ಮಂಗಳೂರಿನಲ್ಲಿ ಹೆದ್ದಾರಿ ದರೋಡೆಗೆ ಸಂಚು ಐವರ ಬಂಧನ

Posted By:
Subscribe to Oneindia Kannada

ಮಂಗಳೂರು, ಅಕ್ಟೋಬರ್ 23: ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ದರೋಡೆ ನಡೆಸುತ್ತಿದ್ದ 5 ಮಂದಿ ಆರೋಪಿಗಳನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ .

ಬಂಧಿತರನ್ನು ಪುತ್ತೂರಿನ ರವಿಕುಮಾರ್, ಕೇರಳದ ಮಂಜೇಶ್ವರ ಕುಂಜತ್ತೂರು ನಿವಾಸಿಗಳಾದ ಖಲೀಲ್, ರಾಜೇಶ್ ಕೆ, ಅಝೀಮ್, ಜಾಬೀರ್ ಅಬ್ಬಾಸ್ ಎಂದು ಗುರುತಿಸಲಾಗಿದೆ . ಬಂಧಿತರಿಂದ ಮಾರಕಾಸ್ತ್ರಗಳು , ಕಬ್ಬಿಣದ ರಾಡು, ಮೆಣಸಿನ ಪುಡಿ , ಚೂರಿ ಹಾಗೂ ಮಾರುತಿ ಸಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Mangaluru: Five Highway Robbers Arrested By Ullal Police

ಬಂಧಿತ ಆರೋಪಿಗಳು ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ಕೇರಳದಿಂದ ಮಂಗಳೂರು ಹೋಗುವ ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಕಾಸರಗೋಡಿನತ್ತ ಸಾಗುವ ವಾಹನಗಳನ್ನು ನಿರ್ಜನ ಪ್ರದೇಶದಲ್ಲಿ ತಡೆದು ಪ್ರಯಾಣಿಕರನ್ನು ದರೋಡೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲದ ಕಲ್ಲಾಪು ಬಳಿ ರಾತ್ರಿ ಹೊತ್ತು ವಾಹನಗಳನ್ನು ಅಡ್ಡಗಟ್ಟಿ ಸಾರ್ವಜನಿಕರ ಲೂಟಿ ಮಾಡಲು ಸಂಚು ರೂಪಿಸುತ್ತಿದ್ದ ಸಂದರ್ಭದಲ್ಲಿ ಉಳ್ಳಾಲ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ullal police arrested 5 persons for their alleged involvement in the highway robbery case on the Kerala - Mangaluru highway here on October 22.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ