ಮಂಗಳೂರು: ಜಿಲ್ಲಾ ಯೋಜನಾ ಸಮಿತಿಗೆ ಮಾ. 6ಕ್ಕೆ ಚುನಾವಣೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 08: ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿಗೆ, ಪಂಚಾಯತ್ ಮತ ಕ್ಷೇತ್ರದಿಂದ 25 ಹಾಗೂ ಸ್ಥಳೀಯ ನಗರ ಮತ ಕ್ಷೇತ್ರದಿಂದ 14 ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 6 ರಂದು ಚುನಾವಣೆ ನಡೆಯಲಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ರಾಜ್ ಅಧಿನಿಯಮ ಅನ್ವಯ ಈ ಚುನಾವಣೆ ನಡೆಯಲಿದೆ.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]

ಸ್ಪರ್ಧಿಸಲು ಇಚ್ಚಿಸುವವರು ನಾಮ ಪತ್ರಗಳನ್ನು ಫೆಬ್ರವರಿ 17 ರಿಂದ 23ರವರೆಗೆ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಪಡೆದು ಸಲ್ಲಿಸಬಹುದು. ಫೆ.25 ರಂದು ನಾಮಪತ್ರಗಳ ಪರಿಶೀಲನೆ, 28 ರಂದು ಉಮೇದುವಾರಿಕೆ ಹಿಂದೆಗೆದುಕೊಳ್ಳುವಿಕೆಗೆ ದಿನ ನಿಗದಿಪಡಿಸಲಾಗಿದೆ.[ಎಂಆರ್ ಪಿಎಲ್ ವಿಸ್ತರಣೆಗೆ ತೀವ್ರ ವಿರೋಧ]

Mangaluru: District planning committee election on Mar 6

ಮಾರ್ಚ್ 6 ರಂದು ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮತದಾನ ನಡೆಯಲಿದೆ. ಅಂದೇ ಸಂಜೆ 5 ಗಂಟೆಗೆ ಮತಗಳ ಎಣಿಕೆ ನಡೆಯಲಿದೆ. ಜಿಲ್ಲಾ ಯೋಜನಾ ಸಮಿತಿ ಚುನಾವಣೆಗೆ ಜಿಲ್ಲೆಯಲ್ಲಿ ಚುನಾಯಿತರಾಗಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಹಾನಗರ ಪಾಲಿಕೆ, ನಗರ ಸಭೆ, ಪುರ ಸಭೆ, ಪಟ್ಟಣ ಪಂಚಾಯತ್ ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ. ಮತದಾರರ ಪಟ್ಟಿಯನ್ನು ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಲೋಪದೋಷಗಳಿದ್ದರೆ ಫೆಬ್ರವರಿ 16 ರೊಳಗೆ ತಿದ್ದುಪಡಿ ಸರಿಪಡಿಸಲು ಲಿಖಿತವಾಗಿ ಕೋರಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Election for Dakshina Kannada District Planning committee members will be held on March 6, as per the Karnataka Panchayat Raj Act. In the election local body members have to elect 41 members to committee.
Please Wait while comments are loading...