ಮಂಗಳೂರಿನ ಗೋಲ್ಡನ್ ಲೈನ್ ಬಸ್ ನಲ್ಲಿ ಪುಕ್ಕಟೆ ಇಂಟರ್ ನೆಟ್

By: ಐಸಾಕ್ ರಿಚರ್ಡ್
Subscribe to Oneindia Kannada

ಮಂಗಳೂರು, ಜನವರಿ 21: ಇಂಟರ್ ನೆಟ್ ಈಗ ಬದುಕಿನ ಅವಿಭಾಜ್ಯ ಅಂಗವಾಗಿರುವ ಕಾರಣಕ್ಕೆ ಪಟ್ಟಣ-ನಗರ ಪ್ರದೇಶದ ಮನೆ, ಕಚೇರಿಗಳಲ್ಲಿ ಇಂಟರ್ನೆಟ್ ಸಂಪರ್ಕ ಇರುತ್ತದೆ. ಬಹುತೇಕ ಕಡೆ ವೈಫೈ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ಅಚ್ಚರಿ ವಿಷಯವೆಂದರೆ ಗ್ರಾಮೀಣ ಭಾಗದ ಬಸ್ ನಲ್ಲೂ ಈಗ ವೈಫೈ ಸೌಲಭ್ಯ ಕಲ್ಪಿಸಲಾಗಿದೆ.

ಗ್ರಾಮಾಂತರ ಭಾಗಕ್ಕೆ ಚಲಿಸುವ ಖಾಸಗಿ ಬಸ್ ನಲ್ಲಿ ಉಚಿತ ವೈಫೈ ಸೌಲಭ್ಯವನ್ನು ನೀಡುವ ಮೂಲಕ ಬಸ್ ಮಾಲೀಕರೊಬ್ಬರು ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಉಚಿತ ಇಂಟರ್ ನೆಟ್ ಸೌಲಭ್ಯ ನೀಡಲು ಆರಂಭಿಸಿದ್ದಾರೆ. ಏನಪ್ಪಾ ಬಸ್ಸಿನಲ್ಲೂ ವೈಫೈ ಉಂಟಾ ಎಂದು ನೀವು ಯೋಚಿಸಿರಬಹುದು.[ಇನ್ನು 'ಜಿಯೊ' ಮೂಲಕ ಕಾರು ನಿಯಂತ್ರಿಸಿ, ಮೆಟ್ರೊ ಟಿಕೆಟ್ ಬುಕ್ ಮಾಡಿ!]

Mangaluru Bus

ಹೌದು, 'ಗೋಲ್ಡನ್ ಲೈನ್' ಬಸ್ಸಿನಲ್ಲಿದೆ ಉಚಿತ ವೈಫೈ. ನಾಟೆಕಲ್ ನಿವಾಸಿ ಎ.ಬಿ.ಇಬ್ರಾಹಿಂ ಮಾಲೀಕತ್ವದ ಗೋಲ್ಡನ್ ಲೈನ್ ಬಸ್ ನಲ್ಲಿ ಉಚಿತ ವೈಫೈ ಸೌಲಭ್ಯವನ್ನು ಆರಂಭಿಸಲಾಗಿದೆ. ಅವರ ಪುತ್ರ ಅಬ್ದುಲ್ ರೆಹಮಾನ್ ಚಾಲಕನಾಗಿರುವ ಬಸ್ಸಿನಲ್ಲಿ ಉಚಿತ ಅಂತರ್ಜಾಲ ಅಳವಡಿಸಲು ಮನಸ್ಸು ಮಾಡಿದ್ದರು.

ಅವರ ಇಚ್ಛೆಯಂತೆ ಎರಡು ದಿನಗಳಿಂದ ಮಂಗಳೂರಿನಿಂದ ಹೂಹಾಕುವಕಲ್ಲು ಎಂಬ ಕಡೆಗೆ ಚಲಿಸುವ 54 ನಂಬರಿನ ಸಿಟಿ ಬಸ್ ನಲ್ಲಿ ಉಚಿತ ವೈಫೈ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸಲಾಗಿದೆ. ಹಾಗಾದರೆ ಪಾಸ್‌ವರ್ಡ್ ಇಲ್ವಾ? ಎಂಬ ಪ್ರಶ್ನೆ ಮೂಡಬಹುದು. ವೈಫೈ ಹೆಸರು ಮತ್ತು ಅದರ ಪಾಸ್ ವರ್ಡ್ ಅನ್ನು ಬಸ್ಸಿನ ಒಳಭಾಗದಲ್ಲಿ ಸ್ಟಿಕರ್ ಮೂಲಕ ಅಂಟಿಸಲಾಗಿದೆ.[ವಿಮಾನದೊಳಗೆ ವೈಫೈ ಇನ್ನೂ ದೂರದ ಕನಸು]

Mangaluru bus wifi

ಎರಡು ದಿನಗಳಿಂದ ಬಸ್ಸಿನಲ್ಲಿ ಉಚಿತ ವೈಫೈ ಇದೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ.

ಸ್ಟೇರಿಂಗ್ ಸಮೀಪ ಜಿಯೋ ಕಂಪೆನಿಯ ರೂಟರ್ ಅನ್ನು ಅಳವಡಿಸಲಾಗಿದೆ. ವಿದ್ಯುತ್ ರೀಚಾರ್ಜ್ ಮಾಡುವ ರೂಟರ್ ಸಾಧನವಾಗಿರುವುದರಿಂದ ಬಸ್ಸು ರಾತ್ರಿ ನಿಲ್ಲುವ ಸಮಯದಲ್ಲಿ ಅದನ್ನು ಚಾರ್ಜ್ ಗೆ ಇಡಲಾಗುತ್ತದೆ.[ಗದಗ ಉಚಿತ ವೈಫೈ ಪಡೆದ ಕರ್ನಾಟಕದ ಮೊದಲ ನಗರ]

ಬೆಳಗ್ಗಿನಿಂದ ಸಂಜೆಯವರೆಗೂ ಸಾಧನ ಚಾಲ್ತಿಯಲ್ಲಿರುವುದರಿಂದ ಬಸ್ಸಿನಲ್ಲಿ ಬಹುತೇಕ ಪ್ರಯಾಣಿಕರು ಇದನ್ನು ಉಪಯೋಗಿಸುತ್ತಿದ್ದಾರೆ. ಆದರೆ ಯುವ ಸಮುದಾಯ ಈ ವೈಫೈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಗೆ ಬಸ್ಸಿನಲ್ಲೇ ಡಿಜಿಟಲ್ ಯುಗದ ಶಿಕ್ಷಣ ನೀಡಲು ಉಪಯೋಗಿಸಿದರೆ ಗ್ರಾಮಕ್ಕೆ ಬಸ್ಸು ಮಾದರಿಯಾಗಬಹುದು ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Golden Travels a private bus service has launched Wi-Fi in its vehicles which ply to the rural areas. Free Wi-Fi facility has been started in Golden Line buses owned by Natekal resident A B Ibrahim.
Please Wait while comments are loading...