ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ: ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಗಸ್ಟ್ 12: ರಾಜ್ಯ ಸರ್ಕಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದ ನೆರವಿಗೆ ತಡೆ ಮಾಡಿರುವುದನ್ನು ವಿರೋಧಿಸಿ ಆಗಸ್ಟ್ 11 ರಂದು ನಡೆದ 'ಭಿಕ್ಷಾಂ ದೇಹಿ ಪ್ರತಿಭಟನೆ' ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತ ವಿಷಯವಾಗಿದ್ದು ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಆಗಿದೆ.

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಶೇ 90. ರಷ್ಟು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳಿದ್ದು, ಧಾರ್ಮಿಕ ದತ್ತಿ ಇಲಾಖೆ ಮೂಲಕ ಅಲ್ಲಿಗೆ ನೀಡುತ್ತಿದ್ದ ಅನುದಾನವನ್ನು ರಾಜ್ಯ ಸರ್ಕಾರ ದಿಢೀರನೆ ರದ್ದುಗೊಳಿಸಿದ್ದು ಚರ್ಚಿತ ವಿಷಯವಾಗಿದೆ.

Mangaluru Kalladka Shrirama education institution is trending in twitter

ಇದೇ ವೇಳೆ ಡಾ. ಪ್ರಭಾಕರ ಭಟ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕೊಲ್ಲೂರು ದೇವಳದಿಂದ ಮಕ್ಕಳ ಊಟಕ್ಕಾಗಿ ಅನುದಾನ ಕೊಡದಿದ್ದರೆ ನಾವು ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕಿಸುತ್ತೇನೆ ಎಂದು ಹೇಳಿದ ಬಳಿಕ "ಪೋಸ್ಟ್ ಕಾರ್ಡ್" ಎಂಬ ಸಾಮಾಜಿಕ ಜಾಲತಾಣ ಈ ಅಭಿಯಾನ ಕೈಗೆತ್ತಿಕೊಂಡಿತ್ತು.

ಯಾವಾಗ ಒಬ್ಬ ರಾಜನಾಗಿ ಪ್ರಜೆಯನ್ನು ಕಾಪಾಡಲು ಅಸಾಧ್ಯವೋ ಆಗ ಅದರ ಹೊಣೆ ಸಮಾಜದಲ್ಲಿ ಒಂದಾಗಿರುವ ನಮ್ಮ ಮೇಲಿರುತ್ತದೆ ಸರಕಾರ ಇನ್ನು ಮುಂದಿನ ಎಂಟು ತಿಂಗಳ ಕಾಲ ಆಳ್ವಿಕೆ ಮಾಡಲಿದೆ. ಅಷ್ಟು ಸಮಯ ಅವರ ಊಟದ ವ್ಯವಸ್ಥೆ ಸಮಾಜ ಹಿತವನ್ನು ಬಯಸುವ ನಾವು ಮಾಡಬೇಕಾಗಿದೆ ಹಾಗಾಗಿ ಮಕ್ಕಳ ಪರವಾಗಿ ಭಿಕ್ಷೆ ಬೇಡುವ ಆಂದೋಲನಕ್ಕೆ ಹೊರಟಿದ್ದೇವೆ ಎಂದು ಪೋಸ್ಟ್ ಕಾರ್ಡ್ ಹೇಳಿತ್ತು.

ಒಂದು ವಿದ್ಯಾರ್ಥಿಗೆ ತಲಾ 10.ರೂಪಾಯಿ ನಂತೆ ದಿನ ಖರ್ಚು ಬೀಳುತ್ತದೆ. ಹೀಗೆ 3016 ವಿದ್ಯಾರ್ಥಿಗಳ ಖರ್ಚನ್ನು ನೋಡಿಕೊಳ್ಳಲು ಭಿಕ್ಷೆ ನೀಡಿ ಎಂದು ಭಿಕ್ಷಾಂದೇಹಿ ಹ್ಯಾಶ್ ಟ್ಯಾಗ್ ನೊಂದಿಗೆ ಆರಂಭಿಸಿದೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದೆ ಇದರಲ್ಲಿ ಬ್ಯಾಂಕ್ ಅಕೌಂಟ್ ಇನ್ನಿತರ ವಿವರಗಳು ನಮೂದಿಸಿದ ಕಾರಣ ಕಲ್ಲಡ್ಕ ಸಂಸ್ಥೆಗೆ ನೆರವಿನ ಹರಿವು ಬರತೊಡಗಿದೆ.

ಪ್ರತಿಭಟನೆ ನಡೆದ ಬೆನ್ನಲ್ಲೇ ಭಿಕ್ಷಾಂ ದೇಹಿ ಟ್ವಿಟ್ಟರಿನಲ್ಲಿ ಮೇಲಿಂದ ಮೇಲೆ ಕಾಣಿಸತೊಡಗಿದವು ಫೇಸ್ ಬುಕ್ ನಲ್ಲೂ ಕಾಣಿಸಿದೆ ಈ ಟ್ರೆಂಡ್ ರಾತ್ರಿಯಾಗುತ್ತಿದ್ದಂತೆ ಜನಪ್ರಿಯವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Kalladka Shrirama education institution became a trending subject in twitter, after goverment stops to grant money to maintenence of the school.
Please Wait while comments are loading...