ಡಿಸೆಂಬರ್ 24ರಿಂದ ನಿತ್ಯವೂ ಮಂಗಳೂರಿನಿಂದ ಹೈದರಾಬಾದ್‌ ಗೆ ವಿಮಾನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 12: ಡಿಸೆಂಬರ್ 24ರಿಂದ ಮಂಗಳೂರಿನಿಂದ ಹೈದರಾಬಾದ್‌ ಗೆ ಸ್ಪೈಸ್ ಜೆಟ್ ಪ್ರತಿ ದಿನ ವಿಮಾನಯಾನ ಸೇವೆ ಆರಂಭಿಸಲಿದೆ. ಪ್ರತಿ ದಿನ ಮಧ್ಯಾಹ್ನ ಹೈದರಾಬಾದ್‌ ನಿಂದ 1 ಗಂಟೆಗೆ ಹೊರಡುವ ವಿಮಾನ 2.30ಕ್ಕೆ ಮಂಗಳೂರು ತಲುಪಲಿದ್ದು, ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಡುವ ವಿಮಾನವು ಸಂಜೆ 4.20ಕ್ಕೆ ಹೈದರಾಬಾದ್ ತಲುಪಲಿದೆ.

ಇನ್ನು ಮಂಗಳೂರಿನಲ್ಲಿ ಇರುವ ಹೈದರಾಬಾದ್‌ ನ ವಿದ್ಯಾರ್ಥಿಗಳಿಗಂತೂ ಇದು ಬಹಳ ಸಂತಸದ ವಿಷಯ, ಬಹಳಷ್ಟು ವಿದ್ಯಾರ್ಥಿಗಳು ಮಂಗಳೂರಿನ ಸುರತ್ಕಲ್ ಬಳಿ ಇರುವ ಎನ್ ಐಟಿಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ರಜೆ ಇರುವ ಸಂದರ್ಭದಲ್ಲಿ ತಮ್ಮ ಊರಿಗೆ ಹೋಗಲು ಪರದಾಡುತ್ತಿದ್ದರು.[ಸ್ಪೈಸ್ ಜೆಟ್ ವಿಮಾನದಲ್ಲಿ 737 ರುಪಾಯಿ ಆಫರ್]

spice jet

ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ ಹೈದರಾಬಾದ್‌ ನಿವಾಸಿ ಅಶ್ವಿನ್ (ಎನ್ ಐಟಿಕೆ ವಿದ್ಯಾರ್ಥಿ), ಮಂಗಳೂರಿಂದ ಹೈದರಾಬಾದ್‌ ಗೆ ರೈಲು ಮೂಲಕ ಹೋಗುವುದಾದರೆ ಮೂರು ದಿನಗಳ ಕಾಲ ಪ್ರಯಾಣ ಮಾಡಬೇಕು. ಇನ್ನು ಮಂಗಳೂರಿಂದ ಹೈದರಾಬಾದ್‌ ಗೆ ಇರುವುದು ಒಂದೇ ಬಸ್. ಅದು ಕಾವೇರಿ ಮಾತ್ರ. ಅದರಲ್ಲೂ ಒಂದೂವರೆ ದಿನದ ಪ್ರಯಾಣವಾಗುತ್ತದೆ. ಆದರೆ ಈಗ ಸ್ಪೈಸ್ ಜೆಟ್ ಅವರ ಈ ಸೇವೆ ನಮಗೆ ಬಹಳ ಸಂತಸದ ವಿಷಯ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru-Hyderabad daily flight will be introduced from December 24th. Spice jet will be providing everyday service from Mangaluru - Hyderabad- Mangaluru.
Please Wait while comments are loading...