ಬಯಲು ಶೌಚ ಮುಕ್ತ ನಗರವಾಗಿ ಮಂಗಳೂರು ಘೋಷಣೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 21 : ಮಂಗಳೂರು ನಗರವನ್ನು ಬಯಲು ಶೌಚ ಮುಕ್ತ ನಗರವಾಗಿ ಘೋಷಣೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಅಕ್ಟೋಬರ್ 2ರಂದು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್‌ಗಳನ್ನು ಸೇರಿಸಿ ಮಲವಿಸರ್ಜನೆ ಮುಕ್ತ ನಗರ ಎಂದು ಘೋಷಣೆ ಮಾಡಲಾಗುತ್ತದೆ.

ಮಹಾನಗರ ಪಾಲಿಕೆ ಮೇಯರ್ ಹರಿನಾಥ್ ಅವರು ಈ ಕುರಿತು ಮಾಹಿತಿ ನೀಡಿದರು. 'ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳನ್ನು ಬಯಲು ಮಲವಿಸರ್ಜನೆ ಮುಕ್ತ ವಾರ್ಡ್‌ಗಳನ್ನಾಗಿ ಘೋಷಿಸಲು ತೀರ್ಮಾನಿಸಲಾಗಿದೆ. ಪ್ರಥಮ ಹಂತದಲ್ಲಿ ವಾರ್ಡ್‌ಗಳನ್ನು ಆಯ್ಕೆ ಮಾಡಿ ಆಗಸ್ಟ್ 15 ರಂದು ಘೋಷಣೆ ಮಾಡಲಾಗುವುದು' ಎಂದರು.[ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ]

'ಶೇ 20 ರಷ್ಟು ವಾರ್ಡ್‌ಗಳಲ್ಲಿ ಒಂದೆರಡು ಶೌಚಾಲಯ ನಿರ್ಮಾಣವಾಗಬೇಕಿದೆ. ಅಕ್ಟೋಬರ್ 2ರಂದು ಎಲ್ಲ ವಾರ್ಡ್‌ಗಳನ್ನು ಸೇರಿಸಿ ಮಂಗಳೂರು ನಗರ ಬಯಲು ಮಲವಿಸರ್ಜನೆ ಮುಕ್ತ ನಗರ' ಎಂದು ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.[ಬಿಹಾರದಲ್ಲಿ ತಾಳಿಗೆ ಸಿಕ್ತು ಬೆಲೆ, ಶೌಚಾಲಯ ಕಾರ್ಯ ಆರಂಭ]

Mangaluru city to be declared open defecation on 2016 October

ಶೌಚಾಲಯ ರಹಿತ ಮನೆಗಳು 339 : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2011ರ ಜನಗಣತಿಯಲ್ಲಿ 1753 ಮನೆಗಳು ಶೌಚಾಲಯ ರಹಿತವಾಗಿತ್ತು. 2015ರ ಮೇ ತಿಂಗಳಲ್ಲಿ ಪಾಲಿಕೆ ನಡೆಸಿದ ಸಮೀಕ್ಷೆಯಲ್ಲಿ 339 ಮನೆಗಳಿಗೆ ಶೌಚಾಲಯ ಇಲ್ಲದಿರುವುದು ಕಂಡು ಬಂದಿದೆ.[ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಮಲ್ಲಮ್ಮ!]

ಕೇಂದ್ರ ಸರ್ಕಾರದ ನಗರಾಭಿವೃದ್ದಿ ಸಚಿವಾಲಯದ ಸ್ವಚ್ ಭಾರತ್ ಮಿಷನ್ ಯೋಜನೆಯಡಿ ಎಲ್ಲಾ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತಿದೆ. ಜತೆಗೆ ಪಾಲಿಕೆ ವ್ಯಾಪ್ತಿಯಲ್ಲಿ 34 ಹೊಸ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.[ಮೈಸೂರಲ್ಲಿ ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ...!]

ಶೌಚ ಮುಕ್ತ ನಗರವನ್ನಾಗಿಸುವ ದೃಷ್ಟಿಯಿಂದ ವೈಯಕ್ತಿಕ ಶೌಚಾಲಯ, ಸಾರ್ವಜನಿಕ ಶೌಚಾಲಯ, ಬಯಲು ಶೌಚ ಪದ್ದತಿ ತೊಡೆದು ಹಾಕುವುದು, ಕಸವನ್ನು ಮೂಲದಲ್ಲೇ ಬೇರ್ಪಡಿಸುವ, ಘನತ್ಯಾಜ್ಯ ಸಂಗ್ರಹಣೆ, ಸಾಗಣೆ ಹಾಗೂ ಸಂಸ್ಕರಣೆಯ ಕುರಿತು ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಶೌಚಾಲಯ ರಹಿತ ಕುಟುಂಬದವರು ಕಚೇರಿ ವೇಳೆಯಲ್ಲಿ ಪಾಲಿಕೆಯನ್ನು ಸಂಪರ್ಕಿಸಿ ಆ. 13 ರ ಒಳಗೆ ಪಾಲಿಕೆಗೆ ಅರ್ಜಿ ಸಲ್ಲಿಸಬಹುದು. ವೈಯಕ್ತಿಕ ಕುಟುಂಬದವರು ಅಥವಾ ನಾಗರಿಕರು ಬಯಲು ಮಲ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದರೆ ಅಂತಹ ಪ್ರದೇಶದ ಕುರಿತು ಸಾರ್ವಜನಿಕರು ಕರೆ ಮಾಡಿ (0824- 2220306, 155133) ಮಾಹಿತಿ ನೀಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At least 20 wards in the Mangaluru City Corporation (MCC) will be declared as free from open defecation on August 15, 2016. All the wards will be declared open defecation free by October 2.
Please Wait while comments are loading...