ಮಂಗಳೂರು ಮೂಲದ ಬೆಡಗಿ ಶ್ರೀನಿಧಿ ಶೆಟ್ಟಿಗೆ ಮಿಸ್ ಸುಪ್ರನ್ಯಾಷನಲ್ ಕಿರೀಟ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 04 : ಮೂಲತಃ ಮಂಗಳೂರಿನ ಮೋಹಕ ಬೆಡಗಿ ಶ್ರೀನಿಧಿ ಶೆಟ್ಟಿ ಮಿಸ್ ಸುಪ್ರನ್ಯಾಷನಲ್ ಗೌರವಕ್ಕೆ ಪಾತ್ರರಾಗಿದ್ದಾರೆ. ಪೊಲೆಂಡ್ ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್-2016ರ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಸುಪ್ರನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡರು.

ಯಮಹಾ ಫ್ರಾನ್ಸಿಸ್ಕೋ ಮಿಸ್ ದಿವಾ ಸುಪ್ರನ್ಯಾಷನಲ್ 2016 ಕಿರೀಟ ಧರಿಸಿದ ಶ್ರೀನಿಧಿ ರಮೇಶ್ ಶೆಟ್ಟಿ ಮಂಗಳೂರು ಮೂಲಕ ಬೆಂಗಳೂರು ಬಾಲೆ. ಶ್ರೀನಿಧಿ ಮಿಸ್ ಸುಪ್ರಇಂಟರ್ ನ್ಯಾಷನಲ್ ವಿನ್ನರ್ ಆಗಿರುವ ಎರಡನೇ ಭಾರತೀಯ ರೂಪದರ್ಶಿ ಎನಿಸಿದರು. 2014ರಲ್ಲಿ ಆಶಾ ಭಟ್ ಈ ಪ್ರತಿಷ್ಠಿತ ಕಿರೀಟ ತೊಟ್ಟಿದ್ದರು.

Mangaluru beauty SrinidhiShetty bags 'Miss Supranational 2016' crown

ರಾಜಧಾನಿ ವಾರ್ಸಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವೆನುಜುವೆಲಾದ ವಲೇರಿಯಾ ರೂಪಸಿ ವೆಸ್ ಪೊಲಿ ಸುರಿನಾಮ್ ಚೆಲುವೆ ಜಾಲೀಸಾ ಪಿಗೋಟ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್-ಅಪ್ ಆದರು.

Mangaluru beauty SrinidhiShetty bags 'Miss Supranational 2016' crown

ದ್ವೀಪರಾಷ್ಟ್ರ ಶ್ರೀಲಂಕಾದ ಆರ್ನೆಲ್ಲಾ ಮಾರಿಯಮ್ ಜಯಸಿರಿ ಗುಣಶೇಖರ ಮತ್ತು ಹಂಗೇರಿಯಾದ ಕೊರಿನ್ನಾ ಕೋಕ್‍ಸಿಸ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

Mangaluru beauty SrinidhiShetty bags 'Miss Supranational 2016' crown

ಇನ್ನೂ ಒನ್ ಇಂಡಿಯಾ ಕನ್ನಡ ಜೊತೆ ಮಾತನಾಡಿದ್ದ ಶ್ರೀ ನಾರಾಯಣ ಗುರು ಇಂಗ್ಲೀಶ್ ಮೀಡಿಯಮ್ ಶಾಲೆಯ ಅಧ್ಯಾಪಕರ ವೃಂಧ, "ಶ್ರೀನಿಧಿ ಶೆಟ್ಟಿಯ ನಮ್ಮ ಶಾಲೆಯ ವಿಧ್ಯಾರ್ಥಿ. ಸುಪ್ರನ್ಯಾಷನಲ್ ಗೌರವಕ್ಕೆ ಪಾತ್ರರಾಗಿದ್ದಾರೆ ಎನ್ನುವುದನ್ನು ಕೇಳಿ ಬಹಳ ಸಂತೋಷ" ಎಂದು ಸಂತಸವನ್ನು ವೈಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's representative Srinidhi Shetty has been crowned Miss Supranational 2016, an international beauty pageant. This marks the second time that India has won the pageant following the win by Asha Bhat in 2014.
Please Wait while comments are loading...