ಮಂಗಳೂರು ಮಹಾನಗರ ಪಾಲಿಕೆಯಿಂದ 'ಸ್ವಚ್ಛತಾ' ಆಪ್‌

By: ಐಸ್ಯಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್. 05 : ಮಂಗಳೂರಿನ ಜನರು ನೈರ್ಮಲ್ಯ ಸಮಸ್ಯೆಯ ಕುರಿತು ದೂರು ನೀಡುವುದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆ ಹೊಸ ಆಪ್ ಒಂದನ್ನು ಪರಿಚಯಿಸಲು ನಿರ್ಧರಿಸಿದೆ.

ಹೌದು ನಗರದ ಜನತೆ ನೈರ್ಮಲ್ಯದ ಕುರಿತು ಎದುರಿಸುತ್ತಿರುವ ಸಮಸ್ಯೆಯನ್ನು ''ಸ್ವಚ್ಛತಾ'' ಎನ್ನುವ ಮೊಬೈಲ್ ಆಪ್ ನ ಮೂಲಕ ಮಂಗಳೂರು ಮಹಾನಗರ ಪಾಲಿಕೆಗೆ ಖುದ್ದಾಗಿ ತಿಳಿಸುವ ಎಲ್ಲ ಅವಕಾಶ ಮಾಡಿಕೊಡಲಾಗುತ್ತಿದೆ.

ಈಗಾಗಲೇ ಸತತ ಐದು ದಿನಗಳಿಂದ ಈ ಸ್ವಚ್ಛತಾ ಅಪ್ ಅನ್ನು ಪರೀಕ್ಷಿಸಲಾಗುತ್ತಿದೆ. ಪರೀಕ್ಷೆಯ ನಂತರ ಮುಂದಿನ ವಾರದೊಳಗೆ ಈ ಆಪ್ ಅನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Soon, an app to lodge complaints and sort out sanitary issues

ನೈರ್ಮಲ್ಯತೆಗೆ ಸಂಬಂಧಿಸಿದಂತೆ ಜನರ ಯಾವುದೇ ಸಮಸ್ಯೆ ಇದ್ದಲ್ಲಿ ಈ ಸ್ವಚ್ಛತಾ ಆಪ್ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಕಾರಿಗಲಿದೆ. ಮೂಲತಃ ಈ ಆಪ್ ಅನ್ನು ಮೊಬೈಲ್‌ನಲ್ಲಿನ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಂಡು , ಪ್ರೊಫೈಲ್ ಕ್ರಿಯೇಟ್ ಮಾಡಬೇಕು. ಬಳಿಕ ಇರುವ ಸಮಸ್ಯೆಯ ಕುರಿತು ದೂರುಗಳನ್ನು ಹೇಳಬಹುದು.

ಈ ಆಪ್ ನಾಗರಿಕರಿಗೆ ತಮ್ಮ ನಗರದ ಸಮಸ್ಯೆಯನ್ನು ಹೇಳಿಕೊಳ್ಳಲು ಇರುವ ಒಂದು ಉತ್ತಮ ಅವಕಾಶ. ಈಗಾಗಲೇ ಎಲ್ಲೆಲ್ಲೂ ಸ್ವಚ್ಛತಾ ಅಭಿಯಾನಕ್ಕಾಗಿ ಹಲಾವಾರು ಮಂದಿ ಕೈಜೋಡಿಸಿ ನಗರದ ಸ್ವಚ್ಛತೆ ಕಾಪಾಡುವಲ್ಲಿ ನೆರವಾಗಿದ್ದಾರೆ. ಇದೇ ನಿಟ್ಟಿನಲ್ಲಿ ಈ ಆಪ್ ನಿಂದ ನಗರದ ಸ್ವಚ್ಛತೆಯನ್ನು ಕಾಪಾಡಬಹುದು.

ಸ್ವಚ್ಛತಾ ಆಪ್‌ನ ವಿಶೇಷತೆ:
ಉದಾಹರಣೆಗೆ , ನಗರದಲ್ಲಿ ಎಲ್ಲಿಯಾದರೂ ಕಸದ ರಾಶಿ ಕಂಡಲ್ಲಿ ಅದನ್ನು ಈ 'ಸ್ವಚ್ಚತಾ' ಆಪ್‌ನ ಬಳಕೆದಾರರು ಪೋಟೋ ತೆಗೆದು ಕಳುಹಿಸಬೇಕು. ಈ ಸಂದರ್ಭ ಸ್ವಚ್ಛತಾ ಆಪ್ ದೂರಿನ ಸಂಖ್ಯೆಯನ್ನು ಬಳಕೆದಾರರಿಗೆ ಕಳುಹಿಸಲಾಗುವುದು.ಇದಲ್ಲದೆ, ನಗರದ ಆರೋಗ್ಯ ಇಲಾಖೆಗೆ ಈ ಸಮಸ್ಯೆಯನ್ನು 12 ಗಂಟೆ ಒಳಗಾಗಿ ಪರಿಹಾರ ಮಾಡುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
people of mangalore will soon be able to complain to the mangalore corporation on sanitary issues using "swachhata" mobile app of the union ministry of uraban development.
Please Wait while comments are loading...