ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಚಲೋ : ದಕ್ಷಿಣ ಕನ್ನಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

|
Google Oneindia Kannada News

Recommended Video

MangaluruChalo : Dakshina Kannada full tight security | Oneindia Kannada

ಮಂಗಳೂರು, ಸೆಪ್ಟೆಂಬರ್ 7 : ಬಿಜೆಪಿ ಯುವಮೋರ್ಚಾ ಇಂದು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೈಕ್ ಜಾಥಾಕ್ಕೆ ಭಾರೀ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದೆ.

'ಮಂಗಳೂರು ಚಲೋ' ತಡೆಯಲು ಸರ್ಕಾರದಿಂದ ಸಾಧ್ಯವಿಲ್ಲ : ಲಿಂಬಾವಳಿ'ಮಂಗಳೂರು ಚಲೋ' ತಡೆಯಲು ಸರ್ಕಾರದಿಂದ ಸಾಧ್ಯವಿಲ್ಲ : ಲಿಂಬಾವಳಿ

ಮತೀಯ ಸಂಘಟನೆಗಳಾದ ಪಿಎಫ್ಐ ಸಂಘಟನೆಯ ನಿಷೇಧ ಹಾಗೂ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಬೈಕ್ ಜಾಥಾ ತಡೆಯಲು ನಗರದಾದ್ಯಂತ ಪೋಲೀಸ್ ಸರ್ಪಗಾವಲು ಹಾಕಲಾಗಿದೆ.

'ಮಂಗಳೂರು ಚಲೋ' ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಶೋಭಾ'ಮಂಗಳೂರು ಚಲೋ' ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಶೋಭಾ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 4 ಸಾವಿರ ಪೋಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಬೈಕ್ ಜಾಥಾ ಆರಂಭಗೊಳ್ಳಲಿದೆ ಎನ್ನುವ ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮಂಗಳೂರು ಚಲೋ : 523 ಬಿಜೆಪಿ ಕಾರ್ಯಕರ್ತರ ಬಂಧನಮಂಗಳೂರು ಚಲೋ : 523 ಬಿಜೆಪಿ ಕಾರ್ಯಕರ್ತರ ಬಂಧನ

ಜ್ಯೋತಿ ಅಂಬೇಡ್ಕರ್ ವೃತ್ತಕ್ಕೆ ನೂರಾರು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. 11 ಗಂಟೆಗೆ ಬೈಕ್ ಜಾಥಾ ಆರಂಭವಾಗುವ ನಿರೀಕ್ಷೆ ಇದೆ. ಜಾಥಾ ಮಾಡಿದರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ರಾಜ್ಯದ ಬೇರೆ-ಬೇರೆ ಕಡೆಯಿಂದ ಮಂಗಳೂರಿಗೆ ಹೊರಟಿದ್ದ ಜಾಥಾವನ್ನು ಪೊಲೀಸರು ತಡೆದಿದ್ದದರು.

ಕ್ಷಿಪ್ರ ಸೇನಾಪಡೆ

ಕ್ಷಿಪ್ರ ಸೇನಾಪಡೆ

ಕ್ಷಿಪ್ರ ಸೇನಾಪಡೆಯ 110 ಸೈನಿಕರ ಪಡೆ, ಕೆ.ಎಸ್.ಆರ್.ಪಿ ತುಕಡಿ ಹಾಗೂ ಪೋಲೀಸರನ್ನೊಳಗೊಂಡ ತಂಡ ಮಂಗಳೂರು ನಗರದಾದ್ಯಂತ ಬೀಡುಬಿಟ್ಟಿದ್ದು, ಬೈಕ್ ಜಾಥಾವನ್ನು ಯಾವುದೇ ಕಾರಣಕ್ಕೂ ನಡೆಸದಂತೆ ವ್ಯೂಹ ರಚಿಸಿದೆ.

ಜನರ ಕೆಲಸಕ್ಕೆ ಅಡ್ಡಿ

ಜನರ ಕೆಲಸಕ್ಕೆ ಅಡ್ಡಿ

ಬೈಕ್ ಜಾಥಾ ಆರಂಭಗೊಳ್ಳಲಿದೆ ಎನ್ನುವ ನಗರದ ಜ್ಯೋತಿ ಅಂಬೇಡ್ಕರ್ ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಪೋಲೀಸರನ್ನು ನಿಯೋಜಿಸಲಾಗಿದ್ದು, ಇದರಿಂದ ಶಾಲಾ ಕಾಲೇಜುಗಳಿಗೆ ಹಾಗೂ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಭಾರೀ ತೊಂದರೆಯಾಗಿದೆ.

ಬಸ್ಸುಗಳು ಕಡಿಮೆ

ಬಸ್ಸುಗಳು ಕಡಿಮೆ

ಇನ್ನು ಮಂಗಳೂರು ಚಲೋ ಬೈಕ್ ಜಾಥಾ ಪರಿಣಾಮ ಸಾಕಷ್ಟು ಬಸ್ಸುಗಳು ಇಂದು ರಸ್ತೆಗೆ ಇಳಿದಿಲ್ಲ. 'ಗಲಭೆ ನಡೆದರೆ, ಕಾರ್ಯಕರ್ತರು ಬಸ್ಸುಗಳಿಗೆ ಕಲ್ಲು ತೂರಾಟ ಮಾಡಿದರೆ? ಏನು ಮಾಡುವುದು ಎನ್ನುತ್ತಾರೆ' ಬಸ್ಸಿನ ಮಾಲೀಕರೊಬ್ಬರು.

ತೊಂದರೆ ಕೊಡುವುದು ಎಷ್ಟು ಸರಿ?

ತೊಂದರೆ ಕೊಡುವುದು ಎಷ್ಟು ಸರಿ?

ಬಸ್ಸಿಗಾಗಿ ಬೆಳಿಗ್ಗೆ 8 ಗಂಟೆಯಿಂದ ಕಾಯುತ್ತಿದ್ದೇನೆ ಆದರೆ ನಮ್ಮ ರೂಟಿಗೆ ಹೋಗುವ ಬಸ್ಸು ಇನ್ನೂ ಕೂಡ ಬಂದಿಲ್ಲ. ಜಾಥಾ ನಡೆಸುವವರು ಹೀಗೆಲ್ಲ ಸಾರ್ವಜನಿಕರಿಗೆ ತೊಂದರೆ ಮಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕ ಹರೀಶ್ ಅವರ ಅಭಿಪ್ರಾಯ.

ಕಾರ್ಯಕರ್ತರ ಆಗಮನ

ಕಾರ್ಯಕರ್ತರ ಆಗಮನ

ಜ್ಯೋತಿ ಅಂಬೇಡ್ಕರ್ ವೃತ್ತಕ್ಕೆ ನೂರಾರು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದುದ್ದಾರೆ. 11 ಗಂಟೆಗೆ ಬೈಕ್ ಜಾಥಾ ಆರಂಭವಾಗುವ ನಿರೀಕ್ಷೆ ಇದೆ. ಜಾಥಾ ಮಾಡಿದರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

English summary
The Most Awaited Mangaluru chalo that will enter Mangaluru city today at 11 AM. Four thousnad police deployed entire Dakshina Kannada to ensure tight security. The impact of this has put the general public in trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X