• search

ಕುದ್ರೋಳಿ ಶಾರದಾ ಮಾತೆ ಶೋಭಾಯಾತ್ರೆ ಭಾರೀ ಜೋರು

By ಐಸಾಕ್ ರಿಚರ್ಡ್
Subscribe to Oneindia Kannada
For mangaluru Updates
Allow Notification
For Daily Alerts
Keep youself updated with latest
mangaluru News

  ಮಂಗಳೂರು, ಅಕ್ಟೋಬರ್, 22 : ನವರಾತ್ರಿ ಮಹೋತ್ಸವದ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಅ. 23ರ ಶುಕ್ರವಾರದಂದು ಸಂಜೆ 4ಕ್ಕೆ ಆರಂಭವಾಗಲಿದೆ. ಆದರೆ ಇದರ ಉದ್ಘಾಟನೆಯನ್ನು ಯಾರು ಮಾಡುತ್ತಾರೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

  ಮಾಜಿ ಕೇಂದ್ರ ಸಚಿವ ಹಾಗೂ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮೆರವಣಿಗೆಯು ಶ್ರೀ ಕ್ಷೇತ್ರ- ಕಂಬಳರಸ್ತೆ-ಮಣ್ಣಗುಡ್ಡೆ-ಲೇಡಿಹಿಲ್ ಸರ್ಕಲ್‌- ಲಾಲ್‌ಬಾಗ್‌-ಪಿವಿಎಸ್ ಸರ್ಕಲ್‌-ಹಂಪನಕಟ್ಟೆ- ವಿ.ವಿ. ಕಾಲೇಜು-ಗಣಪತಿ ಹೈಸ್ಕೂಲ್ ರಸ್ತೆ- ರಥಬೀದಿ-ಚಿತ್ರಾ-ಅಳಕೆ ಹಾದು ಮತ್ತೆ ಕುದ್ರೋಳಿ ಕ್ಷೇತ್ರಕ್ಕೆ ಶನಿವಾರ ಮುಂಜಾನೆ ಬರಲಿದೆ.[ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಆಚರಿಸುವ ಬಗೆ ಹೇಗೆ?]

  Mangaluru: last day of dasara is held by guidence of Janardhana pujari on October 23rd

  ಶ್ರೀ ಮಹಾಗಣಪತಿ, ಆದಿಶಕ್ತಿ, ನವ ದುರ್ಗೆಯರು, ಶಾರದಾ ಮಾತೆಯ ವಿಗ್ರಹಗಳ ಸಹಿತವಾದ ಈ ವರ್ಣರಂಜಿತ ಬೃಹತ್‌ ದಸರಾ ಮೆರವಣಿಗೆ ಆಕರ್ಷಕ ವಿದ್ಯುದ್ದೀಪಾಲಂಕೃತ ಮಂಟಪ, ಟ್ಯಾಬ್ಲೋಗಳು, ಕೇರಳದ ಚೆಂಡೆ ವಾದ್ಯ, ಬೆಂಗಳೂರಿನ ವಾದ್ಯ ತಂಡ, ರಾಜ್ಯದ ವಿವಿಧೆಡೆಯ ಕಲಾವಿದರ ಜಾನಪದ-ಸಾಂಸ್ಕೃತಿಕ ಪ್ರದರ್ಶನ, ಮಹಾರಾಷ್ಟ್ರದ ಡೋಲು ನೃತ್ಯ, ಆಂಧ್ರಪ್ರದೇಶದ ಬಾಲಮುರಳಿಕೃಷ್ಣ ಕೋಲಾಟ, ಕಲ್ಲಡ್ಕದ ಶಿಲ್ಪಾ ಗೊಂಬೆ, ತೃಶ್ಶೂರ್ ನ ಬಣ್ಣದ ಕೊಡೆ, ಹುಲಿವೇಷಗಳು, ವಾದ್ಯವೃಂದ, ಕರಾವಳಿಯ ವಿವಿಧ ಪುಣ್ಯಕ್ಷೇತ್ರಗಳ ಸಹಕಾರದ ಟ್ಯಾಬ್ಲೋಗಳು, ದೇಶದ ಪರಂಪರೆಯ ಸ್ತಬ್ಧಚಿತ್ರಗಳನ್ನು ಹೊಂದಿರುತ್ತವೆ ಎಂದು ತಿಳಿಸಲಾಗಿದೆ.[ಅಂಬಾರಿ ಹೊರುವ ಅರ್ಜುನನ ತಾಲೀಮು ಹೇಗಿರುತ್ತೆ?]

  ಅ. 13ರಂದು ನವದುರ್ಗೆಯರು ಹಾಗೂ ಶ್ರೀ ಶಾರದೆಯ ಪ್ರತಿಷ್ಠೆ ಸಹಿತ ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಆರಂಭವಾಗಿತ್ತು. ನಿತ್ಯವೂ ಸಹಸ್ರಾರು ಜನ ನವದುರ್ಗೆಯರನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ ಜನಸಾಗರವೇ ಕಾಣುತ್ತದೆ.

  ಇನ್ನಷ್ಟು ಮಂಗಳೂರು ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Mangaluru last day of dasara is very exuberance at Mangaluru on Friday, October 23rd. Dasara procession starts from Gokarnanatha, Mannagudde, Lady hill circle, Lalbagh, PVS circle, Hampanakatte.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more