ಮೆಕ್ಕಾದಲ್ಲಿ ಮಂಗಳೂರಿನ ಹಜ್ ಯಾತ್ರಾರ್ಥಿ ಸಾವು

Posted By:
Subscribe to Oneindia Kannada

ಮಂಗಳೂರು, ಆ.09 : ಹಜ್ ಯಾತ್ರೆಗೆ ಮಂಗಳೂರಿನಿಂದ ತೆರಳಿದ್ದ ವ್ಯಕ್ತಿಯೊಬ್ಬರು ಮೆಕ್ಕಾದಲ್ಲಿ ಸಾವನ್ನಪ್ಪಿದ್ದಾರೆ. ಮೆಕ್ಕಾದ ಕೆಸಿಎಫ್ ಕಾರ್ಯಕರ್ತರು ಶವದ ಅಂತ್ಯ ಸಂಸ್ಕಾರಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.

ಹಜ್ ಯಾತ್ರೆ ಸುಗಮಕ್ಕೆ ಕ್ರಮ: ಸಿದ್ದರಾಮಯ್ಯ ಭರವಸೆ

ಮೃತಪಟ್ಟವರನ್ನು ಮಂಗಳೂರಿನ ಬಂದರ್ ನಿವಾಸಿ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲಿದ್ದ ಇವರನ್ನು ಸೋಮವಾರ ಮೆಕ್ಕಾದ ಅರಾಫತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಭಾರತೀಯರ ವಾರ್ಷಿಕ ಹಜ್ ಕೋಟಾ ಹೆಚ್ಚಳ

Mangaluru Haj pilgrim dies in Makkah

ಅಬ್ದುಲ್ಲಾ ಅವರು ತನ್ನ ಪತ್ನಿ ಝೈಭು ಹಾಗೂ ಮಗ ಸಲ್ಮಾನ್ ಅವರೊಂದಿಗೆ ಹಜ್ ಯಾತ್ರೆಗೆ ಜುಲೈ 24ರಂದು ತೆರಳಿದ್ದರು. ಮೃತರ ಅಂತ್ಯ ಸಂಸ್ಕಾರದ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದ್ದು, ಮೆಕ್ಕಾ ಕೆಸಿಎಫ್ ಕಾರ್ಯಕರ್ತರು ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಅಂತ್ಯ ಸಂಸ್ಕಾರ ಶೀಘ್ರವಾಗಿ ನಡೆಸಲು ಪ್ರಯತ್ನಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An elderly Haj pilgrim Abdulla from Mangaluru who was said to be an asthma patient, has died of heart attack in Makkah.
Please Wait while comments are loading...