ದಕ್ಷಿಣ ಕನ್ನಡ ಡಿಸಿ ಕಚೇರಿ ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ..!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಜನವರಿ, 21: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಮಂಗಳೂರು ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಪ್ರತಿಭಟನೆ ಮಾಡಲು ನಾಲ್ಕು ಸ್ಥಳಗಳನ್ನು ಗೊತ್ತುಮಾಡಿ ವಾರದೊಳಗೆ ಸೂಚನೆ ಹೊರಡಿಸುವುದಾಗಿ ಹೇಳಿದರು.

ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್ ಬಳಿ ಸಣ್ಣದಾದ ಪ್ರದೇಶ, ನೆಹರೂ ಮೈದಾನ (ಫುಟ್ಬಾಲ್) ಹಿಂಬದಿಯ ಟೆಂಪೋ ನಿಲುಗಡೆ ಸ್ಥಳ, ಸರ್ಕಾರಿ ನೌಕರ ಸಂಘದ ಸಭಾಭವನ ಆವರಣ, ಜಿಲ್ಲಾಧಿಕಾರಿ ಕಚೇರಿ ಆವರಣದ ಹಳೆ ಕ್ಯಾಂಟೀನ್ ಜಾಗವನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಇವು ಮುಂದೆ ಪ್ರತಿಭಟನೆಯ ತಾಣವಾಗಲಿವೆ ಎಂದು ಮಾಹಿತಿ ನೀಡಿದರು.[ಮಂಗಳೂರಲ್ಲಿ ಹಾಲು ಸಿಗದಿದ್ರು, ಆಲ್ಕೊಹಾಲ್ ಮಾತ್ರ ಪಕ್ಕಾ ಸಿಗುತ್ತೆ]

Mangaluru

ದಿನ ಬೆಳಗಾದರೆ ಹಲವಾರು ನೀತಿಗಳನ್ನು ಖಂಡಿಸಿ ಎಲ್ಲಾ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಸಾಮಾಜಿಕ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿಯೆ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಇಬ್ರಾಹಿ ತಿಳಿಸಿದರು.

ಮಂಗಳೂರಲ್ಲಿ ಯುವತಿಯ ನಾಪತ್ತೆ

ಮಂಗಳೂರು, ಜನವರಿ, 21: ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ ಯುವತಿ ಏಕಾಏಕಿ ನಾಪತ್ತೆಯಾಗಿದ್ದು, ಕಂಗಲಾದ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಯುವತಿಯ ಹುಡುಕಾಟದಲ್ಲಿದ್ದಾರೆ.

ಬಂಟ್ವಾಳ ತಾಲೂಕಿನ ಸಜೀಪಪಡು ಗ್ರಾಮದ ಕೋಟೆಕಣಿಯ ಅಬ್ದುಲ್ ರಝಾಕ್ ಅವರ ಮಗಳು ಆಯಿಷಾ (20) ಕಾಣೆಯಾದ ಯುವತಿ. ಈಕೆ ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ್ದು, ಬೆಳಿಗ್ಗೆ ಆಗುವುದರಲ್ಲಿ ಮನೆಯಲ್ಲಿ ಕಾಣಲಿಲ್ಲ.[ಪ್ರೀತ್ಸೋಕೆ ಒಲ್ಲೆ ಎಂದವಳ ಬೆರಳು ಕತ್ತರಿಸಿದ ಭಗ್ನಪ್ರೇಮಿ]

ಈಗ ಅವಳು ಕಾಣೆಯಾಗಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಇವಳಿಗೆ ಸ್ಥಳೀಯ ಯುವಕನೊಂದಿಗೆ ಪ್ರೇಮ ಸಂಬಂಧ ಇತ್ತು ಎನ್ನಲಾಗಿದೆ. ಹಾಗಾಗಿ ಆಯಿಷಾ ಅವನೊಂದಿಗೆ ಹೋಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru DC A. B Ibrahim alert other four place to protest Cricket pevilian, Near Nehru Statium, Near Tempo bus stop, Sarkari navkara government official society sabhabhavan coridor, Old Canteen, Near DC office. Thursday announced by A. B Ibrahim.
Please Wait while comments are loading...