ಮಂಗಳೂರಿಗೆ ಬರುತ್ತಿದೆ ಚೆನ್ನೈ, ಆಂಧ್ರದ ಮೀನು!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 13 : ಮಂಗಳೂರು ವ್ಯಾಪ್ತಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಲಾಗಿದೆ. ಈಗ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ. ಆದ್ದರಿಂದ, ಕರಾವಳಿಯ ಬೇಡಿಕೆ ಈಡೇರಿಸಲು ಚೆನ್ನೈ, ಆಂಧ್ರ ಪ್ರದೇಶದ ಮೀನುಗಳು ಬರುತ್ತಿವೆ.

ಮಂಗಳೂರು ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧವಾದ ಅನಂತರ ಹೊರರಾಜ್ಯದ ಮೀನುಗಳಿಗೆ ಭಾರೀ ಬೇಡಿಕೆ. ಹೀಗಾಗಿ ಲಾರಿಗಳಲ್ಲಿ ಟನ್ ಗಟ್ಟಲೆ ಮೀನುಗಳು ಮಂಗಳೂರು ಬಂದರಿಗೆ ಬರುತ್ತಿವೆ. ಬೇಡಿಕೆಯನ್ನು ಪರಿಗಣಿಸಿ ಪ್ರತಿನಿತ್ಯ ಹೆಚ್ಚು ಕಡಿಮೆ 10 ವಾಹನಗಳ ಮೂಲಕ ಟನ್ ಗಟ್ಟಲೆ ಮೀನು ಮಂಗಳೂರು ಮಾರುಕಟ್ಟೆಗೆ ಆಮದಾಗುತ್ತಿದೆ. [ಕರಾವಳಿ ಬಂದರಿಗೆ ಬೊಂಬಾಟ್ ಬೂತಾಯಿ!]

fish

ಪಶ್ಚಿಮ ಕರಾವಳಿಯಲ್ಲಿ 2015 ಕ್ಕಿಂತ ಹಿಂದೆ 57 ದಿನ (ಜೂನ್ 15ರಿಂದ ಆಗಸ್ಟ್ 10) ಯಾಂತ್ರೀಕೃತ ಮೀನುಗಾರಿಕೆ ನಿಷೇಧವಿತ್ತು. ಆದರೆ. ಮತ್ಸ್ಯ ಕ್ಷಾಮ ನೀಗಿಸುವ ಉದ್ದೇಶದಿಂದ 2015ರಲ್ಲಿ ಕೇಂದ್ರ ಸರ್ಕಾರ ಪಶ್ಚಿಮ ಕರಾವಳಿಗೆ ಏಕರೂಪದಲ್ಲಿ 61 ದಿನ ನಿಷೇಧ ವಿಧಿಸಿ ಆದೇಶ ಹೊರಡಿಸಿದೆ. [ಕರಾವಳಿಗೆ ಬಂತು ಒಮಾನ್ ಬೂತಾಯಿ ಮೀನು!]

ಅದರಂತೆ ಗುಜರಾತ್, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಒಂದೇ ಅವಧಿಯಲ್ಲಿ ಮೀನುಗಾರಿಕೆ ನಿಷೇಧವಿದೆ. ಈ ಸಮಯದಲ್ಲಿ ಆಂಧ್ರ, ತಮಿಳುನಾಡು ವ್ಯಾಪ್ತಿಯಲ್ಲಿ ನಿಷೇಧವಿರುವುದಿಲ್ಲ. ಕರ್ನಾಟಕ ವ್ಯಾಪ್ತಿಯಲ್ಲಿ ಮೀನುಗಾರಿಕೆ ಆರಂಭದ ಸಮಯದಲ್ಲಿ ಅಲ್ಲಿ ನಿಷೇಧವಿರುತ್ತದೆ. ಹೀಗಾಗಿ ಕರ್ನಾಟಕದಲ್ಲಿ ನಿಷೇಧವಿದ್ದಾಗ, ಆಂಧ್ರ, ತಮಿಳುನಾಡು ಭಾಗದಿಂದ ಮೀನುಗಳನ್ನು ಆಮದು ಮಾಡಲಾಗುತ್ತದೆ. [ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ]

ಮೀನುಗಳು ವಲಸೆ ಹೋದವಾ? : ಕರಾವಳಿ ಭಾಗದಲ್ಲಿ ಮೇ ತಿಂಗಳಿನಲ್ಲಿ ಉಷ್ಣಾಂಶ ಅಧಿಕವಾಗಿತ್ತು. ಈ ಸಂದರ್ಭದಲ್ಲಿ ಬೂತಾಯಿ ಸಹಿತ ಇತರ ಮೀನುಗಳು ಕರಾವಳಿ ಭಾಗದಿಂದ ವಲಸೆ ಹೋಗಿವೆ ಎಂಬ ಬಗ್ಗೆ ಮಾಹಿತಿ ಇದೆ. ಇದರ ಪರಿಣಾಮವಾಗಿ ಬೂತಾಯಿ ಕಡಿಮೆ ದೊರಕಿದೆ.

ವೈಜ್ಞಾನಿಕ ವರದಿಯ ಪ್ರಕಾರ ಮಂಗಳೂರು ಕರಾವಳಿ ಭಾಗದಿಂದ ಮೀನುಗಳು ಗೋವಾದತ್ತ ಹೋಗಿವೆ ಎಂದು ಮೀನುಗಾರಿಕಾ ಕಾಲೇಜಿನ ತಂಡವೊಂದು ಅಧ್ಯಯನದಿಂದ ತಿಳಿಸಿದೆ. ನೀರಿನ ಸಹಜ ಗುಣಗಳ ಪ್ರಕಾರವಾಗಿ ಮೀನುಗಳ ವಲಸೆ ಸಾಮಾನ್ಯ. ಅದರಲ್ಲಿ ವಿಶೇಷವೇನಿಲ್ಲ. ಕಳೆದ ವರ್ಷ ದೊರೆಯುವ ಮೀನು ಈ ವರ್ಷ ನಮಗೆ ದೊರೆಯುವುದಿಲ್ಲ. ಯಾಕೆಂದರೆ ಅದು ಇನ್ನೊಂದು ಕರಾವಳಿ ಭಾಗದಲ್ಲಿ ಇರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As fishing in country boats only is allowed at present in Mangaluru, fish from Chennai and Andhra Pradesh comes to market. Fishing in mechanized boats banned created demand for fish.
Please Wait while comments are loading...