ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ : ಹೂ, ತರಕಾರಿ, ಬೆಲ್ಲಕ್ಕೆ ಬೇಡಿಕೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 24 : ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಎಲ್ಲೆಡೆ ಸಿದ್ಧತೆ ಭರದಿಂದ ಸಾಗುತ್ತಿದೆ. ಮಂಗಳೂರು ನಗರದ ಕದ್ರಿ ಮಂಜುನಾಥ ಕ್ಷೇತ್ರದಿಂದ ಹಿಡಿದು ನಗರದ ಗಲ್ಲಿಗಲ್ಲಿಗಳಲ್ಲಿಯೂ ಜನ್ಮಾಷ್ಟಮಿಯ ಸಂಭ್ರಮ, ಭಕ್ತಿಯ ಪರಾಕಾಷ್ಟೆ ಮೇಳೈಸತೊಡಗಿದೆ.

ನಗರದ ಮಠ, ಮಂದಿರ ಮಾತ್ರವಲ್ಲದೆ ಮನೆ-ಮನೆಗಳಲ್ಲಿ ಕೃಷ್ಣ ನಾಮ ಸ್ಮರಣೆ, ಜಪ-ತಪ ಆರಂಭವಾಗಿದೆ. ಕಂದ ಕೃಷ್ಣನ ತೊಟ್ಟಿಲ ಸೇವೆಗೆ ಸಾವಿರ ಸಾವಿರ ತಾಯಂದಿರು ಸಿದ್ಧವಾಗುತ್ತಿದ್ದಾರೆ. ಶೃಂಗಾರ ಪ್ರಿಯ ಮುಕುಂದನ ಅಲಂಕಾರಕ್ಕೆ ಲೋಡುಗಟ್ಟಲೆ ಹೂವು ನಗರಕ್ಕೆ ಬಂದಿದೆ.[ಬಸವನಗುಡಿಯ ಶ್ರೀಪುತ್ತಿಗೆ ಮಠದಲ್ಲಿ ವೈಭವದ ಶ್ರೀಕೃಷ್ಣ ಲೀಲೋತ್ಸವ]

ಸೆಂಟ್ರಲ್ ಮಾರ್ಕೆಟ್, ಕಾರ್ಸ್ಟ್ರೀಟ್ ಮಾರ್ಕೆಟ್, ಕದ್ರಿ, ಉರ್ವ, ಕಾವೂರು ಮುಂತಾದ ಕಡೆಗಳ ಮಾರುಕಟ್ಟೆಗಳಲ್ಲಿ ರಾಶಿ-ರಾಶಿ ಹೂ ಶೇಖರಣೆಗೊಂಡಿದೆ. ಕೃಷ್ಣ ಆರಾಧನೆಯಲ್ಲಿ ತುಳಿಸಿಗೆ ಪ್ರಧಾನ ಸ್ಥಾನವಿರುವುದರಿಂದ ಹೂವಿನ ಜತೆಗೆ ಟನ್ ಗಟ್ಟಲೆ ತುಳಸಿ ಮಾಲೆ, ತುಳಸಿದಳ ಮಾರಕಟ್ಟೆಗೆ ಬಂದಿದೆ.[ಕೃಷ್ಣ ಜನ್ಮಾಷ್ಟಮಿಗೂ ಮುನ್ನ ಮುರಾರಿಯ ಧ್ಯಾನ]

ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಮಳೆಯೂ ಕಡಿಮೆಯಾಗಿರುವುದರಿಂದ ಖರೀದಿಗೆ ಅನುಕೂಲವಾಗಿದ್ದು, ಎಲ್ಲೆಡೆ ಜನಜಂಗುಳಿ ಕಂಡು ಬರುತ್ತಿದೆ. ಹೂವಿನ ಜೊತೆ ತರಕಾರಿಗೂ ಹೆಚ್ಚಿನ ಬೇಡಿಕೆ ಇದೆ. ಅಷ್ಟಮಿಯಂದು ಪಾಯಸ ಸವಿಯುವುದು ಸಾಮಾನ್ಯ. ಆದ್ದರಿಂದ, ಬೇಳೆ, ಬೆಲ್ಲದ ವ್ಯಾಪಾರವೂ ಜೋರಾಗಿದೆ....[ಶ್ರೀ ಕೃಷ್ಣ ಜಯಂತಿಯಂದು ಪೂಜೆ ಮಾಡುವುದು ಹೇಗೆ?]

ಹೂವಿನ ಮಾರಾಟ ಜೋರಾಗಿದೆ

ಹೂವಿನ ಮಾರಾಟ ಜೋರಾಗಿದೆ

ಕೃಷ್ಣನಿಗೆ ಪಾರಿಜಾತ ಪ್ರಿಯವಾದ ಹೂವು. ನಗರದ ಬೀದಿ ಬೀದಿಗಳಲ್ಲಿ ಕೂಡ ಹೂವಿನ ಮಾರಾಟ ಜೋರಾಗಿ ನಡೆಯುತ್ತಿದೆ. ಸ್ಟೇಟ್ ಬ್ಯಾಂಕ್, ಮಾರ್ಕೆಟ್ ರಸ್ತೆ, ಕೆಎಸಾರ್ಟಿಸಿ , ಉರ್ವ ಮಾರ್ಕೆಟ್ , ಉರ್ವಸ್ಟೋರ್,ಕಾವೂರು, ಕೋಡಿಕಲ್, ಮಂಗಳಾದೇವಿ ಮುಂತಾದ ಕಡೆಗಳಲ್ಲಿ ಬೀದಿ ಬದಿಯಲ್ಲಿಯೂ ಹೂವಿನ ಮಾರಾಟ ಜೋರಾಗಿ ನಡೆಯುತ್ತಿದೆ.

ಅಲಂಕಾರ ನಡೆಯುತ್ತಿದೆ

ಅಲಂಕಾರ ನಡೆಯುತ್ತಿದೆ

ಕದ್ರಿ ದೇವಾಲಯದ ಮುಖ್ಯ ದ್ವಾರದಿಂದ ಹಿಡಿದು ದೇಗುಲದವರೆಗೆ ರಸ್ತೆಯ ಎರಡು ಬದಿಗಳಲ್ಲಿ ಬಣ್ಣದ ಪತಾಕೆಗಳನ್ನು ಕಟ್ಟುವ, ಬೆಳಕಿನ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಸ್ಥಳೀಯ ಯುವಕರು, ಫ್ರೆಂಡ್ಸ್ ಕ್ಲಬ್, ಕದ್ರಿ ಕ್ರಿಕೆಟರ್ಸ್ ಸದಸ್ಯರು ನಡೆಸುತ್ತಿದ್ದಾರೆ.

107 ನೇ ವರ್ಷದ ಕೃಷ್ಣ ಜನ್ಮಾಷ್ಟಮಿ

107 ನೇ ವರ್ಷದ ಕೃಷ್ಣ ಜನ್ಮಾಷ್ಟಮಿ

ಅತ್ತಾವರದಲ್ಲಿ 107ನೇ ವರ್ಷದ ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ನಡೆಯುತ್ತಿದೆ. ನಗರದಾದ್ಯಂತ ರಸ್ತೆಗಳಲ್ಲಿ ಕವಾನು ನಿರ್ಮಾಣ, ಬಣ್ಣದ ನೀರು ತುಂಬಿದ ಅಲಂಕೃತ ಮಡಕೆಗಳನ್ನು ಕಟ್ಟುವ ಕೆಲಸ, ಬೆಳಕಿನ ವ್ಯವಸ್ಥೆ ಸಿದ್ದತೆಗಳು ನಡೆಯುತ್ತಿವೆ.

ಲೋಡುಗಟ್ಟಲೆ ಹೂವು ನಗರಕ್ಕೆ ಬಂದಿದೆ

ಲೋಡುಗಟ್ಟಲೆ ಹೂವು ನಗರಕ್ಕೆ ಬಂದಿದೆ

ನಗರದ ಮಠ, ಮಂದಿರ ಮಾತ್ರವಲ್ಲದೆ ಮನೆ-ಮನೆಗಳಲ್ಲಿ ಕೃಷ್ಣ ನಾಮ ಸ್ಮರಣೆ, ಜಪ-ತಪ ಆರಂಭವಾಗಿದೆ. ಶೃಂಗಾರ ಪ್ರಿಯ ಮುಕುಂದನ ಅಲಂಕಾರಕ್ಕೆ ಲೋಡುಗಟ್ಟಲೆ ಹೂವು ನಗರಕ್ಕೆ ಆಗಮಿಸಿದೆ. ಮಳೆಯೂ ಕಡಿಮೆ ಇರುವುದರಿಂದ ವ್ಯಾಪಾರ ಜೋರಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The stage is set for Krishna Janmashtami celebration in Mangaluru city.
Please Wait while comments are loading...