ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿಳಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ, 26 ಗಿಳಿಗಳ ರಕ್ಷಣೆ

|
Google Oneindia Kannada News

ಮಂಗಳೂರು, ಜನವರಿ 12: ತಮಿಳುನಾಡಿನಿಂದ ಗಿಳಿಗಳನ್ನು ತರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಯೋರ್ವನನ್ನು ಬಂಟ್ವಾಳದಲ್ಲಿ ಬೆಂಗಳೂರು ಸಿ.ಐ.ಡಿ.ಪೋಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಅಬ್ದುಲ್ ಲತೀಪ್ ಎಂದು ಗುರತಿಸಲಾಗಿದೆ.

ಬಂಟ್ವಾಳ ತಾಲೂಕಿನ ಮೆಲ್ಕಾರ್ ಎಂಬಲ್ಲಿ ಎರಡು ಪಂಜರದಲ್ಲಿ ಸುಮಾರು 26 ಜೀವಂತ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಬೆಂಗಳೂರು ಸಿ.ಐ.ಡಿ. ಎಸ್.ಐ.ಹೆಚ್.ಕೆ.ರವಿಕುಮಾರ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

Mangaluru: Man arrested for selling wild Parrots

ಅಬ್ದುಲ್ ಲತೀಪ್ ಅವರು ತಮಿಳುನಾಡಿನಿಂದ ಗಿಳಿಗಳನ್ನು ತರಿಸಿ ಈ ಹಿಂದೆ ಅನೇಕ ಗಿಳಿಗಳ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬೆಂಗಳೂರು ಸಿ ಐ ಡಿ ಪೊಲೀಸರ ತಂಡ ದಾಳಿ ನಡೆಸಿದೆ. ಶುಕ್ರವಾರ ರಾತ್ರಿ ಖಚಿತ ಮಾಹಿತಿಯ ಮೇಲೆ ಬಂಟ್ವಾಳ ಕ್ಕೆ ಅಗಮಿಸಿದ ಬೆಂಗಳೂರು ಸಿ.ಐ.ಡಿ.ಪೋಲೀಸರು ಬಂಟ್ವಾಳದ ಮೆಲ್ಕಾರ್ ಎಂಬಲ್ಲಿ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುರುವ ವೇಳೆ ರೆಡ್ ಹ್ಯಾಂಡ್ ಅಗಿ ಬಂಧಿಸಿದ್ದಾರೆ.

ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1072 ರಡಿಯಲ್ಲಿ ಕೇಸು ದಾಖಲಿಸಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳು 26 ಜೀವಂತ ಗಿಳಿಗಳನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

English summary
Bangaluru CID police team arrested a man who selling wild Parrots in Bantwal. 26 parrots were rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X