ರಕ್ತ ನೀಡುವುದನ್ನೇ ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. [ತುರ್ತಾಗಿ ರಕ್ತಬೇಕೆ?, ವೆಬ್‌ಸೈಟ್‌ಗೆ ಭೇಟಿ ಕೊಡಿ]

ಕರ್ಕೇರ ಅವರ ರಕ್ತದಾನ ಹವ್ಯಾಸದಿಂದ ಇಡೀ ಕುಟುಂಬವೇ ಪ್ರೇರಣೆ ಪಡೆದಿದೆ. ಕರ್ಕೇರ ಪತ್ನಿ, ಇಬ್ಬರು ಮಕ್ಕಳು ಈಗ ರಕ್ತದಾನ ಮಾಡುತ್ತಿದ್ದು, ಅಪರೂಪದ ರಕ್ತದಾನಿಗಳ ಕುಟುಂಬ ಅನ್ನೋ ಹೆಗ್ಗಳಿಕೆಯನ್ನು ಇವರು ಪಡೆದಿದ್ದಾರೆ.

ವಿಶ್ವ ರಕ್ತದಾನಿಗಳ ದಿನದಂದು ಅಪರೂಪದ ರಕ್ತದಾನಿಯೊಬ್ಬರ ಕತೆ ಎಲ್ಲರಿಗೂ ಮಾದರಿಯಾಗುವಂತಿದ್ದು, ಜೀವ ಉಳಿಸಬಲ್ಲ ರಕ್ತದಾನಕ್ಕೆ ನಾವೆಲ್ಲ ಜಾಗೃತರಾಗೋಣ ಅನ್ನೋ ಕಳಕಳಿ ನಮ್ಮದು. ರಕ್ತಕ್ಕಾಗಿ ಸಂಪರ್ಕಿಸಿ 7259794738.

English summary
Mangaluru based 61-year-old Janardhan Karkera role model for others. Janardhan donated blood more than 100 times. Let's salute for his achievement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X