ಮಂಗ್ಳೂರಿನ ಮಾನಸ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ 14 ಮಂದಿ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 25 : ನಗರದ ಪಂಪ್ ವೆಲ್ ಲಕ್ಷ್ಮೀ ಆರ್ಕೆಡ್ ಕಟ್ಟಡದಲ್ಲಿರುವ ಮಾನಸ ರಿಕ್ರಿಯೇಷನ್ ವೀಡಿಯೋ ಗೇಮ್ ಕ್ಲಬ್ ಮೇಲೆ ಮಂಗಳವಾರ ರಾತ್ರಿ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ದಾಳಿ ವೇಳೆ ಅಕ್ರಮವಾಗಿ ವೀಡಿಯೋ ಗೇಮ್ ಜೂಜಾಟ ಆಡುತ್ತಿದ್ದ ಒಟ್ಟು 14 ಮಂದಿ ಹಾಗೂ ವೀಡಿಯೋ ಗೇಮ್ ಮೆಶಿನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Mangaluru ccb police raid on Manasa Recreation game Club 14 arrested

ಅಲಂಗಾರು ಗುಡ್ಡೆ ಸುಶಾಂತ್ ಬಂಗೇರ(24), ಕೋಟೆಕಾರು ಸಂದೇಶ್ (25), ಚಿಕ್ಕಮಂಗಳೂರು ದಾಸಪ್ಪ (30),ಪ್ರಶಾಂತ್ (31), ರಾಹುಲ್ (23), ಶಿವಾನಂದ (30), ಇಬ್ರಾಹಿಂ (46), ಪವನ್ ಕುಮಾರ್(24), ಮುಸ್ತಾಪ(22), ಮೊಹಮ್ಮದ್ ಇಕ್ಬಾಲ್(30), ವಸಂತ ಕುಮಾರ್(34), ಹರ್ಷಿತ್(25), ಪ್ರಕಾಶನ್ (30) , ಅಕ್ಬರ್ (45) ಬಂಧಿತ ಆರೋಪಿಗಳು.

ಈ ಬಂಧಿತರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು ರೂ. 32,100 ರು. ನಗದು ಹಾಗೂ ಜೂಜಾಟಕ್ಕೆ ಬಳಸಿದ 3 ವೀಡಿಯೋ ಗೇಮ್ ಮೆಶಿನ್ ಗಳು ಸೇರಿದಂತೆ ಹೀಗೆ ಒಟ್ಟು 1,15,100 ರು. ಮೊತ್ತದ ಸೊತ್ತನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The CCB police raided on Manasa Recreation Club a Video Game center, arrested 14 persons and seized Video game machines from at Pumpwell, here on January 24.
Please Wait while comments are loading...