ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಗಿ ಜೀವನದ ಜತೆಗೆ ಚೆಲ್ಲಾಟ: ಮಂಗಳೂರು ವೈದ್ಯರಿಗೆ ದಂಡ

ಹೊಟ್ಟೆ ಹುಣ್ಣಿನ ಸಮಸ್ಯೆಯಿಂದ ಚಿಕಿತ್ಸೆಗೆಂದು ಬಂದಿದ್ದ ಇವರನ್ನು ಪ್ರತಿಷ್ಠಿತ ಆಸ್ಪತ್ರೆಯೊಬ್ಬರ ವೈದ್ಯರು ಕರುಳಿನ ಕ್ಯಾನ್ಸರ್ ಇದೆ ಎಂದು ಹೇಳಿ ತಪ್ಪು ಚಿಕಿತ್ಸೆ ನೀಡಿದ್ದಾರೆ. ಅವರ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿದೆ.

|
Google Oneindia Kannada News

ಮಂಗಳೂರು, ಮೇ 8: ರೋಗಿಗಳ ಜೀವ, ಜೀವನ ಕಾಪಾಡಬೇಕಾದ ವೈದ್ಯರೇ ಇತ್ತೀಚಿನ ದಿನಗಳಲ್ಲಿ ಧನಪಿಶಾಚಿಗಳಾಗಿ ತಪ್ಪು ಚಿಕಿತ್ಸೆಗಳನ್ನು ನೀಡುವ ಮೂಲಕ ರೋಗಿಗಳನ್ನು ಕಿತ್ತು ತಿನ್ನುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಇದಕ್ಕೆ ತಾಜಾ ಉದಾಹರಣೆ ಮಂಗಳೂರಿನ ಮುಕೇಶ್ ಎಂಬುವರ ಪ್ರಕರಣ. ಹೊಟ್ಟೆ ಹುಣ್ಣಿನ ಸಮಸ್ಯೆಯಿಂದ ಚಿಕಿತ್ಸೆಗೆಂದು ಬಂದಿದ್ದ ಇವರನ್ನು ಪ್ರತಿಷ್ಠಿತ ಆಸ್ಪತ್ರೆಯೊಬ್ಬರ ವೈದ್ಯರು ಕರುಳಿನ ಕ್ಯಾನ್ಸರ್ ಇದೆ ಎಂದು ಹೇಳಿ ತಪ್ಪು ಚಿಕಿತ್ಸೆ ನೀಡಿದ್ದಾರೆ. ಅವರ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಗ್ರಾಹಕರ ನ್ಯಾಯಾಲಯವು ತಪ್ಪು ಚಿಕಿತ್ಸೆ ನೀಡಿದ ಮೂವರು ವೈದ್ಯರಿಗೆ ಒಟ್ಟಾರೆ 10 ಲಕ್ಷ ರು. ದಂಡ ವಿಧಿಸಿದೆ.

Mangaluru consumers court imposes a fine of Rs. 10 lakhs for cheating a patient

ಏನಿದು ಪ್ರಕರಣ?
ರೋಗಿಯ ಹೆಸರು ಮುಕೇಶ್. ಮಂಗಳೂರಿನ ಕುಲಶೇಖರದ ನಿವಾಸಿ. 2009ರಲ್ಲಿ ಹೊಟ್ಟೆನೋವಿಗೆಂದು ಇವರು, ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯ ಡಾ.ಹರಿಶ್ಚಂದ್ರ ಎಂಬವರಲ್ಲಿ ತೆರಳಿದ್ದರು. ಪರಿಶೀಲಿಸಿದ ವೈದ್ಯರು ಅಲ್ಸರ್ ಇದೆಯೆಂದು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದ್ದರು. ಆದರೆ ಆಪರೇಶನ್ ಬಳಿಕ ಮುಕೇಶ್ ಸ್ಥಿತಿ ಉಲ್ಬಣಿಸಿತ್ತು.

ಸುಮಾರು ಒಂದು ತಿಂಗಳು ಕಾಲ ಪ್ರತಿಷ್ಠಿತ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಕೋಮಾದಲ್ಲೇ ಇದ್ದರು. ಆನಂತರ ಕರುಳಿನ ಕ್ಯಾನ್ಸರ್ ಇದೆಯೆಂದು ಹೇಳಿ ಕೀಮೋ ಥೆರಪಿಗಾಗಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು.

ಆದರೆ ಯೇನಪೋಯ ಆಸ್ಪತ್ರೆ ವೈದ್ಯರು ಕರುಳಿನ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಲು ಸೂಕ್ತ ಪರಿಶೀಲನೆ ಮಾಡಿರಲಿಲ್ಲ. ಹೀಗಾಗಿ ಕಂಕನಾಡಿ ಆಸ್ಪತ್ರೆ ವೈದ್ಯರು ಮತ್ತೆ ಸ್ಕ್ಯಾನಿಂಗ್, ಬಯಾಪ್ಸಿ ನಡೆಸಿದಾಗ ಕ್ಯಾನ್ಸರ್ ಇಲ್ಲವೆಂದು ಕಂಡುಬಂದಿತ್ತು. ಹೀಗಿದ್ದರೂ ಆ ಆಸ್ಪತ್ರೆಯ ಡಾ.ಹರಿಶ್ಚಂದ್ರ ಮತ್ತು ವಿಭಾಗ ಮುಖ್ಯಸ್ಥೆ ಡಾ.ಪುಷ್ಪಲತಾ ಪೈ ಅದನ್ನು ಒಪ್ಪಿಕೊಳ್ಳದೆ ಕ್ಯಾನ್ಸರ್ ಇದೆಯೆಂದೇ ವಾದಿಸಿದ್ದರು.

ಬಳಿಕ ಮುಂಬೈಗೆ ಸ್ಯಾಂಪಲ್ ಕಳಿಸಿ ಪರಿಶೀಲಿಸಿದಾಗಲೂ ಕ್ಯಾನ್ಸರ್ ಇಲ್ಲವೆಂಬುದು ದೃಢಪಟ್ಟಿತ್ತು. ಅಷ್ಟೊತ್ತಿಗೆ ಮುಕೇಶ್ ಸ್ಥಿತಿ ಯಾರಿಗೂ ಬೇಡವಾಗಿತ್ತು. ಲಕ್ಷಾಂತರ ವ್ಯಯಿಸಿದರೂ ವೈದ್ಯರು ಕ್ಯಾನ್ಸರ್ ನೆಪದಲ್ಲಿ ಬಡವನ ಜೀವದ ಜೊತೆ ಚೆಲ್ಲಾಟ ನಡೆಸಿದ್ದು ಆ ಕುಟುಂಬಕ್ಕೆ ಬೇಸರ ತರಿಸಿತ್ತು. ಹೀಗಾಗಿ 2011ರಲ್ಲಿ ಮುಕೇಶ್ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಕೋರ್ಟ್, ಈ ಆಸ್ಪತ್ರೆಯ ಮೂವರು ವೈದ್ಯರಿಗೆ ಒಟ್ಟಾರೆ ಹತ್ತು ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಒಂದು ತಿಂಗಳ ಒಳಗೆ ವಂಚನೆಗೊಳಗಾದ ಮುಕೇಶ್ ಗೆ ನೀಡುವಂತೆ ಆದೇಶ ಮಾಡಿದೆ. ಆದರೆ ಕೇವಲ ದಂಡ ವಿಧಿಸಿದರೆ ವೈದ್ಯರು ಬಚಾವಾಗುತ್ತಾರೆ. ಅಂಥ ವೈದ್ಯರ ಲೈಸನ್ಸನ್ನೇ ರದ್ದುಪಡಿಸಿದರೆ ಒಳ್ಳೆಯದಿತ್ತು ಅನ್ನುತ್ತಾರೆ ವಂಚನೆಗೊಳಗಾದ ಮುಕೇಶ್.

English summary
Mangaluru consumers court imposes a fine of Rs. 10 lakhs to a private hospital for their game play. An infamous Doctor of a private hospital without even taking the scanning procedures told patient Mahesh that he has cancer which he didn't have and performed several operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X