ಕೋಡಿಕೆರೆ ಶಿವರಾಜ್ ಕೊಲೆ ಆರೋಪಿ ದಿನೇಶ್ ಗೆ ಜೀವಾವಧಿ ಶಿಕ್ಷೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 2 : 2012ರ ಕೋಡಿಕೆರೆ ಶಿವರಾಜ್ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕುಳಾಯಿ ನಿವಾಸಿ ದಿನೇಶ್ ಕುಲಾಲ್(27)ಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಶಿವರಾಜ್ ಕುಲಾಲ್ ಕೊಲೆ ಪ್ರಕರಣದಲ್ಲಿ ದಿನೇಶ್ ಹಾಗೂ ಪ್ರಕಾಶ್ ಪ್ರಮುಖ ಆರೋಪಿಗಳಾಗಿದ್ದು, ಇವರಿಗೆ ಸೌದಿಯಲ್ಲಿರುವ ಅಶ್ರಫ್ ಎಂಬಾತ ಸುಪಾರಿ ನೀಡಿದ್ದ ಎನ್ನಲಾಗಿದೆ.

Mangaluru: Kodikere Shivaraj murder in 2012-Convict gets life term

ಶಿವರಾಜ್ ಕುಲಾಲ್ ಕೊಲೆ ಯ ಎರಡನೇ ಆರೋಪಿಯಾಗಿದ್ದ ಪ್ರಕಾಶ್‌ನನ್ನು 2014 ರಲ್ಲಿ ತಂಡವೊಂದು ಎನ್‌ಐಟಿಕೆ ಬಸ್ ನಿಲ್ದಾಣದಲ್ಲಿ ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದಿದ್ದರು.

ದಿನೇಶ್ ಜೈಲಿನಲ್ಲಿದ್ದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದಂಡದ ಮೊತ್ತವನ್ನು ಶಿವರಾಜ್ ಮನೆಯವರಿಗೆ ನೀಡುವಂತೆ ಆದೇಶದಲ್ಲಿ ಹೇಳಲಾಗಿದೆ. ಸರಕಾರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ್ ವಾದ ಮಂಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The fourth additional district and sessions court here on Saturday December 31 sentenced an accused in Kodikere Shivaraj murder case to life imprisonment.
Please Wait while comments are loading...