ಕೋಸ್ಟ್ ಗಾರ್ಡ್ ವಾಯುನೆಲೆಗೆ ಇನ್ನೂ ದೊರಕಿಲ್ಲ ಹೆಲಿಕಾಪ್ಟರ್!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 14 : ಕರ್ನಾಟಕದ ಕರಾವಳಿ ತೀರಕ್ಕೆ ಗರಿಷ್ಟ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತೀಯ ಕೋಸ್ಟ್ ಗಾರ್ಡ್ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ವಾಯು ನೆಲೆ ಸ್ಥಾಪಿಸಿದೆ. ಆದರೆ, ಈ ಘಟಕ ಆರಂಭವಾಗಿ ಆರು ತಿಂಗಳು ಕಳೆದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಸಾಧ್ಯವಾಗಲಿಲ್ಲ.

ಕೋಸ್ಟ್ ಗಾರ್ಡ್ ವಾಯುನೆಲೆ ಸ್ಥಾಪನೆ ಪ್ರಸ್ತಾವನೆ ಹಲವು ವರ್ಷಗಳ ಹಿಂದಿನದ್ದು. ಆದರೆ, ಸೂಕ್ತ ಸ್ಥಳಾವಕಾಶ ಸಿಕ್ಕದ ಹಿನ್ನಲೆಯಲ್ಲಿ ಪ್ರಸ್ತಾಪ ಹಾಗೆಯೇ ಮುಂದುವರೆದಿತ್ತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೆಂಜರಿನಾ ಹೊಸ ಟರ್ಮಿನಲ್ ಗೆ ಸ್ಥಳಾಂತರವಾದ ಬಳಿಕ ಹಳೇ ಟರ್ಮಿನಲ್‌ನಲ್ಲಿ ವಾಯುನೆಲೆ ಸ್ಥಾಪನೆಗೆ ಕೋಸ್ಟ್ ಗಾರ್ಡ್ ಪ್ರಸ್ತಾಪ ಮುಂದಿಟ್ಟಿತ್ತು.[75 ವರ್ಷಗಳ ಕನಸಾದ ಫಲ್ಗುಣಿ ತೂಗುಸೇತುವೆ ಉದ್ಘಾಟನೆ]

Mangaluru Indian Coast Guard yet to receive helicopters

ಇದಕ್ಕೆ ಅನುಮತಿ ಸಿಕ್ಕ ಬಳಿಕ ಕಳೆದ ಆರು ತಿಂಗಳಿನಿಂದ ಭಾರತೀಯ ಕೋಸ್ಟ್ ಗಾರ್ಡ್ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ ಟರ್ಮಿನಲ್‌ನಲ್ಲಿ ಕಾರ್ಯಾಚರಿಸುತ್ತಿದೆ. ಆದರೆ, ವಾಯುನೆಲೆಗೆ ಅಗತ್ಯವಾದ ಹೆಲಿಕಾಪ್ಟರ್ ಬಾರದೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಕ್ಕೆ ಸಾಧ್ಯವಾಗಿಲ್ಲ.[ಮಂಗಳೂರು : ನಾಡದೋಣಿ ಮುಳುಗಡೆ, ಇಬ್ಬರ ಸಾವು]

ಸದ್ಯಕ್ಕೆ ಮಂಗಳೂರು ಸೇರಿದಂತೆ ಕರಾವಳಿ ತೀರದಲ್ಲಿ ತುರ್ತು ಸಂದರ್ಭ ವಾಯು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲು ಹೆಲಿಕಾಪ್ಟರ್‌ಗಳನ್ನು ಕೇರಳದ ಕೊಚ್ಚಿಯಿಂದ ಅಥವಾ ಗೋವಾದಿಂದ ತರಬೇಕಾಗುತ್ತದೆ. ಇದು ಬಹಳಷ್ಟು ವಿಳಂಬವಾಗುವುದರಿಂದ ಮಂಗಳೂರಿನಲ್ಲೇ ವಾಯುನೆಲೆ ಸ್ಥಾಪಿಸಿ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ನಿರ್ಧರಿಸಿತ್ತು.[ಮಂಗಳೂರು-ಲಕ್ಷದ್ವೀಪದ ನಡುವಿನ ಸಂಬಂಧ ಮತ್ತಷ್ಟು ವೃದ್ಧಿ]

ಆರಂಭದಲ್ಲಿ ಎರಡು ಚೇತಕ್ ಹೆಲಿಕಾಪ್ಟರ್‌ಗಳನ್ನು ಇಲ್ಲಿ ಇಡುವ ವ್ಯವಸ್ಥೆ ಮಾಡಲು ಕೋಸ್ಟ್ ಗಾರ್ಡ್ ಚಿಂತನೆ ನಡೆಸಿದೆ. ಮಂಗಳೂರು ವಿಮಾನ ನಿಲ್ದಾಣ ಸಮುದ್ರ ತೀರಕ್ಕೆ ಸಮೀಪವಿರುವುದರಿಂದ ತುರ್ತು ಸಂದರ್ಭ ತಕ್ಷಣ ಕಾರ್ಯಾಚರಣೆಗೆ ಇದರಿಂದ ಅನುಕೂಲವಾಗಿದೆ.

ಬಜಪೆಯಲ್ಲಿರುವ ಮಂಗಳೂರು ಹಳೇ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಸುಮಾರು 4 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಕೋಸ್ಟ್ ಗಾರ್ಡ್‌ಗೆ ನೀಡಲಾಗಿದೆ. ಇಲ್ಲಿ ಕೋಸ್ಟ್ ಗಾರ್ಡ್ ಕಚೇರಿ ಸ್ಥಾಪಿಸಲಾಗಿದೆ. ಈ ಕಚೇರಿಯಲ್ಲಿ ವಾಯು ಕಾರ್ಯಾಚರಣೆಗೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಸಿಬ್ಬಂದಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ರನ್‌ವೇ ಪಕ್ಕದ ವಿಮಾನ ಪಾರ್ಕಿಂಗ್ ಪ್ರದೇಶದಲ್ಲಿ ಎರಡು ಹೆಲಿಕಾಪ್ಟರ್‌ಗಳ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ.

ಮಂಗಳೂರಿನಲ್ಲೇ ಕೋಸ್ಟ್ ಗಾರ್ಡ್ ವಾಯುನೆಲೆ ಸ್ಥಾಪನೆಯಾದರೂ ಇಲ್ಲಿ ಅಗತ್ಯ ಹೆಲಿಕಾಪ್ಟರ್ ವ್ಯವಸ್ಥೆ ಇಲ್ಲದ ಕಾರಣ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ವಾಯುನೆಲೆಗೆ ಅಗತ್ಯ ಹೆಲಿಕಾಪ್ಟರ್ ವ್ಯವಸ್ಥೆಯಾದರೆ ಭದ್ರತಾ ವ್ಯವಸ್ಥೆ ಹಾಗೂ ಬೋಟ್ ದುರಂತದ ಸಂದರ್ಭ ಅಗತ್ಯ ರಕ್ಷಣಾ ಕಾರ್ಯಾಚರಣೆಗೂ ಅನುಕೂಲವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Coast Guard have space at Mangaluru International Airport for positioning its air squadron was fulfilled. The Airports Authority of India handed over about 17,000 sq ft of space in its old terminal building at Bajpe to the coast guard. But, coast guard yet to receive helicopters.
Please Wait while comments are loading...