ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂವಿಧಾನ ಗೌರವಿಸದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು -ಖಾದರ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಫೆಬ್ರವರಿ 25: ಕೇರಳ ಮುಖ್ಯಮಂತ್ರಿ ಪಿಣರಾಯಿ‌ ವಿಜಯನ್ ಭೇಟಿ ವಿರೋಧಿಸಿದವರು, ಪಿಣರಾಯಿಯವರ ಚಪ್ಪಲಿಗೂ ಸಮಾನರಲ್ಲ. ದೇಶಕ್ಕೆ ಅಂಬೇಡ್ಜರ್ ನೀಡಿರುವ‌ ಸಂವಿಧಾನವನ್ನು ಗೌರವಿಸದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಅಂತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರು ನಗರದ ಅತ್ತಾವರದಲ್ಲಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಭಾಂಗಣದಲ್ಲಿ, ಪತ್ರಿಕೆಯೊಂದರ 'ಮಾಧ್ಯಮ ಕೇಂದ್ರ'ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭ ಮಂಗಳೂರು ಬಂದ್ ಗೆ ಕರೆ ನೀಡಿದವರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.[ಗ್ಯಾಲರಿ: ಸೌಹಾರ್ದ ರ್ಯಾಲಿಗಾಗಿ ಮಂಗಳೂರಿಗೆ ಬಂದ ಪಿಣರಾಯಿ]

Mangaluru: Constitution Opposer should be slapped with slippers: Khader

ಒಂದು ರಾಜ್ಯದಲ್ಲಿ ಪ್ರಜಾಸತ್ತಾತ್ಮಕವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರ ಆಗಮನವನ್ನು ವಿರೋಧಿಸುವುದು, ಅತಿಥಿ ದೈವೋಭವ ಎಂಬ ದೇಶದ ಸಂಸ್ಕೃತಿ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಂಥ ಶಕ್ತಿಗಳನ್ನು ಹೊರಗಿಡಬೇಕು ಎಂದು ಯುಟಿ ಖಾದರ್ ಹೇಳಿದರು.[ಪಿಣರಾಯಿ ಭೇಟಿ: ಕರ್ನಾಟಕ-ಕೇರಳ ಪೊಲೀಸರ ಎಸ್ಕಾರ್ಟ್ ಗಲಾಟೆ]

English summary
Minister U T Khader agitated on Sangh Parivar's Mangaluru bundh call in private program held in Attavara. He said that, constitution opposer should be slapped with slippers in aggressive voice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X