ಮಂಗಳೂರಿನ ಮಹಿಳೆ ಅಮೆರಿಕದಲ್ಲಿ ಟೈಗರ್ ಶಾರ್ಕ್ ಗೆ ಬಲಿ

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 3: ಮಂಗಳೂರು ಮೂಲದ ಮಹಿಳೆಯೊಬ್ಬರು ಅಮೆರಿಕಾದಲ್ಲಿ ಟೈಗರ್ ಶಾರ್ಕ್ ದಾಳಿಗೆ ಬಲಿಯಾದ ಘಟನೆ ನಡೆದಿದೆ. ಅಮೆರಿಕಾದ ಕೋಸ್ಟರಿಕಾದಲ್ಲಿ ಈ ದುರ್ಘಟನೆ ನಡೆದಿದೆ.

ಮಂಗಳೂರು ಮೂಲದ ರೊಹಿನಾ ಭಂಡಾರಿ ಶಾರ್ಕ್ ದಾಳಿಯಲ್ಲಿ ಮೃತಪಟ್ಟ ದುರ್ದೈವಿ. ನವೆಂಬರ್ 30 ರಂದು ಈ ದುರ್ಘಟನೆ ಸಂಭವಿಸಿದೆ.

ಚಿತ್ರಗಳು : 'ಓಖಿ' ಚಂಡಮಾರುತದಿಂದ ಮಂಗಳೂರಲ್ಲಿ ಕಡಲ್ಕೊರೆತ

ಮಂಗಳೂರಿನ ಖ್ಯಾತ ವೈದ್ಯರಾದ ನಿತಿನ್ ಭಂಡಾರಿ ಅವರ ಸಹೋದರಿ ರೊಹಿನಾ ಭಂಡಾರಿ ಕಳೆದ ಕೆಲವು ವರ್ಷಗಳಿಂದ ಅಮೆರಿಕಾದಲ್ಲಿ ಪ್ರವಾಸದಲ್ಲಿದ್ದರು. ರೊಹಿನಾ ಭಂಡಾರಿ ಕೋಸ್ಟರಿಕಾದ ಕಡಲಲ್ಲಿ ಸ್ಕೂಬಾ ಡೈವಿಂಗ್ ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭಲ್ಲಿ ರೊಹಿನಾ ಅವರ ಮೇಲೆ ಟೈಗರ್ ಶಾರ್ಕ್ ದಾಳಿ ಮಾಡಿದೆ.

Rohina Bhandari

ಟೈಗರ್ ಶಾರ್ಕ್ ದಾಳಿಯಲ್ಲಿ ರೊಹಿನಾ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನೀರಿನಿಂದ ಮೇಲೆತ್ತಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ರೊಹಿನಾ ಮೃತಪಟ್ಟಿದ್ದಾರೆ.

ಇದೇ ವೇಳೆ ರೊಹಿನಾ ಅವರ ರಕ್ಷಣೆಗೆ ಧಾವಿಸಿದ್ದ ಸ್ಕೂಬಾ ಡೈವಿಂಗ್ ತರಬೇತುದಾರ ಜಿಮಿನೆಜ್ ಎಂಬವರು ಕೂಡ ಟೈಗರ್ ಶಾರ್ಕ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಓಖಿ: ಲಕ್ಷದ್ವೀಪ ಸಮೀಪ ಮಂಗಳೂರಿನ ಎರಡು ಬೋಟ್ ಮುಳುಗಡೆ

49 ವರ್ಷದ ರೊಹಿನಾ ಭಂಡಾರಿಯವರು ಅಮೆರಿಕಾದ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಫಿನಾನ್ಸ್ ಪದವಿಯನ್ನು ಪಡೆದಿದ್ದರು. ಏಷಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ ನಲ್ಲಿ ಮಾಸ್ಟರ್ ಆಫ್ ಬಿಜಿನೆಸ್ ಮ್ಯಾನೇಜ್ ಮೆಂಟ್ ಪದವಿ ಪಡೆದಿದ್ದರು. ಇವರು ಅಮೆರಿಕಾದಲ್ಲಿ ಸೇಲ್ಸ್ ಆಂಟ್ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rohina Bandari- Mangaluru based lady killed by a Tiger Shark while scuba diving in Costa Rica, America on November 30th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ