ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್

Posted By:
Subscribe to Oneindia Kannada

ಮಂಗಳೂರು, ಅಕ್ಟೋಬರ್ 11: ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪ.ಪೂ. ಕಾಲೇಜು ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ 13ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ನೂಜಿ ಬಾಳ್ತಿಲದ ಬೆಥನಿ ಸಂಯುಕ್ತ ಪಿ.ಯು. ಕಾಲೇಜಿನಲ್ಲಿ ಈ ಕ್ರೀಡಾಕೂಟ ನಡೆದಿತ್ತು.

ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಬೆಥನಿ ಸಂಯುಕ್ತ ಪಿ.ಯು. ಕಾಲೇಜು ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ. ಕಾಲೇಜು, ಉಜಿರೆ ಪಡೆದುಕೊಂಡಿದೆ.

Mangaluru: Alvas PU college won district level mountain race

ಬಾಲಕರ ವಿಭಾಗದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳಾದ ಶಶಿಧರ್ ಬಿ.ಎಲ್( ಪ್ರಥಮ), ಶಂಕ್ರಪ್ಪ (ದ್ವಿತೀಯ), ರಕ್ಷಿತ್ ಆರ್ (ತೃತೀಯ), ಮಿಲನ್(4ನೇ ಸ್ಥಾನ), ಹರ್ಷಿತ್ ಕೆ - ಸರ್ಕಾರಿ ಪ.ಪೂ. ಕಾಲೇಜು, ಬೆಟ್ಟಂಪಾಡಿ (5ನೇ ಸ್ಥಾನ), ಬಸವರಾಜ್ ಗೋಡಿ - ಆಳ್ವಾಸ್ (6ನೇ ಸ್ಥಾನ) ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿನಿಯರಾದ ಪ್ರಿಯಾ ಎಲ್.ಡಿ (ಪ್ರಥಮ), ಸಂಧ್ಯಾ ಕೆ.ಆರ್ (ದ್ವಿತೀಯ), ನಂದಿನಿ (ತೃತೀಯ), ರಕ್ಷಿತಾ (4ನೇ ಸ್ಥಾನ), ಎಸ್.ಡಿ.ಎಂ. ಉಜಿರೆ ವಿದ್ಯಾರ್ಥಿನಿಯರಾದ ಸಿಂಚನಾ (5ನೇ ಸ್ಥಾನ), ತ್ರಿಷಾ (6ನೇ ಸ್ಥಾನ) ಪಡೆದುಕೊಂಡಿದ್ದಾರೆ.

ವಿಜೇತ ಕ್ರೀಡಾಪಟುಗಳು ನವೆಂಬರಿನಲ್ಲಿ 11 ರಿಂದ 13 ರವರೆಗೆ ಬ್ರಹ್ಮಾವರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಗುಡ್ಡಗಾಡು ಓಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru: Alvas PU College emerges first in mountain race in both Boys and Girls race held at Bethany PU college.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ