ಮಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ರಕ್ತಸಿಕ್ತ ದೇಹ ಪತ್ತೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್ 4 : ಕೊಲೆಯಾದ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವವೊಂದು ಮಂಗಳೂರಿನ ಬಂದರಿನಲ್ಲಿ ಸಿಕ್ಕಿದೆ.

ಕೊಲೆಯಾದ ವ್ಯಕ್ತಿ ಯಾರು ಎಂದು ಇನ್ನು ತಿಳಿದು ಬಂದಿಲ್ಲ. ಕೊಲೆ ಮಾಡಿದವರು ಯಾರು ಎಂಬುದು ಸಹ ತಿಳಿದಿಲ್ಲ

ಮೃತದೇಹ ನಗರದ ಹಳೆಯ ಬಂದರು ಬಳಿಯ ಸಿಮೆಂಟ್ ಶೆಡ್ ನಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಕೊಲೆಯಾದ ವ್ಯಕ್ತಿಯ ಗುರುತು ಇನ್ನೂ ಸಿಕ್ಕಿಲ್ಲ.[ವಿನಾಯಕ ಬಾಳಿಗ ಕೊಲೆ ಪ್ರಕರಣ: ಆರೋಪಿಗಳಿಗೆ ಜಾಮೀನು]

ಕೊಲೆಯಾದ ವ್ಯಕ್ತಿ ಬಂದರಿನಲ್ಲಿ ಕೂಲಿ ಕಾರ್ಮಿಕ ಎಂದು ಮೂಲಗಳು ತಿಳಿಸಿವೆ.

Mangaluru;Discovered the body of a person killed

ನ. 3ರ ರಾತ್ರಿ ಕೊಲೆ ನಡೆದಿದ್ದು ಮಾರಕಾಸ್ತ್ರಗಳನ್ನು ಬಳಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಕೊಲೆಯಾಗಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ರೈಲ್ವೇ ಪೊಲೀಸರು ಪಾಂಡೇಶ್ವರ ಪೊಲೀಸರಿಗೆ ಕೊಲೆಯಾಗಿರುವ ಮಾಹಿತಿ ನೀಡಿದ್ದಾರೆ. ಎಸಿಪಿ ಶ್ರುತಿ ಹಾಗೂ ಪಾಂಡೇಶ್ವರ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಸುತ್ತಮುತ್ತಲ ಪ್ರದೇಶದ ನಾಗರಿಕರನ್ನು ವಿಚಾರಿಸಿದ್ದಾರೆ.[ಕೇರಳ ಅತ್ಯಾಚಾರ ಸಂತ್ರಸ್ತೆ ಆರೋಪದ ತನಿಖೆಗೆ ಆದೇಶ]

ವ್ಯಕ್ತಿಯ ಮುಖಚರ್ಯೆ ಮೇಲೆ ಪತ್ತೆಹಚ್ಚುವಂತೆ, ಈ ಬಗ್ಗೆ ಠಾಣೆಗೆ ಮಾಹಿತಿ ತಿಳಿಯಲು ಕರೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕಳುಹಿಸಲಾಗಿದೆ. ರೈಲ್ವೆ ಪೊಲೀಸರು ಕೂಡಾ ಪರಿಶೀಲನೆಯಲ್ಲಿ ಭಾಗವಹಿಸಿದ್ದು, ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Discovered the body of a person killed on mangaluru seaport thurday morning. Who is the person that will have been murdered not know. Even who is the murder not yet known.
Please Wait while comments are loading...