ಉಳ್ಳಾಲದಲ್ಲಿ ಶಂಕಿತ ಉಗ್ರ ಚಟುವಟಿಕೆ ಪ್ರಕರಣದ ತೀರ್ಪು ಪ್ರಕಟ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಎಪ್ರಿಲ್ 10: ಶಂಕಿತ ಉಗ್ರ ಚಟುವಟಿಕೆ ಪ್ರಕರಣದಲ್ಲಿ ಮೂವರು ದೋಷಿಗಳು ಎಂದು ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೇಳಿದೆ. ಪ್ರಕರಣದಲ್ಲಿ ಬಂಧಿತರಾಗಿದ್ದ 7 ಜನರಲ್ಲಿ 4 ಜನರನ್ನು ಕೋರ್ಟ್ ಖುಲಾಸೆಗೊಳಿಸಿದೆ.

ನ್ಯಾಯಾಧೀಶೆ ಪುಷ್ಪಾಂಜಲಿ ಅಹ್ಮದ್ ಬಾವ, ನೌಶಾದ್ ಹಾಗೂ ಫಕೀರ್ ಎಂಬುವವರನ್ನ ಅಪರಾಧಿಗಳೆಂದು ಘೋಷಿಸಿದರು. ಇನ್ನು ಮುಹಮ್ಮದ್ ಅಲಿ, ಅವರ ಪುತ್ರ ಜಾವೆದ್ ಅಲಿ, ಶಬೀರ್ ಹಾಗೂ ರಫೀಕ್ ಪ್ರಕರಣದಲ್ಲಿ ದೋಷ ಮುಕ್ತರಾಗಿದ್ದಾರೆ.[ಪಿಎಫ್ಐ ಈಗ ನನ್ನನ್ನು ಟಾರ್ಗೆಟ್ ಮಾಡಿದೆ: ಸಚಿವ ಖಾದರ್]

Mangaluru Court acquitted 4 persons and convicted 3 in a terror case

ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಭಯೋತ್ಪಾದನೆ ಚಟುವಟಿಕೆ ಆರೋಪದಲ್ಲಿ 2008ರಲ್ಲಿ ಈ 7 ಜನರನ್ನು ಮಂಗಳೂರಿನ ವಿವಿಧೆಡೆ ಬಂಧಿಸಲಾಗಿತ್ತು. ಬಂಧಿತರ ವಿರುದ್ಧ ದೇಶದ್ರೋಹದ ಪಿತೂರಿ, ವಿಧ್ವಂಸಕ ಕೃತ್ಯಕ್ಕೆ ಸಂಚು ಮತ್ತಿತರ ಕೇಸನ್ನು ದಾಖಲಿಸಲಾಗಿತ್ತು.[ಭಾರೀ ಮೌಲ್ಯದ ನಿಷೇಧಿತ ನೋಟುಗಳನ್ನು ಸಾಗಿಸುತ್ತಿದ್ದವನ ಬಂಧನ]

Mangaluru Court acquitted 4 persons and convicted 3 in a terror case

ಸೋಮವಾರ ಕೋರ್ಟ್ ತೀರ್ಪು ನೀಡಿದ್ದು ತಪ್ಪಿತಸ್ಥ ಉಗ್ರರಿಗೆ ಶಿಕ್ಷೆ ಪ್ರಮಾಣವನ್ನು ಎಪ್ರಿಲ್ 12ರಂದು ಘೋಷಿಸಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ62 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

Mangaluru Court acquitted 4 persons and convicted 3 in a terror case

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3rd JMFC court Mangaluru convicted 3 persons in Ullal Makkachery terror activity case. Mangaluru court also acquitted 4 persons in the same case. These 7 people were arrested in 2008 in the terror charges.
Please Wait while comments are loading...