ಐಸ್‍ಕ್ರೀಂ ಕ್ಷೇತ್ರದಲ್ಲಿ ಸಾಧನೆಗೈದ ಮಂಗ್ಳೂರ 'ಐಡಿಯಲ್ ಐಸ್ ಕ್ರೀಮ್ಸ್'

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು,ಫೆಬ್ರವರಿ,13: ಮಂಗಳೂರು ಹೇಳಿಕೇಳಿ ಬಾಯಲ್ಲಿ ನೀರೂರಿಸುವ ಖಾದ್ಯಗಳಿಗೆ ಪ್ರಖ್ಯಾತಿ ಪಡೆದ ನಗರ. ಇಲ್ಲಿನ ಪಾಕ ಪ್ರವೀಣರು ಖಾದ್ಯ ವಿಭಾಗದಲ್ಲಿ ಒಂದಿಲ್ಲೊಂದು ಪ್ರಯೋಗಗಳನ್ನು ಮಾಡಿ ಖಾದ್ಯಪ್ರಿಯರಿಗೆ ರುಚಿಕರವಾದ ಹೊಸತೊಂದು ಖಾದ್ಯವನ್ನು ಪರಿಚಯಿಸುತ್ತಾರೆ. ಈ ಪ್ರಯೋಗ ಕ್ಷೇತ್ರಗಳ ಪೈಕಿ ಐಸ್‍ಕ್ರೀಂ ಕ್ಷೇತ್ರ ಕೂಡಾ ಹೊರತಾಗಿಲ್ಲ. ಇದಕ್ಕೆ ಸಾಕ್ಷಿ ಮಂಗಳೂರಿನ ಐಡಿಯಲ್ ಐಸ್‍ಕ್ರೀಂ ಕೆಫೆ.

ಮಂಗಳೂರಿನ ಪ್ರಖ್ಯಾತ ಐಸ್‍ಕ್ರೀಂ ಮಳಿಗೆಯ ಮಾಲಿಕರಾದ ಮುಕುಂದ್ ಕಾಮತ್ ತಮ್ಮ ಪ್ರಯೋಗಗಳಿಂದ ಇಡೀ ವಿಶ್ವದ ಗಮನ ಸೆಳೆದವರು. ಇದೀಗ ನ್ಯೂಮರೋ ಯೂನೋ ಪ್ರಶಸ್ತಿಯನ್ನು ಪಡೆದುಕೊಂಡು ಎಲ್ಲರಿಗೂ ಇನ್ನಷ್ಟು ಚಿರಪರಿಚಿತರಾಗಿದ್ದಾರೆ.

ಡ್ಯುಪೋಂಟ್ ಸಂಸ್ಥೆಯು ದೆಹಲಿಯ ಸಮೀಪದ ಗುರ್ ಗಾಂವ್ ನ ಹಿಲ್ಟನ್ ಹೊಟೆಲ್ ನಲ್ಲಿ ಆಯೋಜಿಸಿದ ಬೃಹತ್ ಐಸ್‍ಕ್ರೀಂ ಸ್ಪರ್ಧೆಯಲ್ಲಿ ಮುಕುಂದ್ ಕಾಮತ್ ಅವರ ಮಾಲಿಕತ್ವದ ಐಡಿಯಲ್ ಕೆಫೆ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಜೊತೆಗೆ 'ಸ್ವಿಸ್ ಚಾಕಲೇಟ್ ನ ಸ್ವಾದವನ್ನು ಹೊಂದಿರುವ ಐಸ್‍ಕ್ರೀಂ ದೇಶದ ಅತ್ಯಂತ ಉತ್ತಮ ಐಸ್‍ಕ್ರೀಂ' ಎನ್ನುವ ಹಿರಿಮೆಯನ್ನೂ ಗಳಿಸಿಕೊಂಡಿದೆ.[ಬಾಯಿಯಲ್ಲಿ ನೀರೂರಿಸುವ ವಿಭಿನ್ನ ರುಚಿಯ ಐಸ್ ಕ್ರೀಮ್]

ಐಸ್‍ಕ್ರೀಂ ತಯಾರಿಕಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿರುವ ಐಡಿಯಲ್ ಐಸ್‍ಕ್ರೀಮ್ಸ್ ಈ ರೀತಿ ಬಹುಮಾನಗಳನ್ನು ಪಡೆದಿರುವುದು ಇದೇ ಮೊದಲಲ್ಲ. ಸಂಸ್ಥೆಯ ಐಸ್‍ಕ್ರೀಂ ವೈವಿಧ್ಯಗಳಿಗೆ ಈಗಾಗಲೇ ಹತ್ತಾರು ಪ್ರಶಸ್ತಿಗಳು ಸಂದಿವೆ. ಮಂಗಳೂರಿನ ಐಡಿಯಲ್ ಐಸ್‍ಕ್ರೀಮ್ಸ್ ಸಂಸ್ಥೆಯ ಹಿರಿಮೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಐಸ್ ಕ್ರೀಮ್ಸ್ ಸ್ಪರ್ಧೆಯಲ್ಲಿ ಎಷ್ಟು ಕಂಪನಿಗಳು ಭಾಗವಹಿಸಿದ್ದವು?

ಐಸ್ ಕ್ರೀಮ್ಸ್ ಸ್ಪರ್ಧೆಯಲ್ಲಿ ಎಷ್ಟು ಕಂಪನಿಗಳು ಭಾಗವಹಿಸಿದ್ದವು?

ಅಂತರಾಷ್ಟ್ರೀಯ ಮಟ್ಟದ ಐಸ್ ಕ್ರೀಮ್ಸ್ ಸ್ಪರ್ಧೆಯಲ್ಲಿ ಮಂಗಳೂರಿನ ಐಡಿಯಲ್ ಐಸ್ ಕ್ರೀಮ್ಸ್ ಸಂಸ್ಥೆ ಸೇರಿ ಸುಮಾರು 94 ಕಂಪನಿಗಳ ಸುಮಾರು 500 ಬಗೆಯ ಐಸ್‍ಕ್ರೀಂಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಮಂಗಳೂರು ಐಡಿಯಲ್ ಐಸ್ ಕ್ರೀಮ್ಸ್ ಸಂಸ್ಥೆ ಪಡೆದ ಪ್ರಶಸ್ತಿ ಎಷ್ಟು?

ಮಂಗಳೂರು ಐಡಿಯಲ್ ಐಸ್ ಕ್ರೀಮ್ಸ್ ಸಂಸ್ಥೆ ಪಡೆದ ಪ್ರಶಸ್ತಿ ಎಷ್ಟು?

ಈ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ಮೂರು ಐಸ್‍ಕ್ರೀಂಗಳು ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ಪಡೆದುಕೊಂಡವು. ಜೊತೆಗೆ ಒಂದು ಸ್ಪೆಷಲ್ ಕೆಟಗರಿ ಅವಾರ್ಡ್ ಅನ್ನು ಕೂಡಾ ಮುಡಿಗೇರಿಸಿಕೊಂಡಿತು. ಪದಕಗಳನ್ನು ಸ್ವೀಕರಿಸುವ ವೇಳೆ ಇಂಡಿಯಾದ ಮಾಸ್ಟರ್ ಶೆಫ್ ಖ್ಯಾತಿಯ ಕುನಾಲ್ ಕಪೂರ್ ಅವರ ಜೊತೆ ವೇದಿಕೆ ಹಂಚಿಕೊಂಡದ್ದು ನಿಜಕ್ಕೂ ಅವಿಸ್ಮರಣೀಯ ಎಂದು ಐಡಿಯಲ್ ಐಸ್‍ಕ್ರೀಮ್ಸ್ ನ ಮಾಲಿಕ ಮುಕುಂದ್ ಪ್ರಭು ಒನ್ ಇಂಡಿಯಾದೊಂದಿಗೆ ತಮ್ಮ ಸಂತಸ ಹಂಚಿಕೊಂಡರು.

ಐಡಿಯಲ್ ಐಸ್ ಕ್ರೀಮ್ಸ್ ಸಂಸ್ಥೆಗೆ ಮೊದಲು ಸಂದ ಪ್ರಶಸ್ತಿಗಳು

ಐಡಿಯಲ್ ಐಸ್ ಕ್ರೀಮ್ಸ್ ಸಂಸ್ಥೆಗೆ ಮೊದಲು ಸಂದ ಪ್ರಶಸ್ತಿಗಳು

2013ರಲ್ಲಿ ನಡೆದ ಸ್ಪರ್ಧೆಯಲ್ಲಿ ಐಡಿಯಲ್ ಐಸ್‍ಕ್ರೀಮ್ಸ್ ನ ಕ್ರೀಮೀ ವೆನಿಲ್ಲಾ ಹಾಗೂ ಹಲಸಿನಕಾಯಿ ಪಾಯಸ ಐಸ್‍ಕ್ರೀಂಗೆ ಒಟ್ಟು ಐದು ಪ್ರಶಸ್ತಿಗಳು ಸಂದಿದ್ದವು. ಕಳೆದ ಸ್ಪರ್ಧೆಯಲ್ಲಿ ಕೇವಲ 73 ಕಂಪನಿಗಳ ಐಸ್‍ಕ್ರೀಂ ತಯಾರಕರು ಭಾಗವಹಿಸಿದ್ದರೆ ಈ ಬಾರಿ ಬರೋಬ್ಬರಿ 94 ಕಂಪನಿಗಳು ಭಾಗವಹಿಸಿದ್ದವು.

ಐಸ್‍ಕ್ರೀಂ ತಯಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಹುಟ್ಟಿಸಿದ ಐಡಿಯಲ್

ಐಸ್‍ಕ್ರೀಂ ತಯಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಹುಟ್ಟಿಸಿದ ಐಡಿಯಲ್

ಐಸ್‍ಕ್ರೀಂ ತಯಾರಿಕಾ ಕ್ಷೇತ್ರದಲ್ಲಿ ಐಡಿಯಲ್ ಐಸ್‍ಕ್ರೀಂಸ್ ದೊಡ್ಡ ಕ್ರಾಂತಿಯನ್ನೇ ಮಾಡಿದೆ. 1975ರಲ್ಲಿ ಸಣ್ಣ ಕುಟುಂಬದ ಮೂಲಕ ಆರಂಭಗೊಂಡ ಸಣ್ಣ ಉದ್ಯಮ ಇದೀಗ ಜಗತ್ತಿನ ಅತೀ ದೊಡ್ಡ ವೆನಿಲ್ಲಾ ಐಸ್‍ಕ್ರೀಂ ಮೇಕರ್ ಸಂಸ್ಥೆಯಾಗಿ ಹೊರಹೊಮ್ಮಿದೆ. ದೇಶಾದ್ಯಂತ ಸುಮಾರು 1000 ಜನರು ಆಸೀನರಾಗುವ ಸಾಮರ್ಥ್ಯವಿರುವ ಪಾರ್ಲರ್ ಗಳನ್ನು ಹೊಂದಿರುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದೆ.

ಬೆಂಗಳೂರಲ್ಲೂ ಐಡಿಯಲ್ ಐಸ್ ಕ್ರೀಮ್ಸ್ ಸಂಸ್ಥೆ

ಬೆಂಗಳೂರಲ್ಲೂ ಐಡಿಯಲ್ ಐಸ್ ಕ್ರೀಮ್ಸ್ ಸಂಸ್ಥೆ

41 ವರ್ಷಗಳ ಅವಧಿಯಲ್ಲಿ, ಕರಾವಳಿಯಲ್ಲಿ ಐಸ್‍ಕ್ರೀಂ ಉದ್ಯಮಕ್ಕೆ ಸಿಕ್ಕ ಯಶಸ್ಸು ಗೋವಾ ಮತ್ತು ಬೆಂಗಳೂರಿನಲ್ಲೂ ಸಂಸ್ಥೆಯ ಮಳಿಗೆಗಳನ್ನು ತೆರೆಯಲು ಸ್ಫೂರ್ತಿಯಾಗಿದೆ. ಮುಂದೆ ಐಡಿಯಲ್ ಐಸ್‍ಕ್ರೀಂ ಯಾವ ಸ್ವಾದವನ್ನು ಪರಿಚಯಿಸುತ್ತೆ ಅಂತಾ ಐಸ್‍ಕ್ರೀಂ ಪ್ರಿಯರು ಕಾದು ಕೂತಿದ್ದಾರೆ. ಐಡಿಯಲ್ ನವೀನ ಉತ್ಪನ್ನ ಚಿಲ್ಲಿ ಐಸ್‍ಕ್ರೀಂ ತಿಂದಾಕ್ಷಣ ನಿಮಗೆ ಏನೂ ವ್ಯತ್ಯಾಸ ತಿಳಿಯುವುದಿಲ್ಲ. ಐಸ್‍ಕ್ರೀಂ ಹೊಟ್ಟೆಯೊಳಗೆ ಹೋಗುತ್ತಿದ್ದಂತೆ ವಿಶಿಷ್ಟ ಸ್ವಾದವನ್ನು ನೀಡುತ್ತದೆ. ಈ ಐಸ್‍ಕ್ರೋಂ ತಿನ್ನುವುದೇ ಅದ್ಭುತ ಅನುಭವ ಎನ್ನುತ್ತಾರೆ ಮುಕುಂದ್ ಪ್ರಭು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru Ideal Ice cream parlour gets 3 awards in international ice cream function at Gurgaou, New delhi. This is India's largest Ice cream parlour. International ice cream competition organized by Dupont institution. 94 ice cream parlour participated in this competition.
Please Wait while comments are loading...