ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ನಂಬರ್ ಕೊಟ್ಟು 14 ಸಾವಿರ ಕಳಕೊಂಡ್ರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 18 : ಎಟಿಎಂ ಪಿನ್ ನಂಬರ್ ಬದಲಾವಣೆ ಮಾಡಬೇಕು ಎಂದು ಬಂದ ಕರೆ ನಂಬಿದ ವ್ಯಕ್ತಿ ತನ್ನ ಪಾಸ್‌ವರ್ಡ್ ನೀಡಿ 14 ಸಾವಿರ ರೂ. ಕಳೆದುಕೊಂಡ ಘಟನೆ ಮೂಲ್ಕಿಯಲ್ಲಿ ನಡೆದಿದೆ. ಈ ವಂಚನೆ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಹಳೆಯಂಗಡಿ ಸಮೀಪದ ಬೊಳ್ಳುರು ನಿವಾಸಿ ಸಿದ್ದಿಕ್ ಹಣ ಕಳೆದುಕೊಂಡವರು. ಸಿದ್ದಿಕ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿ ತಾನು ಕೆನರಾ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದು, ನಿಮ್ಮ ಎಟಿಎಂ ಕಾರ್ಡ್ ಪಿನ್ ಬದಲಾವಣೆ ಮಾಡಬೇಕಾಗಿದೆ. ಆದ್ದರಿಂದ, ಹಳೆಯ ಪಿನ್ ಕೊಡಿ ಎಂದು ಪಡೆದುಕೊಂಡು ವಂಚನೆ ಮಾಡಿದ್ದಾನೆ. [ಖಾತೆಗೆ ಕನ್ನ, ಒಂದೂವರೆ ಕೋಟಿ ಲೂಟಿ]

atm

ಕರೆ ಮಾಡಿದ್ದ ವ್ಯಕ್ತಿ ಕೆನರಾ ಬ್ಯಾಂಕ್‌ನವರು ಎಂದು ತಿಳಿದ ಸಿದ್ದಿಕ್ ತಮ್ಮ ಎಟಿಎಂ ಪಿನ್ ನಂಬರ್ ಕೊಟ್ಟಿದ್ದರು. ಪಿನ್ ನೀಡಿದ ಅರ್ಧಗಂಟೆಯ ಅವಧಿಯಲ್ಲಿಯೇ ಅವರ ಖಾತೆಯಿಂದ 14 ಸಾವಿರ ಹಣ ಡ್ರಾ ಆಗಿದೆ. ಈ ಕುರಿತು ಸಿದ್ದಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ಪೊಲೀಸ್ ಮಹಾನಿರ್ದೇಶಕರು 10 ಸಾವಿರ ಕಳೆದುಕೊಂಡಿದ್ದು ಹೇಗೆ?]

1 ಕೋಟಿ ಲೂಟಿ : ಕೆಲವು ದಿನಗಳ ಹಿಂದೆ ಕೆನಡಾದಲ್ಲಿರುವ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ ಹ್ಯಾಕರ್‌ಗಳು ಮಣಿಪಾಲದ ಸಿಂಡಿಕೇಟ್ ಬ್ಯಾಂಕ್‌ನಲ್ಲಿದ್ದ ಅವರ ಖಾತೆಯಿಂದ 1 ಕೋಟಿ ರೂ. ದೋಚಿದ್ದರು. [ಬೆಂಗಳೂರು : ಸೈಬರ್ ಕ್ರೈಂ ಪೊಲೀಸ್ ಠಾಣೆ ಹೇಗಿದೆ ಗೊತ್ತಾ?]

ಪೊಲೀಸರಿಗೆ ವಂಚನೆ : ಕೆಡ್ರಿಟ್ ಕಾರ್ಡ್ ವಿವರ ಕೇಳಿದವರಿಗೆ ಎಲ್ಲಾ ವಿವರಗಳನ್ನು ಕೊಟ್ಟು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು 10 ಸಾವಿರ ಹಣ ಕಳೆದುಕೊಂಡಿದ್ದರು. [ಎಟಿಎಂನೊಳಗೆ ಕಾರ್ಡ್ ಸಿಕ್ಕೊಂಡ್ರೆ ಏನು ಮಾಡೊದು?]

English summary
Mangaluru : Mulki based Siddik lost Rs 14,000 in an ATM fraud. Complaint registered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X